AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ವಿರುದ್ಧ ಸಮರಸಾರಬೇಕಿದ್ದ ಬಿಜೆಪಿಯಲ್ಲೇ ಬಿರುಕು: ಅಧಿವೇಶದನಲ್ಲಿ ಆಗಿದ್ದೇನು ಗೊತ್ತಾ?

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ನಾಯಕರ ನಡುವೆಯೆ ಬಿರುಕು ಕಾಣಿಸಿಕೊಂಡಿದೆ. ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಸಮರಸಾರಬೇಕಾದ ಬಿಜೆಪಿ ನಾಯಕರು ಅದ್ಯಾಕೋ ಗೊಂದಲದಲ್ಲಿ ಮುಳುಗಿದಂತೆ ಕಾಣಿಸಿದೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿವರ.

ಸರ್ಕಾರದ ವಿರುದ್ಧ ಸಮರಸಾರಬೇಕಿದ್ದ ಬಿಜೆಪಿಯಲ್ಲೇ ಬಿರುಕು: ಅಧಿವೇಶದನಲ್ಲಿ ಆಗಿದ್ದೇನು ಗೊತ್ತಾ?
ಕಿರಣ್​ ಹನಿಯಡ್ಕ
| Updated By: ರಮೇಶ್ ಬಿ. ಜವಳಗೇರಾ|

Updated on: Dec 08, 2023 | 8:04 AM

Share

ಬೆಳಗಾವಿ, (ಡಿಸೆಂಬರ್ 08): ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಸರ್ಕಾರದ ವಿರುದ್ಧ ಹೋರಾಟಕ್ಕೆ ನಿಂತ ಬಿಜೆಪಿಯಲ್ಲಿ ಹೊಂದಾಣಿಕೆ ಕೊರತೆ ಸೃಷ್ಟಿಯಾದಂತೆ ಕಾಣುತ್ತಿದೆ. ನಿನ್ನೆ (ಡಿಸೆಂಬರ್ 07) ಸದನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಸಭಾತ್ಯಾಗ ಮಾಡಿದ್ರೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಂ ಕಲಾಪದಲ್ಲೇ ನಿಂತು ಚರ್ಚೆ ಮಾಡಿತು. ಇನ್ನು ಒಬ್ಬರು ಧರಣಿ ಮಾಡೋಣ ಎಂದು ಹೇಳಿದ್ರೆ, ಮತ್ತೊಬ್ಬರು ಸಭಾತ್ಯಾಗ ಮಾಡೋಣ ಅಂತಾ ಗೊಂದಲ ಎದ್ದಿರುವುದು ಬಹಿರಂಗವಾಗಿದೆ. ಇದರೊಂದಿಗೆ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಬೆಳಗಾವಿ ಕಾರ್ಪೊರೇಟರ್ ರಮೇಶ್ ಪಾಟೀಲ್ ಪ್ರಕರಣವನ್ನ ಶಾಸಕ ಅಭಯ್ ಪಾಟೀಲ್ ಪ್ರಸ್ತಾಪಿಸಿದ್ರು. ಬಳಿಕ ಎದ್ದು ನಿಂತ ಸುನಿಲ್ ಕುಮಾರ್, ಪೃಥ್ವಿ ಸಿಂಗ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಈ ರಾಜ್ಯದ ಪೊಲೀಸರಿಗೆ ತಾಕತ್ ಇಲ್ಲ, ರಮೇಶ್ ಪಾಟೀಲ್ ಪ್ರಕರಣದಲ್ಲಿ ಆಸ್ಪತ್ರೆಗೆ ಹೋಗಿ ಬಂಧಿಸುವಷ್ಟು ಆತುರತೆ ಏನಿತ್ತು ಅಂತಾ ಕಿಡಿಕಾರಿದ್ರು. ಆಗ ಆಡಳಿತ ಪಕ್ಷ ಮತ್ತು ವಿಪಕ್ಷದ ನಡುವೆ ಮಾತಿಗೆ ಮಾತು ಬೆಳೆದು R.ಅಶೋಕ್ ಸಭಾತ್ಯಾಗಕ್ಕೆ ಕರೆ ನೀಡಿದ್ರು. ಆದ್ರೆ ಸಭಾತ್ಯಾಗ ಬೇಡ ಎಂದು, ಅಭಯ್ ಪಾಟೀಲ್ ಮತ್ತು S.R.ವಿಶ್ವಾನಾಥ್ ಅಲ್ಲೇ ನಿಂತ್ರು.. ವಿಜಯೇಂದ್ರರತ್ತ ತೆರಳಿ ಸಭಾತ್ಯಾಗ ಬೇಡ, ಧರಣಿ ಮಾಡೋಣ ಅಂತಾ ಹೇಳ್ತಿದ್ರು. ಅಶೋಕ್ ನೇತೃತ್ವದಲ್ಲಿ ಅರ್ಧ ಶಾಸಕರು ಸದನದಿಂದ ಹೊರ ಬಂದ್ರೆ, ವಿಜಯೇಂದ್ರ ಜೊತೆ ಸದನದೊಳಗೆ ಮತ್ತೊಂದಿಷ್ಟು ಶಾಸಕರು ಉಳಿದುಕೊಂಡಿದ್ರು. ಸದನದಿಂದ ಹೊರ ಬಂದ ಬಳಿಕ ಆರ್​.ಅಶೋಕ್, ಉಳಿದವರನ್ನು ಹೊರಗೆ ಕರೆಯಿರಿ ಎಂದ ವಿಜಯೇಂದ್ರ ಶಾಸಕರೊಂದಿಗೆ ಹೊರನಡೆದ್ರು.

ಇದನ್ನೂ ಓದಿ: Belgavi Session: ಸದನದಲ್ಲಿ ಮಾರ್ದನಿಸಿದ ಬಿಜೆಪಿ ಮುಖಂಡನ ಹಲ್ಲೆ ಪ್ರಕರಣ; ಸರ್ಕಾರ, ಬಿಜೆಪಿ ಜಟಾಪಟಿ

ಸದನದಿಂದ ಹೊರ ಬಂದ ಬಳಿಕ ಎರಡೆರೆಡು ನಿರ್ಧಾರದ ಬಗ್ಗೆ, ಬಿಜೆಪಿ ಶಾಸಕರು ಏರುಧ್ವನಿಯಲ್ಲಿ ಮೊಗಸಾಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ರು. ಇಂಟ್ರೆಸ್ಟಿಂಗ್ ಅಂದ್ರೆ, ಕೆಲ ಹೊತ್ತಿನ ಬಳಿಕ ವಿಪಕ್ಷ ನಾಯಕ ಆರ್​.ಅಶೋಕ್ ಮತ್ತು ಹಲವು ಬಿಜೆಪಿ ಶಾಸಕರು ಸದನಕ್ಕೆ ಹಾಜರಾದ್ರು. ಆದ್ರೆ, ಶಾಸಕ ವಿಜಯೇಂದ್ರ, ಎಸ್.ಆರ್‌. ವಿಶ್ವನಾಥ್ ಸೇರಿ ಕೆಲ ಬಿಜೆಪಿ ಶಾಸಕರು ಸದನಕ್ಕೆ ಬರಲೇ ಇಲ್ಲ. ಇನ್ನು ಶಾಸಕ ಅಭಯ್ ಪಾಟೀಲ್ ಅಂತೂ ಸ್ವಪಕ್ಷ ಬಿಜೆಪಿ ಸದಸ್ಯರ ವಿರುದ್ಧವೇ ಹರಿಹಾಯ್ದರು.

ಒಟ್ಟಿನಲ್ಲಿ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಸಮರಸಾರಬೇಕಾದ ಬಿಜೆಪಿ ನಾಯಕರು ಅದ್ಯಾಕೋ ಗೊಂದಲದಲ್ಲಿ ಮುಳುಗಿದಂತೆ ಕಾಣುತ್ತಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ