Big News: ಮುಸ್ಲಿಂ ದಂಪತಿಯಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ

| Updated By: ಸುಷ್ಮಾ ಚಕ್ರೆ

Updated on: Sep 21, 2022 | 11:27 AM

ಚೆನ್ನೈನ ಮುಸ್ಲಿಂ ದಂಪತಿ ದೇವಸ್ಥಾನದ ಆವರಣದಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದ್ದಾರೆ. ಈ ದಂಪತಿ ನೀಡಿದ ಒಟ್ಟು ಮೊತ್ತದಲ್ಲಿ ರೂ. ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್‌ಗೆ 15 ಲಕ್ಷ ರೂ. ಮೀಸಲಿಡಲಾಗಿದೆ.

Big News: ಮುಸ್ಲಿಂ ದಂಪತಿಯಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ
ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ಮುಸ್ಲಿಂ ದಂಪತಿ
Follow us on

ತಿರುಪತಿ: ದೇಶಾದ್ಯಂತ ಧಾರ್ಮಿಕ ಸಂಘರ್ಷ ಹೆಚ್ಚಾಗಿರುತ್ತಿರುವ ಬೆನ್ನಲ್ಲೇ ಅಪರೂಪದ ರೀತಿಯಲ್ಲಿ ಮುಸ್ಲಿಂ ದಂಪತಿ (Muslim Couple) ತಿರುಮಲ ತಿರುಪತಿ ದೇವಸ್ಥಾನಕ್ಕೆ (Tirupati Tirumala Temple) 1.2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅಬ್ದುಲ್ ಘನಿ ಮತ್ತು ನುಬಿನಾ ಬಾನು ಮಂಗಳವಾರ ತಿರುಮಲ ತಿರುಪತಿ ದೇವಸ್ಥಾನಂ (TTD)ಗೆ ಚೆಕ್ ನೀಡಿದ್ದಾರೆ. ತಿರುಪತಿ ವೆಂಕಟೇಶ್ವರ ದೇವಸ್ಥಾನ ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.

ಚೆನ್ನೈನ ಮುಸ್ಲಿಂ ದಂಪತಿ ದೇವಸ್ಥಾನದ ಆವರಣದಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದ್ದಾರೆ. ಈ ದಂಪತಿ ನೀಡಿದ ಒಟ್ಟು ಮೊತ್ತದಲ್ಲಿ ರೂ. ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್‌ಗೆ 15 ಲಕ್ಷ ರೂ. ಮೀಸಲಿಡಲಾಗಿದೆ. ಈ ಟ್ರಸ್ಟ್​ ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡುವ ಸಾವಿರಾರು ಭಕ್ತರಿಗೆ ಉಚಿತ ಆಹಾರವನ್ನು ನೀಡುತ್ತದೆ. ದೇಣಿಗೆಯಾಗಿ ನೀಡಲಾದ ಉಳಿದ 87 ಲಕ್ಷ ರೂ. ಪದ್ಮಾವತಿ ಅತಿಥಿ ಗೃಹದಲ್ಲಿ ಅಡುಗೆಮನೆಯಲ್ಲಿ ಹೊಸ ಪೀಠೋಪಕರಣಗಳು ಮತ್ತು ಸಾಮಗ್ರಿಗಳಿಗಾಗಿ ನೀಡಲಾಗುತ್ತದೆ.

ಇದನ್ನೂ ಓದಿ: ತಿರುಪತಿ ತಿರುಮಲ ದೇವಸ್ಥಾನಕ್ಕೆ ರೂ. 1.5 ಕೋಟಿ ದೇಣಿಗೆ ನೀಡಿದರು ಮುಕೇಶ್ ಅಂಬಾನಿ

ಬಾಲಾಜಿ ದೇವಸ್ಥಾನ ಎಂದೇ ಪ್ರಸಿದ್ಧವಾಗಿರುವ ಈ ತಿರುಪತಿ ತಿರುಮಲ ದೇವಸ್ಥಾನಕ್ಕೆ ಉದ್ಯಮಿ ಅಬ್ದುಲ್ ಘನಿ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿ ಅವರು ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಈ ದೇವಾಲಯದ ಆವರಣದಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸಲು ಬಹಳ ಆಯಾಮದ ಟ್ರಾಕ್ಟರ್-ಮೌಂಟೆಡ್ ಸ್ಪ್ರೇಯರ್ ಅನ್ನು ದಾನ ಮಾಡಿದ್ದರು. ಈ ಹಿಂದೆ ತಿರುಪತಿ ದೇವಸ್ಥಾನಕ್ಕೆ ತರಕಾರಿಯನ್ನು ಸಾಗಿಸಲು 35 ಲಕ್ಷ ರೂ. ಮೌಲ್ಯದ ರೆಫ್ರಿಜರೇಟರ್ ಟ್ರಕ್ ಅನ್ನು ಕೊಡುಗೆಯಾಗಿ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ