ಮದುವೆ ಚಿತ್ರೀಕರಣಕ್ಕೆಂದು ಬಂದ ವಿಡಿಯೋಗ್ರಾಫರ್ ವರನ ಅಪ್ರಾಪ್ತ ತಂಗಿಯೊಂದಿಗೆ ಪರಾರಿಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮುಜಾಫರ್ ಪುರದಲ್ಲಿ ಮದುವೆಗೆ ಬಂದಿದ್ದ ವಿಡಿಯೋಗ್ರಾಫರ್ ವರನ ಅಪ್ರಾಪ್ತ ಸಹೋದರಿಯೊಂದಿಗೆ ಓಡಿ ಹೋಗಿದ್ದಾನೆ. ಈ ಘಟನೆ ಬೆಳಕಿಗೆ ಬಂದ ನಂತರ ಬಾಲಕಿಯ ತಂದೆ ಅಹಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್ 6 ರಂದು ಮಗಳು ಮನೆಯಿಂದ ಮಾರುಕಟ್ಟೆಗೆ ಹೋಗಿದ್ದಳು ಎಂದು ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಇದಾದ ಬಳಿಕ ಆಕೆ ಮನೆಗೆ ಹಿಂತಿರುಗಿರಲಿಲ್ಲ, ನಂತರ ಗ್ರಾಮದ ವಿಡಿಯೋಗ್ರಾಫರ್ ತನ್ನ ಮಗಳನ್ನು ಅಪಹರಿಸಿರುವುದು ಬೆಳಕಿಗೆ ಬಂದಿದೆ. ಮಗನ ಮದುವೆಗೆ ವೀಡಿಯೋಗ್ರಫಿ ಮಾಡಲು ಅದೇ ವಿಡಿಯೋಗ್ರಾಫರ್ ನನ್ನು ನೇಮಿಸಿಕೊಂಡಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ,ಮಾಹಿತಿ ಪ್ರಕಾರ ಮಾರ್ಚ್ 6 ರಂದು ಗ್ರಾಮದ ಹುಡುಗನೊಬ್ಬನ ಮದುವೆ ನಡೆಯುತ್ತಿತ್ತು. ಮದುವೆಯ ಮೆರವಣಿಗೆ ಬೇರೆ ಊರಿಗೆ ಹೋಗಬೇಕಿತ್ತು.
ಮದುವೆ ಸಮಾರಂಭದ ಕವರ್ ಮಾಡಲು ವರನ ಸೋದರಮಾವ ಗ್ರಾಮದ ವಿಡಿಯೋಗ್ರಾಫರ್‌ಗೆ ಕರೆ ಮಾಡಿದ್ದರು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಇದೇ ವೇಳೆ ವರನ ಸಹೋದರಿ ಸಂಜೆ ಮಾರುಕಟ್ಟೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದಾಳೆ.
ಮತ್ತಷ್ಟು ಓದಿ: Telangana: ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಕುಸಿದು ಬಿದ್ದು ಯುವಕ ಸಾವು
ರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ಎರಡು ದಿನವಾದರೂ ಬಾಲಕಿ ಪತ್ತೆಯಾಗಿರಲಿಲ್ಲ. ಅಷ್ಟರಲ್ಲಿ ಯಾರೋ ಅಳಿಯನ ಸೋದರ ಮಾವನಿಗೆ ಅವನ ಹಳ್ಳಿಯ ವೀಡಿಯೋಗ್ರಾಫರ್ ಆಕೆಯನ್ನು ಅಪಹರಿಸಿದ್ದಾರೆ ಎಂದು ಹೇಳಿದರು. ಅಂದಿನಿಂದ ಕುಟುಂಬಸ್ಥರು ಬಾಲಕಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಮಗನ ಮದುವೆಗೆ ಬಂದಿದ್ದ ವೀಡಿಯೋಗ್ರಾಫರ್ ಆಕೆಯ ಮನವೊಲಿಸಿ ತನ್ನೊಂದಿಗೆ ಕರೆದೊಯ್ದಿದ್ದಾನೆ ಎಂದು ಸುತ್ತಮುತ್ತಲಿನ ಜನರು ಹೇಳಿದ್ದರು ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ, ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯನ್ನು ಗೋಲು ಕುಮಾರ್ ಎಂದು ಗುರುತಿಸಲಾಗಿದೆ. ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಹಿಯಾಪುರ ಪೊಲೀಸರು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ