ಬಿಹಾರ: ಸಿದ್ದೇಶ್ವರನಾಥ ಮಂದಿರದಲ್ಲಿ ಕಾಲ್ತುಳಿತ, 7 ಭಕ್ತರ ಸಾವು
ಬಿಹಾರದ ಸಿದ್ದೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ. 7 ಮಂದಿ ಸಾವನ್ನಪ್ಪಿದ್ದು 10 ಜನರು ಗಾಯಗೊಂಡಿದ್ದಾರೆ. ಸ್ಥಳೀಯ ಮಖ್ದುಂಪುರ್ ಆಸ್ಪತ್ರೆ ಹಾಗೂ ಜೆಹಾನಾಬಾದ್ ಸದರ್ ಆಸ್ಪತ್ರೆಯಲ್ಲಿ ಹಲವು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರಾವಣಮಾಸದಲ್ಲಿ ಬಾಬಾ ಸಿದ್ದೇಶ್ವರನಾಥ ದೇವಸ್ಥಾನಕ್ಕೆ ನೀರು ಅರ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ, ಭಾನುವಾರ ರಾತ್ರಿಯಿಂದಲೇ ಜನರು ಬರುತ್ತಿದ್ದರು.
ಬಿಹಾರದ ಜೆಹಾನಾಬಾದ್‌ನಲ್ಲಿ ಶ್ರಾವಣದ ನಾಲ್ಕನೇ ಸೋಮವಾರದಂದು ಸಿದ್ದೇಶ್ವರನಾಥ ದೇವಾಲಯಕ್ಕೆ ಪೂಜೆ ಸಲ್ಲಿಸಲು ಹೋಗಿದ್ದ ಭಕ್ತಾದಿಗಳು ಕಾಲ್ತುಳಿದಿಂದ ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರು ಸೇರಿ 7 ಮಂದಿ ಮೃತಪಟ್ಟಿದ್ದಾರೆ. ಏಳು ಜನರ ಸಾವನ್ನು ಆಡಳಿತ ದೃಢಪಡಿಸಿದೆ. ಅಲ್ಲದೆ ಹಲವರಿಗೆ ಗಾಯಗಳಾಗಿವೆ. ಸಾವನ ನಾಲ್ಕನೇ ಸೋಮವಾರದ ನಿಮಿತ್ತ ಬಾಬಾ ಸಿದ್ದೇಶ್ವರನಾಥ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ತುಂಬಾ ಜನರು ಇದ್ದ ಕಾರಣ ನೂಕುನುಗ್ಗಲು ಏರ್ಪಟ್ಟಿತ್ತು, ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಪೊಲೀಸ್-ಆಡಳಿತ ತಂಡವು ಸ್ಥಳಕ್ಕೆ ಧಾವಿಸಿದ್ದು, ತಕ್ಷಣವೇ ಪರಿಹಾರ ಕಾರ್ಯವನ್ನು ಪ್ರಾರಂಭಿಸಿತು. ಶ್ರಾವಣ ಮಾಸದ ಸೋಮವಾರದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಾರೆ.
ರಾಬರ್ ಬೆಟ್ಟ ಹತ್ತುವಾಗ ಮೆಟ್ಟಿಲುಗಳ ಮೇಲೆ ಹಠಾತ್ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಜನರು ಒಬ್ಬರನ್ನೊಬ್ಬರು ತುಳಿದುಕೊಳ್ಳುತ್ತಾ ಅಲ್ಲಿ ಇಲ್ಲಿ ಓಡತೊಡಗಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಷ್ಟರಲ್ಲಿ ಏಳು ಮಂದಿ ಸಾವನ್ನಪ್ಪಿದ್ದರು. ಸೋಮವಾರ ಬೆಳಗ್ಗೆ ಸೂರ್ಯೋದಯದ ವೇಳೆ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು ಓದಿ: ಹಾಥರಸ್ ಕಾಲ್ತುಳಿತ: ಸಾವಿನ ಸಂಖ್ಯೆ 121ಕ್ಕೆ ಏರಿಕೆ; ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ
ಬರಾಬರ್ ಬಳಿ ಅಪಘಾತ ಸಂಭವಿಸಿದೆ ಎಂದು ಜೆಡಿಯು ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ. ಏಳು ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಹಾನಾಬಾದ್‌ನ ಬರಾಬರ್‌ನಲ್ಲಿರುವ ಸಿದ್ಧೇಶ್ವರ ಧಾಮದಲ್ಲಿ ಸೋಮವಾರ ಜನಸಂದಣಿ ಗಣನೀಯವಾಗಿ ಹೆಚ್ಚಿತ್ತು. ಇದ್ದಕ್ಕಿದ್ದಂತೆ ಕಾಲ್ತುಳಿತ ಉಂಟಾಯಿತು ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ