ಜೆಡಿ(ಎಸ್) ಶಾಸಕರ ವಿರುದ್ಧ ಮತ್ತೇ ಹರಿಹಾಯ್ದ ಸಂಸದೆ ಸುಮಲತಾ ಅಂಬರೀಷ್

ಜೆಡಿ(ಎಸ್) ಶಾಸಕರ ವಿರುದ್ಧ ಮತ್ತೇ ಹರಿಹಾಯ್ದ ಸಂಸದೆ ಸುಮಲತಾ ಅಂಬರೀಷ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 16, 2022 | 2:21 PM

ಸಂಸತ್ತಿನ ಅಧಿವೇಶನ ನಡೆದಾಗಲೆಲ್ಲ ತಾವು ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತೇನೆ. ಇದೇ ಕೆಲಸವನ್ನು ಜೆಡಿ(ಎಸ್) ಶಾಸಕರು ವಿಧಾನಸಭೆಯಲ್ಲಿ ಯಾಕೆ ಮಾಡುತ್ತಿಲ್ಲ ಎಂದು ಸುಮಲತಾ ಪ್ರಶ್ನಿಸಿದರು.

ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಮತ್ತು ಜೆಡಿ(ಎಸ್) ಶಾಸಕರ ನಡುವಿನ ಜಟಾಪಟಿ ಮುಂದುವರಿದಿದೆ. ಶುಕ್ರವಾರ ದಿಶಾ ಸಭೆಗೆ ಮೊದಲು ಸುದ್ದಿಗಾರರೊಂದಿಗೆ ಮಾತಾಡಿದ ಸುಮಲತಾ ಅವರು ಜೆಡಿ(ಎಸ್) ಶಾಸಕರು (MLA ) ಎಷ್ಟು ಸಲ ಮಂಡ್ಯ (Mandya) ಜನತೆಯ ಸಮಸ್ಯೆಗಳನ್ನು ವಿಧಾನ ಸಭೆಯಲ್ಲಿ ಚರ್ಚಿಸಿದ್ದಾರೆ? ಇದಕ್ಕೆ ಮೊದಲು ಅವರು ಎರಡು ವರ್ಷಗಳ ಕಾಲ ದಿಶಾ ಸಭೆಯಲ್ಲಿ ಭಾಗಹಿಸುತ್ತಿರಲಿಲ್ಲ. ಸಂಸತ್ತಿನ ಅಧಿವೇಶನ ನಡೆದಾಗಲೆಲ್ಲ ತಾವು ಜನರ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತೇನೆ. ಇದೇ ಕೆಲಸವನ್ನು ಜೆಡಿ(ಎಸ್) ಶಾಸಕರು ವಿಧಾನಸಭೆಯಲ್ಲಿ ಯಾಕೆ ಮಾಡುತ್ತಿಲ್ಲ ಎಂದು ಸುಮಲತಾ ಪ್ರಶ್ನಿಸಿದರು.