ತ್ರಿಪುರಾ: ವಸಂತ ಪಂಚಮಿಯಂದು ಕಾಲೇಜಿನಲ್ಲಿ ಸೀರೆ ಇಲ್ಲದ ಸರಸ್ವತಿ ವಿಗ್ರಹಕ್ಕೆ ಪೂಜೆ, ಭುಗಿಲೆದ್ದ ಆಕ್ರೋಶ

ತ್ರಿಪುರಾದ ಕಾಲೇಜೊಂದರಲ್ಲಿ ವಸಂತ ಪಂಚಮಿಯಂದು ಸೀರೆ ಇಲ್ಲದ ಸರಸ್ವತಿ ವಿಗ್ರಹಕ್ಕೆ ಪೂಜೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜಿಗೆ ನುಗ್ಗಿ ಸರಸ್ವತಿ ದೇವಿಯ ವಿಗ್ರಹಕ್ಕೆ ಸೀರೆ ಹೊದಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಶಿಕ್ಷಣ ಹಾಗೂ ಜ್ಞಾನದ ಅಧಿದೇವತೆ ಶಾರದೆಯ ಜನ್ಮದಿನದಂದು ಆಕೆಯನ್ನು ಸ್ಮರಿಸಿದರೆ ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುತ್ತಾರೆ ಎಂಬುದು ನಂಬಿಕೆ.

ತ್ರಿಪುರಾ: ವಸಂತ ಪಂಚಮಿಯಂದು ಕಾಲೇಜಿನಲ್ಲಿ ಸೀರೆ ಇಲ್ಲದ ಸರಸ್ವತಿ ವಿಗ್ರಹಕ್ಕೆ ಪೂಜೆ, ಭುಗಿಲೆದ್ದ ಆಕ್ರೋಶ
ಸರಸ್ವತಿ
Follow us
ನಯನಾ ರಾಜೀವ್
|

Updated on: Feb 15, 2024 | 12:11 PM

ವಸಂತ ಪಂಚಮಿಯಂದು ಕಾಲೇಜಿನಲ್ಲಿ ಸೀರೆ ಇಲ್ಲದ ಸರಸ್ವತಿ(Saraswati) ವಿಗ್ರಹಕ್ಕೆ ಪೂಜೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತ್ರಿಪುರಾ ಹತ್ತಿರದ ಲಿಚುಬಗಾನ್​ನ ಕಾಲೇಜಿನಲ್ಲಿ ಪೂಜೆ ಆಚರಣೆಯಲ್ಲಿ ಸರಸ್ವತಿ ವಿಗ್ರಹಕ್ಕೆ ಪೂಜೆ ಮಾಡಲಾಗಿತ್ತು. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜಿಗೆ ನುಗ್ಗಿ ಸರಸ್ವತಿ ದೇವಿಯ ವಿಗ್ರಹಕ್ಕೆ ಸೀರೆ ಹೊದಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಶಿಕ್ಷಣ ಹಾಗೂ ಜ್ಞಾನದ ಅಧಿದೇವತೆ ಶಾರದೆಯ ಜನ್ಮದಿನದಂದು ಆಕೆಯನ್ನು ಸ್ಮರಿಸಿದರೆ ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುತ್ತಾರೆ ಎಂಬುದು ನಂಬಿಕೆ. ಜೀವನದಲ್ಲಿ ಕೆಲವೊಮ್ಮೆ ಹಣ ಬರುತ್ತದೆ ಮತ್ತು ಹೋಗುತ್ತದೆ. ಅದಕ್ಕಾಗಿಯೇ ಲಕ್ಷ್ಮಿ ದೇವಿಯನ್ನು ಚಂಚಲೆ ಎಂದೂ ಕರೆಯುತ್ತಾರೆ. ಆದರೆ ನಾವು ಕಲಿತ ವಿದ್ಯೆ ಮತ್ತು ಕಷ್ಟಪಟ್ಟು ಸಂಪಾದಿಸಿದ ಜ್ಞಾನ ಎಲ್ಲೂ ಹೋಗುವುದಿಲ್ಲ. ಅದಕ್ಕಾಗಿಯೇ ಅನೇಕ ಜನರು ಶಾರದಾ ದೇವಿಯನ್ನು ಆಕೆಯ ಆಶೀರ್ವಾದಕ್ಕಾಗಿ ಪೂಜಿಸುತ್ತಾರೆ.

ಇಂತಹ ಶುಭ ದಿನದಂದು ಆಘಾತಕಾರಿ ಘಟನೆಯೊಂದು ನಡೆದಿದೆ. ವಸಂತ ಪಂಚಮಿಯಂದು ಸರಸ್ವತಿ ದೇವಿಯ ವಿಗ್ರಹಗಳನ್ನು ಪೂಜಿಸಲಾಗುತ್ತದೆ. ಶಾಲೆ, ಕಾಲೇಜು ಮತ್ತು ಹಳ್ಳಿಗಳಲ್ಲಿ ವಿಶೇಷವಾಗಿ ವೀಣೆ, ಪುಸ್ತಕಗಳು, ಕಮಲದ ಹೂವು ಮತ್ತು ಜಪಮಾಲೆಯನ್ನು ಕೈಯಲ್ಲಿ ಹೊಂದಿರುವ ವಿಗ್ರಹಗಳನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಆದರೆ, ತ್ರಿಪುರಾದ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜಿನಲ್ಲಿ ಸರಸ್ವತಿ ದೇವಿಯ ಪ್ರತಿಮೆಯನ್ನು ಅತ್ಯಂತ ತಪ್ಪಾಗಿ ವಿರೂಪಗೊಳಿಸಲಾಗಿದೆ ಎಂಬ ಸುದ್ದಿ ಬೆಳಕಿಗೆ ಬಂದಿದೆ.

ಮತ್ತಷ್ಟು ಓದಿ: Vasant Panchami 2024: ವಸಂತ ಪಂಚಮಿಯ ದಿನ ಈ ವಸ್ತುಗಳನ್ನು ದಾನ ಮಾಡಿ, ಭವಿಷ್ಯವೇ ಬದಲಾಗುತ್ತೆ!

ವಿಗ್ರಹವನ್ನು ಮಾಡುವಾಗ ಸಾಂಪ್ರದಾಯಿಕ ಸೀರೆಯಿಲ್ಲದೆ ತಯಾರಿಸಲಾಯಿತು. ಸೀರೆ ಇಲ್ಲದ ವಿಗ್ರಹವನ್ನು ಪೂಜಿಸಿದ್ದಕ್ಕೆ ಗದ್ದಲ ಶುರುವಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಜರಂಗದಳ ಕಾರ್ಯಕರ್ತರು ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ಕೂಡ ಸ್ಥಳಕ್ಕೆ ಆಗಮಿಸಿದ್ದು, ಇಡೀ ಪ್ರದೇಶ ಉದ್ವಿಗ್ನಗೊಂಡಿದೆ.

ಪ್ರತಿಮೆಯು ಹಿಂದೂ ದೇವಾಲಯಗಳ ಸಾಂಪ್ರದಾಯಿಕ ಶಿಲ್ಪಕಲೆಗಳಿಗೆ ಬದ್ಧವಾಗಿದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿಲ್ಲ ಎಂದು ಕಾಲೇಜು ಅಧಿಕಾರಿಗಳು ವಿವರಿಸಿದರು. ಪ್ಲಾಸ್ಟಿಕ್ ಶೀಟ್‌ಗಳಿಂದ ಮುಚ್ಚಿ ಪೂಜಾ ಮಂಟಪದ ಹಿಂದೆ ಇರಿಸಲಾಗಿದೆ. ಆದರೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆದರೆ, ಕಾಲೇಜು ಅಥವಾ ಎಬಿವಿಪಿ ಮತ್ತು ಬಜರಂಗದಳ ಅಧಿಕೃತ ದೂರು ದಾಖಲಿಸಿಲ್ಲ.

ಮತ್ತಷ್ಟು ಓದಿ: ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು