ಮೂರು ರಾಜ್ಯಗಳಲ್ಲಿ ಶಾಸಕಾಂಗ ಪಕ್ಷಗಳ ನಾಯಕರ ಆಯ್ಕೆಗೆ ವೀಕ್ಷಕರನ್ನು ನೇಮಿಸಿದ ಬಿಜೆಪಿ

ಮಧ್ಯಪ್ರದೇಶಕ್ಕೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೆ ಲಕ್ಷ್ಮಣ್ ಮತ್ತು ಆಶಾ ಲಾಕ್ರಾ ಅವರನ್ನು ನೇಮಿಸಲಾಗಿದೆ. ಛತ್ತೀಸ್‌ಗಢದಲ್ಲಿ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಸರ್ಬಾನಂದ ಸೋನೋವಾಲ್ ಮತ್ತು ದುಷ್ಯಂತ್ ಗೌತಮ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಅದೇ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿನೋದ್ ತಾವಡೆ ಮತ್ತು ಸರೋಜ್ ಪಾಂಡೆ ಅವರನ್ನು ರಾಜಸ್ಥಾನದ ವೀಕ್ಷಕರನ್ನಾಗಿ ಪಕ್ಷ ನೇಮಕ ಮಾಡಿದೆ.

ಮೂರು ರಾಜ್ಯಗಳಲ್ಲಿ ಶಾಸಕಾಂಗ ಪಕ್ಷಗಳ ನಾಯಕರ ಆಯ್ಕೆಗೆ ವೀಕ್ಷಕರನ್ನು ನೇಮಿಸಿದ ಬಿಜೆಪಿ
ಬಿಜೆಪಿ
Follow us
ರಶ್ಮಿ ಕಲ್ಲಕಟ್ಟ
|

Updated on:Dec 08, 2023 | 12:32 PM

ದೆಹಲಿ ಡಿಸೆಂಬರ್ 08: ಮಧ್ಯಪ್ರದೇಶ (Madhya Pradesh), ಛತ್ತೀಸ್‌ಗಢ (Chhattisgarh) ಮತ್ತು ರಾಜಸ್ಥಾನದ (Rajasthan) ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಐದು ದಿನಗಳ ನಂತರ, ಬಿಜೆಪಿ(BJP) ಈ ರಾಜ್ಯದಲ್ಲಿ ತನ್ನ ಶಾಸಕಾಂಗ ಪಕ್ಷಗಳ ನಾಯಕರನ್ನು ಆಯ್ಕೆ ಮಾಡಲು ಕೇಂದ್ರ ವೀಕ್ಷಕರನ್ನು ಶುಕ್ರವಾರ ನೇಮಿಸಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿನೋದ್ ತಾವಡೆ ಮತ್ತು ಸರೋಜ್ ಪಾಂಡೆ ಅವರನ್ನು ರಾಜಸ್ಥಾನದ ವೀಕ್ಷಕರನ್ನಾಗಿ ಪಕ್ಷ ನೇಮಕ ಮಾಡಿದೆ.

ಮಧ್ಯಪ್ರದೇಶಕ್ಕೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೆ ಲಕ್ಷ್ಮಣ್ ಮತ್ತು ಆಶಾ ಲಾಕ್ರಾ ಅವರನ್ನು ನೇಮಿಸಲಾಗಿದೆ. ಛತ್ತೀಸ್‌ಗಢದಲ್ಲಿ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಸರ್ಬಾನಂದ ಸೋನೋವಾಲ್ ಮತ್ತು ದುಷ್ಯಂತ್ ಗೌತಮ್ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಭವಿಷ್ಯದ ಮುಖ್ಯಮಂತ್ರಿಗಳನ್ನು ಹೆಸರಿಸಲಿರುವ ಹೊಸದಾಗಿ ಚುನಾಯಿತ ಶಾಸಕರ ಸಭೆಗಳನ್ನು ಮೇಲ್ವಿಚಾರಣೆ ಮಾಡಲು ವೀಕ್ಷಕರು ಆಯಾ ರಾಜ್ಯಕ್ಕೆ ತೆರಳುವ ಸಾಧ್ಯತೆಯಿದೆ ಎಂದು ಬಿಜೆಪಿ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಮುಖ್ಯಮಂತ್ರಿಯ ಆಯ್ಕೆಯ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಹೊಸ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವಲ್ಲಿ ಪಕ್ಷವು ಸಾಮಾಜಿಕ, ಪ್ರಾದೇಶಿಕ, ಆಡಳಿತ ಮತ್ತು ಸಾಂಸ್ಥಿಕ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು.

ರಾಜಸ್ಥಾನ ಮತ್ತು ಛತ್ತೀಸ್‌ಗಢದಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅನ್ನು ಕೆಳಗಿಳಿಸಿದ ಬಿಜೆಪಿ ಮಧ್ಯಪ್ರದೇಶದಲ್ಲಿ ಭರ್ಜರಿ ಗೆಲುವಿನೊಂದಿಗೆ ಅಧಿಕಾರ ಉಳಿಸಿಕೊಂಡಿದೆ. ಈ ಮೂಲಕ ಬಿಜೆಪಿ ಹಿಂದಿ ಹಾರ್ಟ್ ಲ್ಯಾಂಡ್ ನಲ್ಲಿ ತನ್ನ ಹಿಡಿತವನ್ನು ಬಿಗಿಗೊಳಿಸಿದ್ದು, 2024 ರ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ದೊಡ್ಡ ಉತ್ತೇಜನವನ್ನು ನೀಡಿತು.

90 ಸದಸ್ಯ ಬಲದ ಛತ್ತೀಸ್‌ಗಢ ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ 54 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ 35 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ರಾಜಸ್ಥಾನದಲ್ಲಿ ಬಿಜೆಪಿ 199 ಸ್ಥಾನಗಳಲ್ಲಿ ಒಟ್ಟು 115 ಸ್ಥಾನಗಳನ್ನು ಗೆದ್ದಿದೆ. ಮಧ್ಯಪ್ರದೇಶದಲ್ಲಿ, 230 ಸದಸ್ಯ ಬಲದ ವಿಧಾನಸಭೆಯಲ್ಲಿ 163 ಸ್ಥಾನಗಳನ್ನು ಗೆದ್ದ ನಂತರ ಬಿಜೆಪಿ ಆಡಳಿತ ವಿರೋಧಿ ಹೋರಾಟವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿಸರ್ಕಾರದ ವಿರುದ್ಧ ಸಮರಸಾರಬೇಕಿದ್ದ ಬಿಜೆಪಿಯಲ್ಲೇ ಬಿರುಕು: ಅಧಿವೇಶದನಲ್ಲಿ ಆಗಿದ್ದೇನು ಗೊತ್ತಾ?

ಆದಾಗ್ಯೂ, 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಬಿಜೆಪಿ ಕೇವಲ ಎಂಟು ಸ್ಥಾನಗಳನ್ನು ಗಳಿಸಿತು, ಏಕೆಂದರೆ ಕೆ ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅನ್ನು ಉಚ್ಚಾಟಿಸುವ ಮೂಲಕ ಕಾಂಗ್ರೆಸ್ ದಕ್ಷಿಣ ರಾಜ್ಯದಲ್ಲಿ ಗೆದ್ದಿತು. ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ರೇವಂತ್ ರೆಡ್ಡಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ಭಾನುವಾರದ ಚುನಾವಣಾ ಫಲಿತಾಂಶಗಳ ನಂತರ, ಮೂರು ರಾಜ್ಯಗಳ ನಾಯಕರು ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತಿದ್ದಾರೆ. ಆದಾಗ್ಯೂ, ಪಕ್ಷದೊಳಗಿನ ಮೂಲಗಳು ಅವುಗಳ ಮಹತ್ವವನ್ನು ಕಡಿಮೆಗೊಳಿಸಿದ್ದು, ಇಂತಹ ಸಭೆಗಳು ವಾಡಿಕೆ ಎಂದು ಪಿಟಿಐ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:28 pm, Fri, 8 December 23