BIG NEWS: ಲೆಫ್ಟಿನೆಂಟ್ ಗವರ್ನರ್ ಭೇಟಿ ಮಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಭೇಟಿಯಾಗಿದ್ದಾರೆ.
ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಇಂದು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (Lieutenant Governor VK Saxena) ಅವರನ್ನು ಭೇಟಿಯಾಗಿದ್ದಾರೆ. ಕಾರ್ಯಕ್ರಮವೊಂದಕ್ಕೆ ಸಿಂಗಾಪುರಕ್ಕೆ ಭೇಟಿ ನೀಡಲು ಮುಖ್ಯಮಂತ್ರಿಗೆ ಅನುಮತಿ ನಿರಾಕರಣೆ ಮಾಡಿ ಮತ್ತು ರಾಷ್ಟ್ರ ರಾಜಧಾನಿಯ ಅಬಕಾರಿ ನೀತಿಯ ಬಗ್ಗೆ ಕೇಂದ್ರೀಯ ಸಂಸ್ಥೆ ತನಿಖೆಗೆ ಅಡ್ಡಿಪಡಿಸಿದ ಗಲಾಟೆಯ ಮಧ್ಯೆ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರು ಶುಕ್ರವಾರ ಭೇಟಿಯಾಗಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ನಡುವೆ ಜಟಾಪಟಿಗಳು ನಡೆಯುತ್ತಿರುವ ಹೊತ್ತಲ್ಲೇ ಕೇಜ್ರಿವಾಲ್ , ದೆಹಲಿ ಲೆಫ್ಟಿನೆಂಟ್ ಗವರ್ನರ್ ನ್ನು ಭೇಟಿ ಮಾಡಿದ್ದಾರೆ. ಕಳೆದ ವಾರ ದೆಹಲಿಯ ಮದ್ಯ ನೀತಿ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಒತ್ತಾಯಿಸಿದ್ದರು. ಅಬಕಾರಿ ನೀತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಸಕ್ಸೇನಾ, ಕೇಜ್ರಿವಾಲ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಮನೀಶ್ ಸಿಸೋಡಿಯಾ ಅವರ ಹೆಸರನ್ನೂ ಉಲ್ಲೇಖಿಸಿದ್ದರು.ಇದಾದನಂತರ ಸಭೆಯೊಂದಕ್ಕೆ ಕೇಜ್ರಿವಾಲ್ ಗೈರಾಗಿದ್ದರು.
ಲೆಫ್ಟಿನೆಂಟ್ ಗವರ್ನರ್ ಭೇಟಿಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್ ವರ್ಲ್ಡ್ ಸಿಟೀಸ್ ಸಮಾವೇಶದಲ್ಲಿ ಭಾಗವಹಿಸಿದ್ದರೆ ಚೆನ್ನಾಗಿತ್ತು. ನಾನು ಅಲ್ಲಿ ಹೋಗಿದ್ದರೆ ಭಾರತದಲ್ಲಿ ನಾನು ಮಾಡಿದ ಕೆಲಸಗಳ ಬಗ್ಗೆ ಜಗತ್ತಿಗೇ ತೋರಿಸಿಕೊಡುತ್ತಿದ್ದೆ ಎಂದು ಹೇಳಿದ್ದು ಇದಕ್ಕಾಗಿ ನಾನು ಯಾರನ್ನೂ ದೂರುವುದಿಲ್ಲ ಎಂದು ಹೇಳಿದ್ದಾರೆ.
#WATCH | Delhi CM Arvind Kejriwal arrived at the residence of Lt Governor Vinai Kumar Saxena for the weekly meeting pic.twitter.com/9isa9y9ZIc
— ANI (@ANI) July 29, 2022
ಒಂದು ದಿನದ ಮುಂಚೆ ದೆಹಲಿ ಸರ್ಕಾರ ಕೇಜ್ರಿವಾಲ್ ಅವರನ್ನು ಸಿಂಗಾಪುರಕ್ಕೆ ಹೋಗುವುದನ್ನು ತಡೆದುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದು, ಕೇಂದ್ರ ಸರ್ಕಾರದ ಈ ನಿರ್ಧಾರ ದೇಶಮತ್ತು ನಗರಕ್ಕೆ ಮಾಡಿದ ಅವಮಾನ ಎಂದಿತ್ತು. ಲೆಫ್ಟಿನೆಂಟ್ ಗವರ್ನರ್ ಭೇಟಿಗಾಗಿ ಆಪ್ ಸರ್ಕಾರ ಜೂನ್ 7ರಂದು ಕೇಂದ್ರದ ಅನುಮತಿ ಕೋರಿ ಕಡತ ಕಳುಹಿಸಿದ್ದು, ಇದಕ್ಕೆ ಜುಲೈ 21ರಂದು ಪ್ರತಿಕ್ರಿಯೆ ಲಭಿಸಿದೆ.
ಇದು ತುಂಬಾ ತಡವಾಗಿದ್ದು ಮಾತ್ರವಲ್ಲದೆ ಸಿಂಗಾಪುರಕ್ಕೆ ಹೋಗುವ ಪ್ರಯಾಣದ ಔಪಚಾರಿಕತೆಗಳನ್ನು ಮುಗಿಸಲು ಜುಲೈ 20 ಕೊನೆದಿನವಾಗಿತ್ತು ಎಂದು ದೆಹಲಿ ಸರ್ಕಾರ ಹೇಳಿದೆ.
Published On - 4:39 pm, Fri, 29 July 22