ಜೆಹನಾಬಾದ್: ಬಿಹಾರದ ಜೆಹಾನಾಬಾದ್ ಜಿಲ್ಲೆಯಲ್ಲಿರುವ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ ಉಂಟಾಗಿ 7 ಜನರು ಮೃತಪಟ್ಟಿದ್ದಾರೆ. ಈ ದೇವಸ್ಥಾನದಲ್ಲಿ ಆ ದಿನ ನಿಖರವಾಗಿ ಏನಾಯಿತು ಎಂಬುದನ್ನು ತೋರಿಸುವ ವೀಡಿಯೊ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಾಲ್ತುಳಿತದಿಂದ 7 ಜನರು ಸಾವನ್ನಪ್ಪಿದ್ದು, 16 ಜನರಿಗೆ ಗಾಯಗಳಾಗಿದೆ. ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಿರಿದಾದ ಹಾದಿಯಿಂದ ಜನರು ಹೊರಬರಲು ಹೆಣಗಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರು ಕಿರುಚುತ್ತಿದ್ದಾರೆ ಮತ್ತು ವೈರಲ್ ವೀಡಿಯೊದಲ್ಲಿ ತಮ್ಮ ಜೊತೆಗೆ ಬಂದವರನ್ನು ಆತಂಕದಿಂದ ಹುಡುಕುತ್ತಿದ್ದಾರೆ.
ಇದಕ್ಕೂ ಮುನ್ನ ಆಗಸ್ಟ್ 11 ರಂದು ಬಾಬಾ ಸಿದ್ಧೇಶ್ವರ ನಾಥ ದೇವಸ್ಥಾನದಲ್ಲಿ ಕಾಲ್ತುಳಿತದಲ್ಲಿ 6 ಮಹಿಳೆಯರು ಸೇರಿದಂತೆ 7 ಜನರು ಸಾವನ್ನಪ್ಪಿದ್ದರು ಮತ್ತು 16 ಮಂದಿ ಗಾಯಗೊಂಡಿದ್ದರು. ಭಾನುವಾರ ರಾತ್ರಿ 11.30 ರ ಸುಮಾರಿಗೆ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಲಂಕೃತಾ ಪಾಂಡೆ ಅವರು ಸಾವುನೋವುಗಳು ಮತ್ತು ಗಾಯಗಳನ್ನು ಖಚಿತಪಡಿಸಿದ್ದಾರೆ. ದೇವಾಲಯದ ಭದ್ರತಾ ಸಿಬ್ಬಂದಿ ತ್ವರಿತವಾಗಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎನ್ನಲಾಗಿದೆ.
ಇದನ್ನೂ ಓದಿ: 10 ಹುದ್ದೆಗೆ ನೂರಾರು ಯುವಕರ ನೂಕುನುಗ್ಗಲು; ಇಂಟರ್ವ್ಯೂ ವೇಳೆ ಕಾಲ್ತುಳಿತದ ವಿಡಿಯೋ ವೈರಲ್
“ಭಾನುವಾರ ರಾತ್ರಿ 11.30ರ ಸುಮಾರಿಗೆ ಜೆಹಾನಾಬಾದ್‌ನ ಬರಾಬರ್ ಪಹಾಡಿ ಪ್ರದೇಶದ ಬಾಬಾ ಸಿದ್ದೇಶ್ವರ ನಾಥ ದೇವಾಲಯದಲ್ಲಿ ಕಾಲ್ತುಳಿತದಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಆರು ಮಹಿಳೆಯರು ಸೇರಿದ್ದಾರೆ” ಎಂದು ಅವರು ಹೇಳಿದರು.
VIDEO | A video of stampede at Siddheshwarnath Temple in Jehanabad has surfaced. Seven people died and 16 got injured in the incident. The stampede occurred after an altercation between pilgrims and flower seller.
(Source: Third Party)#JehanabadStampede pic.twitter.com/m4MTPhj3ny
— Press Trust of India (@PTI_News) August 13, 2024
ಮೃತರನ್ನು ಪ್ಯಾರೆ ಪಾಸ್ವಾನ್ (30), ನಿಶಾ ದೇವಿ (30), ಪುನಮ್ ದೇವಿ (30), ನಿಶಾ ಕುಮಾರಿ (21), ಮತ್ತು ಸುಶೀಲಾ ದೇವಿ (64) ಎಂದು ಗುರುತಿಸಲಾಗಿದೆ. ಒಬ್ಬ ಮಹಿಳೆಯ ಗುರುತು ಇನ್ನೂ ತಿಳಿದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರ: ಸಿದ್ದೇಶ್ವರನಾಥ ಮಂದಿರದಲ್ಲಿ ಕಾಲ್ತುಳಿತ, 7 ಭಕ್ತರ ಸಾವು
ಈ ಘಟನೆಯ ಬಗ್ಗೆ ಇಹರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ