ಪಶ್ಚಿಮ ಬಂಗಾಳ: ಹಿಂಸೆ ಹೆಚ್ಚಿಸುತ್ತಿರುವ ವಿಧಾನಸಭಾ ಚುನಾವಣಾ ಪ್ರಚಾರ
ಪೂರ್ವ ಮಿಡ್ನಾಪೂರ್ ಜಿಲ್ಲೆಯ ಖೆಜುರಿಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಕಚ್ಚಾ ಬಾಂಬ್ ಸಿಡಿದು ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ, ಕಲಹ, ಗಲಾಟೆಗಳು ವಿಪರೀತದತ್ತ ಸಾಗುತ್ತಿವೆ. ಬಿಜೆಪಿ ಕಾರ್ಯಕರ್ತರ ಮೆರವಣಿಗೆಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಮರುದಿನವೇ ಬಿಜೆಪಿ-ಟಿಎಂಸಿ ಕಾರ್ಯಕರ್ತರ ನಡುವಿನ ಕಲಹ ವರದಿಯಾಗಿದೆ.
ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ಆಯೋಜಿಸಿದ್ದ ಪ್ರಚಾರ ಮೆರವಣಿಗೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಕಲಹ ನಡೆದಿದೆ. ಪೂರ್ವ ಮಿಡ್ನಾಪೂರ್ ಜಿಲ್ಲೆಯ ಖೆಜುರಿಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಕಚ್ಚಾ ಬಾಂಬ್ ಸಿಡಿದು ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.
ನಿನ್ನೆಯಷ್ಟೇ ಬಿಜೆಪಿ ಆಯೋಜಿಸಿದ್ದ ಮೆರವಣಿಗೆಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ತಮ್ಮತ್ತ ಕಲ್ಲು ಎಸೆದವರು ಟಿಎಂಸಿ ಬಾವುಟ ಹಿಡಿದಿದ್ದರು ಎಂದು ಬಿಜೆಪಿ ಕಾರ್ಯಕರ್ತರು ಆಪಾದಿಸಿದ್ದರು. ಹತ್ತಿರವಾಗುತ್ತಿರುವ ವಿಧಾನಸಭಾ ಚುನಾವಣಾ ಪ್ರಚಾರ ಪಶ್ಚಿಮ ಬಂಗಾಳದಲ್ಲಿ ಹಿಂಸೆಯನ್ನಂತೂ ಹೆಚ್ಚಿಸುತ್ತಿದೆ.
‘ಒಂದಾಗಿ ಬಿಜೆಪಿಯನ್ನು ವಿರೋಧಿಸೋಣ ಬನ್ನಿ..’ ಕಾಂಗ್ರೆಸ್ಗೆ ಆಹ್ವಾನ ನೀಡಿದ ಟಿಎಂಸಿ