ತಿರುಪತಿ ತಿರುಮಲ ದೇವಸ್ಥಾನಕ್ಕೆ ರೂ. 1.5 ಕೋಟಿ ದೇಣಿಗೆ ನೀಡಿದರು ಮುಕೇಶ್ ಅಂಬಾನಿ

ಭಾರತದ ಕುಬೇರ ತಿರುಮಲ ತಿರುಪತಿ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿ ತಿರುಮಲದಲ್ಲಿರುವ ಎಸ್ ವಿ ಗೋಶಾಲಾಗೆ ಭೇಟಿ ನೀಡಿದರು.

TV9kannada Web Team

| Edited By: Arun Belly

Sep 16, 2022 | 3:27 PM

ತಿರುಪತಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮತ್ತು ಭಾರತದ ಎರಡನೇ ಅತಿದೊಡ್ಡ ಶ್ರೀಮಂತ ಮುಕೇಶ್ ಅಂಬಾನಿ ಅವರು ಶುಕ್ರವಾರ ತಿರುಪತಿಗೆ ಆಗಮಿಸಿ ತಿಪ್ಪಪ್ಪನ ದರ್ಶನ ಪಡೆದರು. ವಿಡಿಯೋನಲ್ಲಿ ಮುಕೇಶ್ ಅಂಬಾನಿ (Mukesh Ambani) ಜೊತೆ ಸಂಸದರಾದ ಗರುಮೂರ್ತಿ (Gurumurthy), ವಿಜಯಸಾಯಿರೆಡ್ಡಿ, ಚಂದ್ರಗಿರಿಯ ಶಾಸಕ ಸಿ ಭಾಸ್ಕರ ರೆಡ್ಡಿ ಮೊದಲಾದವರನ್ನು ಕಾಣಬಹುದು. ಭಾರತದ ಕುಬೇರ ತಿರುಮಲ ತಿರುಪತಿ ದೇವಸ್ಥಾನದಲ್ಲಿ (Tirupati Tirumala Devasthanam) ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಿ ತಿರುಮಲದಲ್ಲಿರುವ ಎಸ್ ವಿ ಗೋಶಾಲಾಗೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಅವರು ದೇವಸ್ಥಾನಕ್ಕೆ ರೂ. 1.5 ಕೋಟಿ ದೇಣಿಗೆ ನೀಡಿದರು.

Follow us on

Click on your DTH Provider to Add TV9 Kannada