ಚೆನ್ನಾಗಿ ಆಟವಾಡಿಲ್ಲ ಎಂದು ಶಾಲೆಯ ಫುಟ್ಬಾಲ್ ಆಟಗಾರರಿಗೆ ಕಪಾಳಮೋಕ್ಷ ಮಾಡಿ ಥಳಿಸಿದ ಶಿಕ್ಷಕ
ಮಕ್ಕಳು ಆಟದಲ್ಲಿ ಒಂದೊಮ್ಮೆ ಸೋತರೆ ಅವರು ಕುಗ್ಗಲು ಬಿಡದೆ ಧೈರ್ಯ ತುಂಬಿ, ಮುಂದಿನ ದಿನಗಳಲ್ಲಿ ಚೆನ್ನಾಗಿ ಆಟವಾಡಿ ಎಂದು ಹೇಳಬೇಕಿದ್ದ ಶಿಕ್ಷಕರೇ ಮಕ್ಕಳಿಗೆ ಮನಬಂದಂತೆ ಥಳಿಸಿದರೆ ಅವರು ಎಲ್ಲಿಗೆ ಹೋಗಬೇಕು. ತಮಿಳುನಾಡಿನ ಸೇಲಂ ಜಿಲ್ಲೆಯ ಖಾಸಗಿ ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅಣ್ಣಾಮಲೈ ಎಂದು ಗುರುತಿಸಲಾದ ಶಿಕ್ಷಕ, ಹಲವಾರು ಫುಟ್‌ಬಾಲ್ ಆಟಗಾರರ ಪ್ರದರ್ಶನದಿಂದ ಅತೃಪ್ತರಾಗಿ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದಾರೆ. ಒದೆಯುವುದು ಮತ್ತು ಅವರ ಕೂದಲನ್ನು ಎಳೆಯುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಮಿಳುನಾಡಿನ ಸೇಲಂ ಜಿಲ್ಲೆಯ ಖಾಸಗಿ ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅಣ್ಣಾಮಲೈ ಎಂದು ಗುರುತಿಸಲಾದ ಶಿಕ್ಷಕ, ಹಲವಾರು ಫುಟ್‌ಬಾಲ್ ಆಟಗಾರರ ಪ್ರದರ್ಶನದಿಂದ ಅತೃಪ್ತರಾಗಿ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ್ದಾರೆ. ಒದೆಯುವುದು ಮತ್ತು ಅವರ ಕೂದಲನ್ನು ಎಳೆಯುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೋ ಪ್ರಸಾರವಾದ ನಂತರ ಸಂಗಗಿರಿ ಜಿಲ್ಲಾ ಶಿಕ್ಷಣಾಧಿಕಾರಿ ತನಿಖೆ ಆರಂಭಿಸಿದ್ದು, ಅಣ್ಣಾಮಲೈ ಅವರನ್ನು ಅಮಾನತುಗೊಳಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಈ ವರ್ಷದ ಆರಂಭದಲ್ಲಿ ಮಾರ್ಚ್‌ನಲ್ಲಿ ಸಂಭವಿಸಿದ ಇದೇ ರೀತಿಯ ಘಟನೆಯಲ್ಲಿ, ಕಾಲೇಜು ಹಾಸ್ಟೆಲ್‌ನಲ್ಲಿ 21 ವರ್ಷದ ಪದವಿ ವಿದ್ಯಾರ್ಥಿಯನ್ನು ಕೊಂದ ಆರೋಪದ ಮೇಲೆ ತೆಲಂಗಾಣದ ಸರ್ಕಾರಿ ಕಾಲೇಜಿನ ಏಳು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು.
Crime News: ಮಕ್ಕಳ ಕಳ್ಳರೆಂದು ಮಹಿಳೆಯರಿಗೆ ಥಳಿಸಿದ ಜನರು
ವೆಂಕಟ್ ಎಂದು ಗುರುತಿಸಲಾಗಿದ್ದು, ಬಾಲಕನನ್ನು ಆರೋಪಿಗಳು ಮತ್ತು ಅವರ ಎಲ್ಲಾ ಸಹಪಾಠಿಗಳು ಹೊಡೆದು ಕತ್ತು ಹಿಸುಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳಲ್ಲಿ ಅಪ್ರಾಪ್ತರೂ ಸೇರಿದ್ದಾರೆ. ತೆಲಂಗಾಣದ ನಿಜಾಮಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




