ಸುಶೀಲ್ ಕುಮಾರ್ ಮೋದಿ ತ್ಯಾಗಕ್ಕೆ ಸಿಕ್ತು ​ಪ್ರತಿಫಲ! ಎಲ್​ಜೆಪಿಗೆ ಕೈತಪ್ಪಿತು ಒಂದು ರಾಜ್ಯಸಭಾ ಸ್ಥಾನ

ರಾಮ್ ವಿಲಾಸ್ ಪಾಸ್ವಾನ್ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಎನ್​ಡಿಎ ಮೈತ್ರಿಕೂಟ ಸುಶೀಲ್ ಕುಮಾರ್ ಮೋದಿಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಿದೆ. ಬಿಹಾರ ಉಪ ಮುಖ್ಯಮಂತ್ರಿ ಸ್ಥಾನ ತ್ಯಾಗ ಮಾಡಿದ ಸುಶೀಲ್ ಮೋದಿಗೆ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಸ್ಥಾನದ ಉಡುಗೊರೆ ನೀಡಿದೆ.

ಸುಶೀಲ್ ಕುಮಾರ್ ಮೋದಿ ತ್ಯಾಗಕ್ಕೆ ಸಿಕ್ತು ​ಪ್ರತಿಫಲ! ಎಲ್​ಜೆಪಿಗೆ ಕೈತಪ್ಪಿತು ಒಂದು ರಾಜ್ಯಸಭಾ ಸ್ಥಾನ
ಸುಶೀಲ್ ಕುಮಾರ್ ಮೋದಿ (ಸಾಂದರ್ಭಿಕ ಚಿತ್ರ)
Follow us
guruganesh bhat
| Updated By: ಸಾಧು ಶ್ರೀನಾಥ್​

Updated on:Nov 28, 2020 | 3:05 PM

ಪಾಟ್ನಾ: ಬಿಹಾರ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಈ ಮೂಲಕ ರಾಷ್ಟ್ರ ರಾಜಕೀಯಕ್ಕೆ ಸುಶೀಲ್ ಕುಮಾರ್ ಮೋದಿಯವರ ಎಂಟ್ರಿ ಪಕ್ಕಾ ಆಗಿದೆ. ರಾಮ್ ವಿಲಾಸ್ ಪಾಸ್ವಾನ್ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಎನ್​ಡಿಎ ಮೈತ್ರಿಕೂಟ ಸುಶೀಲ್ ಕುಮಾರ್ ಮೋದಿಯನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಿದೆ. ಡಿಸೆಂಬರ್ 14ರಂದು ನಡೆಯಲಿರುವ ಚುನಾವಣೆ ನಡೆಯಲಿದೆ. ಡಿಸಿಎಂ ಪಟ್ಟ ತ್ಯಾಗ ಮಾಡಿದ್ದಕ್ಕ ಸಿಕ್ಕ ಉಡುಗೊರೆ 243 ಸಂಖ್ಯಾಬಲದ ರಾಜ್ಯಸಭೆಯಲ್ಲಿ ಸುಶೀಲ್ ಮೋದಿ ಆಯ್ಕೆಯಾಗಲು 123 ಮತಗಳನ್ನು ಪಡೆಯಬೇಕಿದೆ. ಎನ್​ಡಿಎ ಮೈತ್ರಿಕೂಟದ ಬಲ 125 ಇರುವ ಕಾರಣ, ಸುಶೀಲ್ ಮೋದಿ ಆಯ್ಕೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಲಾಗುತ್ತಿದೆ. ಬಿಹಾರ ಉಪ ಮುಖ್ಯಮಂತ್ರಿ ಸ್ಥಾನ ತ್ಯಾಗ ಮಾಡಿದ ಸುಶೀಲ್ ಮೋದಿಗೆ ಬಿಜೆಪಿ ಹೈಕಮಾಂಡ್ ರಾಜ್ಯಸಭಾ ಸ್ಥಾನದ ಉಡುಗೊರೆ ನೀಡಿದೆ.

ಎಲ್​ಜೆಪಿ ಕೈತಪ್ಪಿದ ರಾಜ್ಯಸಭೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ರಾಮ್ ವಿಲಾಸ್ ಪಾಸ್ವಾನ್​ರ ಎಲ್​ಜೆಪಿ ನಡುವಿನ ಒಪ್ಪಂದದ ಪ್ರಕಾರ ಆರು ಲೋಕಸಭಾ ಸ್ಥಾನ ಮತ್ತು ಒಂದು ರಾಜ್ಯಸಭಾ ಸ್ಥಾನ ಎಲ್​ಜೆಪಿಗೆ ದಕ್ಕಿತ್ತು. ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅಧಿಕಾರಾವಧಿ 2024ರವರೆಗಿತ್ತು. ಅವರ ಮರಣದ ನಂತರ ತೆರವಾದ ಸ್ಥಾನಕ್ಕೆ ರಾಮ್ ವಿಲಾಸ್ ಪಾಸ್ವಾನ್ ಪತ್ನಿ ರೀನಾ ಪಾಸ್ವಾನ್ ಹೆಸರು ಕೇಳಿಬಂದಿತ್ತು. ಆದರೆ ಈಗ, ಎಲ್​ಜೆಪಿ ಪಾಲಿನ ಒಂದು ರಾಜ್ಯಸಭಾ ಸ್ಥಾನವೂ ಬಿಜೆಪಿ ಪಾಲಾಗಿದೆ.

Published On - 2:27 pm, Sat, 28 November 20