AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್ ಕಿಶೋರ್​-ನಿತೀಶ್ ಕುಮಾರ್ ಒಟ್ಟಿಗೇ ಡಿನ್ನರ್​; ರಾಷ್ಟ್ರ ರಾಜಕೀಯ ವಲಯದಲ್ಲಿ ಶುರುವಾಯ್ತು ಕುತೂಹಲ, ಚರ್ಚೆ !

ಮಮತಾ ಬ್ಯಾನರ್ಜಿಯವರ ಬಂಗಾಳದ ಗೆಲುವಿನೊಂದಿಗೆ ದೊಡ್ಡ ಬೆಂಬಲವನ್ನು ಗಳಿಸಿದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ 2024 ರ ರಾಷ್ಟ್ರೀಯ ಚುನಾವಣೆಗೆ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನಗಳಲ್ಲಿ ಭಾಗಿಯಾಗಿದ್ದರು.

ಪ್ರಶಾಂತ್ ಕಿಶೋರ್​-ನಿತೀಶ್ ಕುಮಾರ್ ಒಟ್ಟಿಗೇ ಡಿನ್ನರ್​; ರಾಷ್ಟ್ರ ರಾಜಕೀಯ ವಲಯದಲ್ಲಿ ಶುರುವಾಯ್ತು ಕುತೂಹಲ, ಚರ್ಚೆ !
ಪ್ರಶಾಂತ್​ ಕಿಶೋರ್ ಮತ್ತು ನಿತೀಶ್​ ಕುಮಾರ್​
S Chandramohan
| Edited By: |

Updated on:Feb 19, 2022 | 6:03 PM

Share

ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ. ಈ ಮಾತು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಎರಡು ವರ್ಷದ ಹಿಂದೆ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ಚುನಾವಣಾ ತಂತ್ರ ನಿಪುಣ ಪ್ರಶಾಂತ್​ ಕಿಶೋರ್ (Prashant Kishor)​ ವಜಾಗೊಂಡಿದ್ದು ನೆನಪೇ ಇದೆ. ಅಂದು ಜೆಡಿಯು ವರಿಷ್ಠ ನಿತೀಶ್​ ಕುಮಾರ್​ ಅವರೇ, ಪ್ರಶಾಂತ್ ಕಿಶೋರ್​​ರನ್ನು ವಜಾಗೊಳಿಸಿದ್ದರು. ಆದರೆ ಅಚ್ಚರಿಯೆಂಬಂತೆ ಇವರಿಬ್ಬರೂ ಶುಕ್ರವಾರ ಸಂಜೆ ದೆಹಲಿಯಲ್ಲಿರುವ ನಿತೀಶ್ ಕುಮಾರ್ (Nitish Kumar)​ ಅಧಿಕೃತ ನಿವಾಸದಲ್ಲಿ ಭೋಜನಕೂಟದಲ್ಲಿ ಭಾಗಿಯಾಗಿದ್ದರು. ದೆಹಲಿಯಲ್ಲಿ ಒಟ್ಟಿಗೇ ಊಟ ಮಾಡಿದ್ದಲ್ಲದೆ, ಸುಮಾರು 2 ತಾಸುಗಳ ಕಾಲ ಖಾಸಗಿ ಮತ್ತು ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದು, ದೇಶದ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ.

ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರುತ್ತಾರೆಂಬ ಮಾತುಗಳು ಕೇಳಿಬಂದಿದ್ದರೂ ಅದು ಅಲ್ಲಿಗೇ ಸ್ಥಗಿತಗೊಂಡಿತು. ಇದೀಗ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್​​ನೊಂದಿಗಿನ ಸಂಬಂಧದ ಬಗ್ಗೆ ಊಹಾಪೋಹ ತೀವ್ರವಾಗಿಯೇ ಇದೆ. ಇದೇ ಹೊತ್ತಲ್ಲಿ ಮತ್ತೆ ತಮ್ಮ ಹಳೇ ಬಾಸ್​ ಜತೆಗೇ ಭೋಜನಕೂಟ ನಡೆಸಿದ್ದಾರೆ. ನಿತೀಶ್ ಕುಮಾರ್ ಶುಕ್ರವಾರ ಸಂಜೆ ಔತಣಕೂಟ ಏರ್ಪಡಿಸಿದ್ದರು. ಇದೇ ವೇಳೆ ಪ್ರಶಾಂತ್ ಕಿಶೋರ್​ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮತ್ತು ಪಿಕೆ (ಪ್ರಶಾಂತ್ ಕಿಶೋರ್​) ನಡುವೆ ಹಳೇ ಸ್ನೇಹವಿದೆ. ಹೆಚ್ಚಿನ ವ್ಯಾಖ್ಯಾನ ಕಲ್ಪಿಸಬೇಕಾಗಿಲ್ಲ ಎಂದು ಹೇಳಿದರು. ಹಾಗೇ, ಪ್ರಶಾಂತ್ ಕಿಶೋರ್​ ಕೂಡ ಇದನ್ನೇ ಹೇಳಿದ್ದಾರೆ. ಇದೊಂದು ಸೌಜನ್ಯದ ಭೇಟಿ. ನಿತೀಶ್ ಕುಮಾರ್ ಅವರಿಗೆ ಒಮಿಕ್ರಾನ್ ಸೋಂಕು ತಗುಲಿದಾಗ, ಅವರ ಆರೋಗ್ಯದ ಬಗ್ಗೆ ವಿಚಾರಿಸಲು ಅವರಿಗೆ ಫೋನ್ ಮಾಡಿದ್ದೆ. ಆಗ ನಿತೀಶ್ ಕುಮಾರ್ ಭೇಟಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದು, ನಿನ್ನೆ ಇದು ಸಾಕಾರಗೊಂಡಿದೆ ಎಂದು ಪ್ರಶಾಂತ್ ಕಿಶೋರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಶಾಂತ್‌ ಕಿಶೋರ್ ಅವರು ನಿತೀಶ್ ಕುಮಾರ್ ಜೊತೆಗಿನ ಸಭೆಯು ತಕ್ಷಣವೇ ಯಾವುದೇ ಪರಿಣಾಮ ಬೀರುವುದನ್ನು ತಳ್ಳಿ ಹಾಕಿದರು. ರಾಜಕೀಯವಾಗಿ ನಿತೀಶ್ ಕುಮಾರ್-ತಾವು ಪರಸ್ಪರ ಭಿನ್ನ ದಿಕ್ಕುಗಳಲ್ಲಿರುವುದಾಗಿ ಪ್ರಶಾಂತ್ ಕಿಶೋರ್ ಪರೋಕ್ಷವಾಗಿ ಹೇಳಿದರು.

ಮಮತಾ ಬ್ಯಾನರ್ಜಿಯವರ ಬಂಗಾಳದ ಗೆಲುವಿನೊಂದಿಗೆ ದೊಡ್ಡ ಬೆಂಬಲವನ್ನು ಗಳಿಸಿದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ 2024 ರ ರಾಷ್ಟ್ರೀಯ ಚುನಾವಣೆಗೆ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನಗಳಲ್ಲಿ ಭಾಗಿಯಾಗಿದ್ದರು. ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ಜೊತೆಗಿನ ಪ್ರಶಾಂತ್ ಕಿಶೋರ್ ಅವರ ಏಕೈಕ ರಾಜಕೀಯ ತಿರುವು ತಿಂಗಳೊಳಗೆ ಹದಗೆಟ್ಟಿತು . ಕೆಲವೇ ತಿಂಗಳಲ್ಲಿ ಸಿಎಎ ಬಗ್ಗೆ ನಿತೀಶ್ ಕುಮಾರ್‌ ನಿಲುವುನ್ನು ಪ್ರಶಾಂತ್ ಕಿಶೋರ್ ಪ್ರಶ್ನಿಸಿದ್ದರಿಂದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸುವುದರೊಂದಿಗೆ ಪ್ರಶಾಂತ್ ಕಿಶೋರ್ ಹಾಗೂ ಜೆಡಿಯು ನಂಟು ಕೊನೆಗೊಂಡಿತು. ಆದರೆ ಇತ್ತೀಚಿನ ಸಂದರ್ಶನಗಳಲ್ಲಿ, ಪ್ರಶಾಂತ್‌ ಕಿಶೋರ್ ಅವರು ಬಿಹಾರದ ನಾಯಕ ನಿತೀಶ್ ಕುಮಾರ್ ಅವರ ಜೊತೆಗಿನ ಸೌಹಾರ್ದ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ತಾವು ಮರುಸಂಪರ್ಕಿಸಲು ಬಯಸುವ ಕೆಲವರಲ್ಲಿ ಒಬ್ಬರು ಎಂದು ಹೆಸರಿಸಿದ್ದಾರೆ. ಇಂತಹ ಅನಿರೀಕ್ಷಿತ ಕ್ರಮದಿಂದಾಗಿ ಪ್ರಶಾಂತ್‌ ಕಿಶೋರ್ ಅವರ ಮುಂದಿನ ನಡೆಯ ಬಗ್ಗೆ ಎಲ್ಲರೂ ಚರ್ಚಿಸುವಂತೆ ಹಾಗೂ ಊಹಿಸುವಂತೆ ಮಾಡಿದೆ ಎಂದು ಹಲವರು ಹೇಳುತ್ತಾರೆ, ವಿಶೇಷವಾಗಿ ಅವರು ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರೊಂದಿಗಿನ ಬಾಂಧವ್ಯದಲ್ಲಿನ ಪ್ರಕ್ಷುಬ್ಧತೆಯನ್ನು ನಿಭಾಯಿಸುತ್ತಿದ್ದಾರೆ.

ಕಳೆದ ವರ್ಷ ಬಂಗಾಳದ ಚುನಾವಣೆಯ ನಂತರ ತೃಣಮೂಲದೊಂದಿಗೆ ಕೆಲಸ ಮಾಡುತ್ತಿರುವ ಅವರ ರಾಜಕೀಯ ಸಲಹಾ ಗುಂಪು I-PAC, ಮಮತಾ ಬ್ಯಾನರ್ಜಿ ಮತ್ತು ಅವರ ಹೆಚ್ಚುತ್ತಿರುವ ಮಹತ್ವಾಕಾಂಕ್ಷೆಯ ಸೋದರಳಿಯ ನಡುವಿನ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ನಿತೀಶ್ ಕುಮಾರ್ ಅವರಿಗೂ ಪ್ರಶಾಂತ್ ಕಿಶೋರ್ ಜೊತೆಗಿನ ಸಭೆಯು ಆಳವಾದ ಉದ್ದೇಶವನ್ನು ಪೂರೈಸುತ್ತದೆ. ಪ್ರಶಾಂತ್ ಕಿಶೋರ್ ಅವರೊಂದಿಗಿನ ಭೇಟಿಯನ್ನು ಬಿಜೆಪಿಗೆ ಸಂದೇಶವಾಗಿ ಸಾರ್ವಜನಿಕವಾಗಿ ನೀಡಲು ಅವರು ನಿರ್ಧರಿಸಿದ್ದಾರೆ ಎಂದು ಮುಖ್ಯಮಂತ್ರಿಯ ಆಪ್ತ ಮೂಲಗಳು ಹೇಳುತ್ತವೆ. ಬಿಜೆಪಿಯು ಹಲವಾರು ವಿಷಯಗಳಲ್ಲಿ ನೀತೀಶ್ ಕುಮಾರ್ ಬಹಿರಂಗವಾಗಿ ಟೀಕಿಸುತ್ತಿದೆ. ಹೀಗಾಗಿ ಪ್ರಶಾಂತ್ ಕಿಶೋರ್ ಜೊತೆಗೆ ಉತ್ತಮ ಭಾಂಧವ್ಯ ಕಾಪಾಡಿಕೊಂಡು ಮುಂದೆ ಅಗತ್ಯಬಿದ್ದಾಗ ಪ್ರಶಾಂತ್ ಕಿಶೋರ್ ನೆರವು ಪಡೆಯುವ ಆಯ್ಕೆಯನ್ನು ಮುಕ್ತವಾಗಿ ಇರಿಸಿಕೊಳ್ಳಲು ನಿತೀಶ್ ಕುಮಾರ್ ಈ ಮೂಲಕ ಹೆಜ್ಜೆ ಇಟ್ಟಿದ್ದಾರೆ. 2020 ರ ಬಿಹಾರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟದಲ್ಲಿ ಜೆಡಿಯು ಹೆಚ್ಚಿನ ಸ್ಥಾನಗಳನ್ನು ಗಳಿಸಿಲ್ಲ. ಜೆಡಿಯುಗಿಂತ ಬಿಜೆಪಿಯೇ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ಆದರೂ ಸಿಎಂ ಸ್ಥಾನವನ್ನು ನಿತೀಶ್ ಕುಮಾರ್ ಗೆ ಬಿಟ್ಟುಕೊಟ್ಟಿದೆ. ಹೀಗಾಗಿ ಅಧಿಕಾರಕ್ಕೆ ಮರಳಿದ ನಂತರ ಮಿತ್ರಪಕ್ಷ ಬಿಜೆಪಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ನಿತೀಶ್ ಕುಮಾರ್ ಹೆಣಗಾಡುತ್ತಿದ್ದಾರೆ.

ವರದಿ- ಚಂದ್ರಮೋಹನ್​

ಇದನ್ನೂ ಓದಿ: ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿಕೊಟ್ಟ ಅಫ್ಘಾನ್​​ ಹಿಂದು-ಸಿಖ್​ ಮುಖಂಡರು; ರುಮಾಲು, ಸಾಂಪ್ರದಾಯಿಕ ಉಡುಪು ಉಡುಗೊರೆ

Published On - 5:57 pm, Sat, 19 February 22

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ