ನಿಲ್ಲಿಸಿದ್ದ ಟ್ರಕ್​ಗೆ ಬಿಹಾರ ಸಚಿವರ ಬೆಂಗಾವಲು ವಾಹನ ಡಿಕ್ಕಿ, ಓರ್ವ ಸಾವು, ನಾಲ್ವರಿಗೆ ಗಾಯ

|

Updated on: Dec 05, 2023 | 12:00 PM

ನಿಲ್ಲಿಸಿದ್ದ ಟ್ರಕ್​ಗೆ ಬಿಹಾರ ಸಚಿವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೊಲೀಸ್ ಅಧಿಕಾರಿ​ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಹಾರ ಸರ್ಕಾರದ ಸಚಿವ ಜಮಾ ಖಾನ್ ಅವರ ಬೆಂಗಾವಲು ಪೊಲೀಸ್ ವಾಹನವು ಮಂಗಳವಾರ ರಾಜ್ಯದ ರೋಹ್ತಾಸ್ ಜಿಲ್ಲೆಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು.

ನಿಲ್ಲಿಸಿದ್ದ ಟ್ರಕ್​ಗೆ ಬಿಹಾರ ಸಚಿವರ ಬೆಂಗಾವಲು ವಾಹನ ಡಿಕ್ಕಿ, ಓರ್ವ ಸಾವು, ನಾಲ್ವರಿಗೆ ಗಾಯ
ಅಪಘಾತ
Image Credit source: India Today
Follow us on

ನಿಲ್ಲಿಸಿದ್ದ ಟ್ರಕ್​ಗೆ ಬಿಹಾರ ಸಚಿವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೊಲೀಸ್ ಅಧಿಕಾರಿ​ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಹಾರ ಸರ್ಕಾರದ ಸಚಿವ ಜಮಾ ಖಾನ್ ಅವರ ಬೆಂಗಾವಲು ಪೊಲೀಸ್ ವಾಹನವು ಮಂಗಳವಾರ ರಾಜ್ಯದ ರೋಹ್ತಾಸ್ ಜಿಲ್ಲೆಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು.

ಗಾಯಗೊಂಡವರಲ್ಲಿ ರಾಣಿ ಕುಮಾರಿ, ಅರ್ಚನಾ ಕುಮಾರಿ ಮತ್ತು ಮನೋಜ್ ಕುಮಾರ್ ಮತ್ತು ರಮೇಶ್ ಕುಮಾರ್ ಎಂದು ಗುರುತಿಸಲಾದ ಇಬ್ಬರು ಮಹಿಳಾ ಪೊಲೀಸರು ಸೇರಿದ್ದಾರೆ.

ಪ್ರಾಥಮಿಕ ಚಿಕಿತ್ಸೆಗಾಗಿ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು ಮತ್ತು ಪ್ರಾಥಮಿಕ ಆರೈಕೆಯ ನಂತರ ವಾರಾಣಸಿಗೆ ಕಳುಹಿಸಲಾಯಿತು.

ಮತ್ತಷ್ಟು ಓದಿ: Road Accident Deaths: 2022ರಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ದೆಹಲಿಯಲ್ಲೇ ಹೆಚ್ಚು

ಅಪಘಾತದಲ್ಲಿ ಸಾವನ್ನಪ್ಪಿದ ಪೊಲೀಸ್​ ಅಧಿಕಾರಿಯ ಗುರುತಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಮೃತದೇಹ ಪೊಲೀಸ್ ಕಸ್ಟಡಿಯಲ್ಲಿದ್ದು, ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿದೆ. ಏತನ್ಮಧ್ಯೆ, ಅಪಘಾತದ ಬಗ್ಗೆ ಮಾಹಿತಿ ನೀಡಿದ ನಂತರ ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ