Lakhimpur Kheri Case: ಎರಡನೇ ಬಾರಿಗೂ ಆಶೀಶ್ ಮಿಶ್ರಾಗೆ ನಿರಾಸೆ; ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್
ಆಶೀಶ್ ಮಿಶ್ರಾ ಜೈಲಿನಲ್ಲಿದ್ದಾರೆ. ಜಾಮೀನಿಗಾಗಿ ಈ ಹಿಂದೆಯೇ ಅವರು ಸಲ್ಲಿಸಿದದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಇದೀಗ ಎರಡನೇ ಬಾರಿಯೂ ಅರ್ಜಿ ವಜಾಗೊಂಡ ಬಗ್ಗೆ ಹಿರಿಯ ಪ್ರಾಸಿಕ್ಯೂಟರ್ ಎಸ್. ಪಿ.ಯಾದವ್ ತಿಳಿಸಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರ(Lakhimpur Kheri violence)ದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಆಶೀಶ್ ಮಿಶ್ರಾ(Ashish Mishra)ಗೆ ಕೋರ್ಟ್ ಈ ಬಾರಿಯೂ ಜಾಮೀನು ನೀಡಲಿಲ್ಲ. ಅಲ್ಲಿಗೆ ಆಶೀಶ್ ಮಿಶ್ರಾ ಜಾಮೀನು ಕೋರಿ ಎರಡನೇ ಬಾರಿಗೆ ಸಲ್ಲಿಸಿದ್ದ ಅರ್ಜಿಯನ್ನೂ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (CJM Court) ವಜಾಗೊಳಿಸಿದೆ. ಅಕ್ಟೋಬರ್ 3ರಂದು ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಪುತ್ರ ಆಶೀಶ್ ಮಿಶ್ರಾ ಬೆಂಗಾವಲು ವಾಹನ ಹರಿದಿತ್ತು. ಆ ವಾಹನದಲ್ಲಿ ಆಶೀಶ್ ಮಿಶ್ರಾ ಇದ್ದಿದ್ದರು ಎಂಬುದನ್ನು ಪ್ರತ್ಯಕ್ಷದರ್ಶಿಗಳು ಹೇಳಿದ್ದರು. ಒಟ್ಟಾರೆ ಈ ಹಿಂಸಾಚಾರದಲ್ಲಿ 8 ಮಂದಿ ಸಾವನ್ನಪ್ಪಿದ್ದರು.
ಆಶೀಶ್ ಮಿಶ್ರಾ ಜೈಲಿನಲ್ಲಿದ್ದಾರೆ. ಜಾಮೀನಿಗಾಗಿ ಈ ಹಿಂದೆಯೇ ಅವರು ಸಲ್ಲಿಸಿದದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಇದೀಗ ಎರಡನೇ ಬಾರಿಯೂ ಅರ್ಜಿ ವಜಾಗೊಂಡ ಬಗ್ಗೆ ಹಿರಿಯ ಪ್ರಾಸಿಕ್ಯೂಟರ್ ಎಸ್. ಪಿ.ಯಾದವ್ ತಿಳಿಸಿದ್ದಾರೆ. ಜಾಮೀನು ಕೊಡಬೇಕೆಂದರೆ, ಪ್ರಸ್ತುತ ಪ್ರಕರಣದಲ್ಲಿ ಕೆಲವು ಮಾನ್ಯಮಾಡುವಂತ ವಿಷಯಗಳು ಇರಬೇಕಾಗುತ್ತವೆ. ಆದರೆ ಅಂಥವು ಯಾವುದೂ ಇಲ್ಲದ ಕಾರಣ ಅರ್ಜಿ ವಜಾಗೊಳಿಸಲಾಗುವುದು ಎಂದು ಕೋರ್ಟ್ ಹೇಳಿದ್ದಾಗಿ ಯಾದವ್ ತಿಳಿಸಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಆಶೀಶ್ ಮಿಶ್ರಾ ಮತ್ತು ಇತರ 12 ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್ಐಟಿಯ ಮುಖ್ಯ ತನಿಖಾಧಿಕಾರಿ ವಿದ್ಯಾರಾಮ್ ದಿವಾಕರ್ ನೇತೃತ್ವದ ತಂಡ, ಲಖಿಂಪುರ ಖೇರಿಯಲ್ಲಿ ರೈತರನ್ನು ಕೊಲೆ ಮಾಡುವ ಉದ್ದೇಶವನ್ನಿಟ್ಟುಕೊಂಡೇ ವಾಹನ ಹರಿಸಲಾಗಿತ್ತು ಎಂದು ಕೋರ್ಟ್ಗೆ ವರದಿ ಸಲ್ಲಿಸಿದೆ. ಈ ವರದಿ ಪರಿಶೀಲನೆ ನಡೆಸಿದ ಬಳಿಕ ಕೋರ್ಟ್, ಆರೋಪಿಗಳ ವಿರುದ್ಧ ದಾಖಲಾದ ಐಪಿಸಿ ಸೆಕ್ಷನ್ಗಳನ್ನು ಬದಲಿಸಲು ಪೊಲೀಸರಿಗೆ ಅನುಮತಿ ನೀಡಿತ್ತು. ಕೊಲೆಯತ್ನ ಆರೋಪ ಹೊರಿಸಲು ಒಪ್ಪಿಗೆ ನೀಡಿತ್ತು. ಆಶೀಶ್ ಮಿಶ್ರಾ ಬಂಧನದ ಬಳಿಕ ಅಕ್ಟೋಬರ್ 13ರಂದು ಸಿಜೆಎಂ ನ್ಯಾಯಾಲಯದಲ್ಲಿ ಮೊದಲ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೇ ಆ ನ್ಯಾಯಾಲಯ ಅದೇ ದಿನ ಅರ್ಜಿಯನ್ನು ತಿರಸ್ಕಾರ ಮಾಡಿತು. ಬಳಿಕ ಆ ಅರ್ಜಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅಕ್ಟೋಬರ್ 21ರಂದು ಸಲ್ಲಿಕೆಯಾಯಿತು. ನವೆಂಬರ್ 15ರಂದು ಜಿಲ್ಲಾ ನ್ಯಾಯಾಲಯ ಕೂಡ ಜಾಮೀನು ಅರ್ಜಿ ವಜಾಗೊಳಿಸಿತು.
ಇದನ್ನೂ ಓದಿ: Manasa Varanasi: 2021ರ ವಿಶ್ವ ಸುಂದರಿ ಪಟ್ಟವೇರಲು ಸಿದ್ಧವಾದ ಭಾರತದ ಸ್ಪರ್ಧಿ ಮಾನಸ ವಾರಾಣಸಿ ಹೇಗಿದ್ದಾರೆ ಗೊತ್ತಾ?
Published On - 11:09 am, Sat, 18 December 21