Road Accident Deaths: 2022ರಲ್ಲಿ ರಸ್ತೆ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ದೆಹಲಿಯಲ್ಲೇ ಹೆಚ್ಚು
2022ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದವರ ಒಟ್ಟು ಸಂಖ್ಯೆಯಲ್ಲಿ ದೆಹಲಿಯದ್ದು ಬಹುಪಾಲಿದೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಮಾಹಿತಿ ನೀಡಿದೆ. 2022ರಲ್ಲಿ ರಸ್ತೆ ಅಪಘಾತಗಳಿಂದ 2,103 ಮಂದಿ ಸಾವನ್ನಪ್ಪಿದ್ದಾರೆ, ಗರಿಷ್ಠ ಸಾವಿನ ಪ್ರಮಾಣ ದೆಹಲಿಯಲ್ಲಿ ವರದಿಯಾಗಿದೆ. ಶೇ.51.5ರಷ್ಟು ಅಪಘಾತ ಹಾಗೂ ಸಾವುಗಳು ವೇಗದ ಚಾಲನೆಯಿಂದಾದರೆ, ಶೇ.31.3 ಓವರ್ಟೇಕಿಂಗ್ ಹಾಗೂ ಅಸಡ್ಡೆ ಚಾಲನೆಯಿಂದಾಗಿದೆ. ಶೇ.27ರಂದು ಅಪಘಾತಕ್ಕೆ ಸಂಬಂಧಿಸಿದ ಸಾವುಗಳು ಡ್ರಗ್ಸ್ ಅಥವಾ ಮಧ್ಯಪಾನ ಸೇವನೆ ಮಾಡಿ ಗಾಡಿ ಚಲಾಯಿಸುವುದರಿಂದಾಗಿದೆ.

2022 ರಲ್ಲಿ ದೇಶದಾದ್ಯಂತ 53 ನಗರಗಳಲ್ಲಿ ಒಟ್ಟು 68,236 ರಸ್ತೆ ಅಪಘಾತಗಳು ವರದಿಯಾಗಿವೆ ಮತ್ತು ಈ ಅಪಘಾತಗಳಲ್ಲಿ 57,246 ಜನರು ಗಾಯಗೊಂಡಿದ್ದಾರೆ ಮತ್ತು 17,680 ಜನರು ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ. ಎನ್‌ಸಿಆರ್‌ಬಿ ವರದಿಯು ರಸ್ತೆ ಅಪಘಾತಗಳು, ರೈಲ್ವೆ ಅಪಘಾತಗಳು ಮತ್ತು ರೈಲ್ವೇ ಕ್ರಾಸಿಂಗ್ ಅಪಘಾತಗಳನ್ನು ಒಳಗೊಂಡಿದೆ.
ಈ ಅಪಘಾತಗಳಲ್ಲಿ ಹೆಚ್ಚಿನವು ವಸತಿ ಪ್ರದೇಶಗಳ ಬಳಿ (ಶೇ. 29.1), ನಂತರ ಕೈಗಾರಿಕಾ ಪ್ರದೇಶಗಳು (ಶೇ. 9.7) ಮತ್ತು ಶಾಲೆಗಳು ಮತ್ತು ಕಾಲೇಜುಗಳಂತಹ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಪ್ರದೇಶಗಳು (ಶೇ. 8.7) ಸಂಭವಿಸಿವೆ.
ಮತ್ತಷ್ಟು ಓದಿ: ಉತ್ತರಪ್ರದೇಶ: ಆಗ್ರಾ-ದೆಹಲಿ ಹೆದ್ದಾರಿಯಲ್ಲಿ ಭೀಕರ ಅಪಘಾತ; 5 ಸಾವು
2022 ರ ಅವಧಿಯಲ್ಲಿ ಸಂಭವಿಸಿದ ಒಟ್ಟು ಅಪಘಾತಗಳಲ್ಲಿ ಶೇಕಡಾ 50.9 ರಷ್ಟಿರುವ ಕಾರಣ ದೆಹಲಿಯು ಗರಿಷ್ಠ ಸಂಖ್ಯೆಯ ರೈಲ್ವೆ ಅಪಘಾತಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ