12 ವರ್ಷಗಳ ಹಿಂದೆ ನಾಪತ್ತೆಯಾಗಿದ್ದವ ಸತ್ತೇ ಹೋಗಿದ್ದಾನೆಂದು ನಂಬಿದ್ದ ಕುಟುಂಬ; ಪಾಕಿಸ್ತಾನದ ಜೈಲಿನಿಂದ ಬಂದ ಪತ್ರದಲ್ಲಿತ್ತು ಶಾಕಿಂಗ್​ ಸತ್ಯ

12 ವರ್ಷಗಳ ಹಿಂದೆ ಬಿಹಾರದ ಬುಕ್ಸಾರ್​ ಜಿಲ್ಲೆಯಿಂದ ನಾಪತ್ತೆಯಾದ ವ್ಯಕ್ತಿಯೊಬ್ಬ ಇದೀಗ ಪಾಕಿಸ್ತಾನದ ಜೈಲಿ (Pakistan Jail)ನಲ್ಲಿ ಬದುಕಿರುವುದಾಗಿ ತಿಳಿದುಬಂದಿದೆ. ಛಾವಿ ಎಂಬಾತ ಬಿಹಾರದ ಬುಕ್ಸಾರ್​ ಜಿಲ್ಲೆಯ ಖಿಲಾಫತ್​ಪುರ್​ ನಿವಾಸಿ.  ಆತ 18 ವರ್ಷದವನಾಗಿದ್ದಾಗ ನಾಪತ್ತೆಯಾಗಿದ್ದ. ಅದಾದ ಬಳಿಕ ಎಷ್ಟೇ ಹುಡುಕಿದರೂ, ಪ್ರಯತ್ನ ಪಟ್ಟರೂ ಅವನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ಛಾವಿ ನಾಪತ್ತೆಯಾಗುವ ವೇಳೆ ಆತ ಮಾನಸಿಕವಾಗಿ ಸ್ವಲ್ಪ ಕುಗ್ಗಿದ್ದ ಎಂದು ಆತನ ಕುಟುಂಬದವರು ತಿಳಿಸಿದ್ದರು. ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ನಂತರದ ದಿನಗಳಲ್ಲಿ ಛಾವಿ […]

12 ವರ್ಷಗಳ ಹಿಂದೆ ನಾಪತ್ತೆಯಾಗಿದ್ದವ ಸತ್ತೇ ಹೋಗಿದ್ದಾನೆಂದು ನಂಬಿದ್ದ ಕುಟುಂಬ; ಪಾಕಿಸ್ತಾನದ ಜೈಲಿನಿಂದ ಬಂದ ಪತ್ರದಲ್ಲಿತ್ತು ಶಾಕಿಂಗ್​ ಸತ್ಯ
12 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ
Updated By: Lakshmi Hegde

Updated on: Dec 18, 2021 | 10:25 AM

12 ವರ್ಷಗಳ ಹಿಂದೆ ಬಿಹಾರದ ಬುಕ್ಸಾರ್​ ಜಿಲ್ಲೆಯಿಂದ ನಾಪತ್ತೆಯಾದ ವ್ಯಕ್ತಿಯೊಬ್ಬ ಇದೀಗ ಪಾಕಿಸ್ತಾನದ ಜೈಲಿ (Pakistan Jail)ನಲ್ಲಿ ಬದುಕಿರುವುದಾಗಿ ತಿಳಿದುಬಂದಿದೆ. ಛಾವಿ ಎಂಬಾತ ಬಿಹಾರದ ಬುಕ್ಸಾರ್​ ಜಿಲ್ಲೆಯ ಖಿಲಾಫತ್​ಪುರ್​ ನಿವಾಸಿ.  ಆತ 18 ವರ್ಷದವನಾಗಿದ್ದಾಗ ನಾಪತ್ತೆಯಾಗಿದ್ದ. ಅದಾದ ಬಳಿಕ ಎಷ್ಟೇ ಹುಡುಕಿದರೂ, ಪ್ರಯತ್ನ ಪಟ್ಟರೂ ಅವನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ಛಾವಿ ನಾಪತ್ತೆಯಾಗುವ ವೇಳೆ ಆತ ಮಾನಸಿಕವಾಗಿ ಸ್ವಲ್ಪ ಕುಗ್ಗಿದ್ದ ಎಂದು ಆತನ ಕುಟುಂಬದವರು ತಿಳಿಸಿದ್ದರು. ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ನಂತರದ ದಿನಗಳಲ್ಲಿ ಛಾವಿ ಬದುಕಿಲ್ಲ ಎಂದೇ ನಂಬಲಾಗಿತ್ತು.  ಅಷ್ಟೇ ಅಲ್ಲ, ಕುಟುಂಬದವರು ಆತನ ಅಂತ್ಯಕ್ರಿಯೆಯನ್ನೂ ಮಾಡಿ ಮುಗಿಸಿದ್ದರು. 

ಆದರೆ ಇದೀಗ ಸ್ಥಳೀಯ ಪೊಲೀಸರು ಕುಟುಂಬವನ್ನು ಸಂಪರ್ಕಿಸಿ, ಛಾವಿ ಪಾಕಿಸ್ತಾನದ ಜೈಲಿನಲ್ಲಿ ಇದ್ದಾನೆಂಬ ಸತ್ಯವನ್ನು ಹೇಳಿದ್ದಾರೆ. ನಮಗೆ ಛಾವಿ ಎಂಬ ವ್ಯಕ್ತಿಯಿಂದ ಪತ್ರವೊಂದು ತಲುಪಿದೆ. ಅದರಲ್ಲಿ ಆತ ತಾನು ಖಿಲಾಫಟ್​ಪುರ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಪಾಕಿಸ್ತಾನದ ಜೈಲಿನಲ್ಲಿ ಇರುವುದಾಗಿಯೂ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ಯುವಕನ ಕುಟುಂಬಕ್ಕೆ ತಿಳಿಸಿದ್ದಾರೆ. ಛಾವಿ ಬದುಕಿದ್ದಾನೆ ಎಂಬ ಸುದ್ದಿ ಕೇಳಿ ಕುಟುಂಬದವರ ಫುಲ್ ಖುಷಿಯಾಗಿದ್ದಾರೆ. ಆತ ವಾಪಸ್​ ಬರುವುದನ್ನೇ ಕಾಯುತ್ತಿದ್ದಾರೆ.  ಇದೀಗ ಛಾವಿಗೆ 30ವರ್ಷ ವಯಸ್ಸಾಗಿದೆ.

ಇನ್ನು ಪತ್ರ ತಲುಪಿದ ಬಗ್ಗೆ ಖಿಲಾಫಟ್​ಪುರ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪತ್ರವನ್ನು ಪೊಲೀಸ್ ವಿಶೇಷ ಪಡೆ ನಮಗೆ ತಲುಪಿಸಿದೆ. ಆದರೆ ಆತ ಪಾಕಿಸ್ತಾನದ ಯಾವ ಜೈಲಿನಲ್ಲಿ ಇದ್ದಾನೆಂಬ ಬಗ್ಗೆ ಮಾಹಿತಿ ಇಲ್ಲ. ನಾವು ಈಗಾಗಲೇ ವಿಚಾರಣೆ ಪ್ರಾರಂಭಿಸಿದ್ದೇವೆ. ಭಾರತೀಯ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ನಾವೂ ವರದಿ ಸಲ್ಲಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಛಾವಿ ನಾಪತ್ತೆಯಾದ ಇಷ್ಟು ವರ್ಷದಲ್ಲಿ ಆತನ ತಂದೆ ತೀರಿಕೊಂಡಿದ್ದಾರೆ.  ತಾಯಿ, ಅತ್ತಿಗೆ ಆತನಿಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಐಎಎಸ್ ಅಧಿಕಾರಿಗಳನ್ನು ಹುಟ್ಟುಹಾಕುವಲ್ಲಿ ಯಾವ ರಾಜ್ಯಗಳಿಗೆ ಎಷ್ಟನೇ ಸ್ಥಾನ? ಕುತೂಹಲಕಾರಿ ಅಂಕಿಅಂಶ ಇಲ್ಲಿದೆ

Published On - 9:53 am, Sat, 18 December 21