ಸರಸ್ವತಿ ಮೂರ್ತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಘಟನೆ ಬಿಹಾರದ ದರ್ಭಂಗಾದಲ್ಲಿ ನಡೆದಿದೆ. ಮೂರ್ತಿ ಹಾಗೂ ಅಲ್ಲಿ ಸೇರಿದ್ದ ಜನರ ಮೇಲೆ ಕಲ್ಲು ತೂರಾಟ ನಡೆದಿದೆ. ಮೂರ್ತಿ ವಿಸರ್ಜನೆಯು ಇದೀಗ ಶಾಂತಿಯುತವಾಗಿ ಪೂರ್ಣಗೊಂಡಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಈ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ರಾಜ್ ತಿಳಿಸಿದ್ದಾರೆ.
ಎರಡೂ ಕಡೆಯ ಜನರು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಎರಡೂ ಕಡೆಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ತಕ್ಷಣವೇ ನಿಯಂತ್ರಣಕ್ಕೆ ತರಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಇದುವರೆಗೆ 40 ಮಂದಿಯನ್ನು ಬಂಧಿಸಲಾಗಿದೆ. ದರ್ಭಂಗಾದ ಬಿಶನ್‌ಪುರ ಮತ್ತು ಹಯಾಘಾಟ್ ಪೊಲೀಸ್ ಠಾಣೆಗಳ ಪ್ರದೇಶಗಳಲ್ಲಿ ಶುಕ್ರವಾರ ಎರಡು ಸಮುದಾಯಗಳ ನಡುವೆ ಸಣ್ಣ ಘರ್ಷಣೆಗಳು ನಡೆದಿವೆ. ಭಾಗಲ್ಪುರ್ ಜಿಲ್ಲೆಯ ಲೋದಿಪುರ ಪ್ರದೇಶದಲ್ಲಿ ಶುಕ್ರವಾರ ಇದೇ ರೀತಿಯ ಘಟನೆ ವರದಿಯಾಗಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ, ಪರಿಸ್ಥಿತಿಯನ್ನು ತಕ್ಷಣ ನಿಯಂತ್ರಣಕ್ಕೆ ತರಲಾಯಿತು.
ಮತ್ತಷ್ಟು ಓದಿ: ತ್ರಿಪುರಾ: ವಸಂತ ಪಂಚಮಿಯಂದು ಕಾಲೇಜಿನಲ್ಲಿ ಸೀರೆ ಇಲ್ಲದ ಸರಸ್ವತಿ ವಿಗ್ರಹಕ್ಕೆ ಪೂಜೆ, ಭುಗಿಲೆದ್ದ ಆಕ್ರೋಶ
ಸೀರೆ ಇಲ್ಲದ ಸರಸ್ವತಿ ವಿಗ್ರಹಕ್ಕೆ ಪೂಜೆ
ವಸಂತ ಪಂಚಮಿಯಂದು ಕಾಲೇಜಿನಲ್ಲಿ ಸೀರೆ ಇಲ್ಲದ ಸರಸ್ವತಿ(Saraswati) ವಿಗ್ರಹಕ್ಕೆ ಪೂಜೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತ್ರಿಪುರಾ ಹತ್ತಿರದ ಲಿಚುಬಗಾನ್ನ ಕಾಲೇಜಿನಲ್ಲಿ ಪೂಜೆ ಆಚರಣೆಯಲ್ಲಿ ಸರಸ್ವತಿ ವಿಗ್ರಹಕ್ಕೆ ಪೂಜೆ ಮಾಡಲಾಗಿತ್ತು.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜಿಗೆ ನುಗ್ಗಿ ಸರಸ್ವತಿ ದೇವಿಯ ವಿಗ್ರಹಕ್ಕೆ ಸೀರೆ ಹೊದಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಶಿಕ್ಷಣ ಹಾಗೂ ಜ್ಞಾನದ ಅಧಿದೇವತೆ ಶಾರದೆಯ ಜನ್ಮದಿನದಂದು ಆಕೆಯನ್ನು ಸ್ಮರಿಸಿದರೆ ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುತ್ತಾರೆ ಎಂಬುದು ನಂಬಿಕೆ.
ಜೀವನದಲ್ಲಿ ಕೆಲವೊಮ್ಮೆ ಹಣ ಬರುತ್ತದೆ ಮತ್ತು ಹೋಗುತ್ತದೆ. ಅದಕ್ಕಾಗಿಯೇ ಲಕ್ಷ್ಮಿ ದೇವಿಯನ್ನು ಚಂಚಲೆ ಎಂದೂ ಕರೆಯುತ್ತಾರೆ. ಆದರೆ ನಾವು ಕಲಿತ ವಿದ್ಯೆ ಮತ್ತು ಕಷ್ಟಪಟ್ಟು ಸಂಪಾದಿಸಿದ ಜ್ಞಾನ ಎಲ್ಲೂ ಹೋಗುವುದಿಲ್ಲ. ಅದಕ್ಕಾಗಿಯೇ ಅನೇಕ ಜನರು ಶಾರದಾ ದೇವಿಯನ್ನು ಆಕೆಯ ಆಶೀರ್ವಾದಕ್ಕಾಗಿ ಪೂಜಿಸುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ