Biotech Startup Expo 2022: ಬಯೋಟೆಕ್ ಸ್ಟಾರ್ಟ್​ಅಪ್ ಎಕ್ಸ್​ಪೋಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ

| Updated By: ಸುಷ್ಮಾ ಚಕ್ರೆ

Updated on: Jun 09, 2022 | 9:52 AM

ಬಯೋಟೆಕ್ ಸ್ಟಾರ್ಟ್ಅಪ್ ಎಕ್ಸ್​ಪೋ - 2022 ಇಂದು ಮತ್ತು ನಾಳೆ (ಜೂನ್10) ನಡೆಯುವ ಎರಡು ದಿನಗಳ ಕಾರ್ಯಕ್ರಮವಾಗಿದೆ. ಈ ಎಕ್ಸ್​ಪೋಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ.

Biotech Startup Expo 2022: ಬಯೋಟೆಕ್ ಸ್ಟಾರ್ಟ್​ಅಪ್ ಎಕ್ಸ್​ಪೋಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ
ಪ್ರಧಾನಿ ನರೇಂದ್ರ ಮೋದಿ
Follow us on

ನವದೆಹಲಿ: ದೆಹಲಿಯ ಪ್ರಗತಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಜೂನ್ 9) ಬೆಳಿಗ್ಗೆ 10.30ಕ್ಕೆ ಬಯೋಟೆಕ್ ಸ್ಟಾರ್ಟ್ಅಪ್ ಎಕ್ಸ್‌ಪೋ- 2022 (Biotech Startup Expo- 2022) ಉದ್ಘಾಟಿಸಲಿದ್ದಾರೆ. ಎಕ್ಸ್​ಪೋಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (PMO) ಮಾಹಿತಿ ನೀಡಿದೆ.

ಬಯೋಟೆಕ್ ಸ್ಟಾರ್ಟ್ಅಪ್ ಎಕ್ಸ್​ಪೋ – 2022 ಇಂದು ಮತ್ತು ನಾಳೆ (ಜೂನ್10) ನಡೆಯುವ ಎರಡು ದಿನಗಳ ಕಾರ್ಯಕ್ರಮವಾಗಿದೆ. ಇದನ್ನು ಡಿಪಾರ್ಟ್ಮೆಂಟ್ ಆಫ್ ಬಯೋಟೆಕ್ನಾಲಜಿ ಮತ್ತು ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (BIRAC) ಆಯೋಜಿಸಿದೆ. BIRAC ಸ್ಥಾಪನೆಯಾಗಿ ಹತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಎಕ್ಸ್‌ಪೋಗೆ ‘ಬಯೋಟೆಕ್ ಸ್ಟಾರ್ಟ್‌ಅಪ್ ಆವಿಷ್ಕಾರಗಳು: ಆತ್ಮನಿರ್ಭರ್ ಭಾರತ್ ಕಡೆಗೆ’ ಎಂಬ ಥೀಮ್ ಇಡಲಾಗಿದೆ.

ಇದನ್ನೂ ಓದಿ
India Covid Updates: ಕೊರೊನಾ 4ನೇ ಅಲೆ ಆತಂಕ: ದೇಶದಲ್ಲಿ 7240 ಮಂದಿಗೆ ಕೊರೊನಾ ಸೋಂಕು
Shocking News: ಆಸ್ಪತ್ರೆಯಿಂದ ಮಗನ ಶವ ಪಡೆಯಲು ಭಿಕ್ಷೆ ಬೇಡುತ್ತಿರುವ ಅಪ್ಪ-ಅಮ್ಮ!
ಆಗಸ್ಟ್‌ ಮೊದಲ ವಾರದಲ್ಲಿ ರಾಜ್ಯದ ಮೊದಲ ‘ಭಾರತ್‌ ಗೌರವ್‌ ರೈಲು ಯಾತ್ರೆ ಪ್ರಾರಂಭ

ಇದನ್ನೂ ಓದಿ: ಮೋದಿ ಒಬ್ಬೊಬ್ಬರ ತಲೆ ಮೇಲೆ 1.75 ಲಕ್ಷ ಸಾಲ ಇಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಉದ್ಯಮಿಗಳು, ಹೂಡಿಕೆದಾರರು, ಉದ್ಯಮದ ಪ್ರಮುಖರು, ವಿಜ್ಞಾನಿಗಳು, ಸಂಶೋಧಕರು, ಜೈವಿಕ ಇನ್ಕ್ಯುಬೇಟರ್‌ಗಳು, ತಯಾರಕರು, ನಿಯಂತ್ರಕರು, ಸರ್ಕಾರಿ ಅಧಿಕಾರಿಗಳು ಇತ್ಯಾದಿಗಳನ್ನು ಸಂಪರ್ಕಿಸಲು ಎಕ್ಸ್‌ಪೋ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಎಕ್ಸ್‌ಪೋದಲ್ಲಿ ಸುಮಾರು 300 ಸ್ಟಾಲ್‌ಗಳನ್ನು ತೆರೆಯಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:51 am, Thu, 9 June 22