ಬಿಜೆಪಿ ಸರ್ಕಾರಕ್ಕೆ ಕಾಶ್ಮೀರವನ್ನು ಸಂಭಾಳಿಸಲು ಆಗುತ್ತಿಲ್ಲ, ಕೆಟ್ಟ ರಾಜಕೀಯ ಮಾಡುವುದಷ್ಟೇ ಅವರಿಗೆ ಗೊತ್ತು: ಕೇಜ್ರಿವಾಲ್

| Updated By: ರಶ್ಮಿ ಕಲ್ಲಕಟ್ಟ

Updated on: Jun 05, 2022 | 1:46 PM

ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕಾಶ್ಮೀರಿ ಪಂಡಿತರು ಬಲವಂತವಾಗಿ ಮನೆ ತೊರೆಯುವಂತೆ ಮಾಡಲಾಗುತ್ತಿದೆ. 1990ರಲ್ಲಿ ನಡೆದದ್ದೇ ಪುನರಾವರ್ತನೆ ಆಗುತ್ತಿದೆ ಎಂದಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಭದ್ರತೆ ಒದಗಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ

ಬಿಜೆಪಿ ಸರ್ಕಾರಕ್ಕೆ ಕಾಶ್ಮೀರವನ್ನು ಸಂಭಾಳಿಸಲು ಆಗುತ್ತಿಲ್ಲ, ಕೆಟ್ಟ ರಾಜಕೀಯ ಮಾಡುವುದಷ್ಟೇ ಅವರಿಗೆ ಗೊತ್ತು: ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us on

ದೆಹಲಿ: ಕಾಶ್ಮೀರದಲ್ಲಿ ನಾಗರಿಕರ ಉದ್ದೇಶಿತ ಹತ್ಯೆ ಖಂಡಿಸಿ ಆಮ್ಮ ಆದ್ಮಿ ಪಕ್ಷ (Aam Aadmi Party) ಭಾನುವಾರ ಜಂತರ್ ಮಂತರ್​​ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರವನ್ನು ಟೀಕಿಸಿದೆ. ಆಪ್ ಕಾರ್ಯಕರ್ತರು, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಪರಿಸರ ಸಚಿವ ಗೋಪಾಲ ರಾಯ್, ರಾಜ್ಯ ಸಭಾ ಸಂಸದ ಸಂಜಯ್ ಸಿಂಗ್ ಮತ್ತು ಇತರ ಶಾಸಕರು ಜನ್ ಆಕ್ರೋಶ್ ರ್ಯಾಲಿಯಲ್ಲಿ (Jan Aakrosh Rally) ಭಾಗಿಯಾಗಿದ್ದು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ. ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ (Arvind Kejriwal) ಕಾಶ್ಮೀರಿ ಪಂಡಿತರು ಬಲವಂತವಾಗಿ ಮನೆ ತೊರೆಯುವಂತೆ ಮಾಡಲಾಗುತ್ತಿದೆ. 1990ರಲ್ಲಿ ನಡೆದದ್ದೇ ಪುನರಾವರ್ತನೆ ಆಗುತ್ತಿದೆ ಎಂದಿದ್ದಾರೆ. ಕಾಶ್ಮೀರಿ ಪಂಡಿತರಿಗೆ ಭದ್ರತೆ ಒದಗಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಹಲವಾರು ಸಭೆಗಳನ್ನು ನಡೆಸಲಾಗಿದೆ, ಕಾರ್ಯಯೋಜನೆ ಏನು ಎಂಬುದನ್ನು ಅರಿಯಲು ಎಲ್ಲರೂ ಬಯಸುತ್ತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಕಾಶ್ಮೀರವನ್ನು ಸಂಭಾಳಿಸಲು ಆಗುತ್ತಿಲ್ಲ, ಅವರಿಗೆ ಕೆಟ್ಟ ರಾಜಕೀಯ ಮಾಡುವುದಷ್ಟೇ ಗೊತ್ತು ಎಂದು ಕೇಜ್ರಿವಾಲ್ ಟೀಕಾ ಪ್ರಹಾರ ಮಾಡಿದ್ದಾರೆ. ಕಾಶ್ಮೀರಿ ಪಂಡಿತರ ಬೇಡಿಕೆ ಈಡೇರಿಸಿ, ಅವರಿಗೆ ಭದ್ರತೆ ನೀಡಿ. ಕಾಶ್ಮೀರ ಕಣಿವೆಯಲ್ಲಿ ಕಾರ್ಯ ಯೋಜನೆ ರೂಪಿಸಿ ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.


ಮೂಕ ಮತ್ತು ಕಿವುಡು ಆಗಿರುವ ಬಿಜೆಪಿ ಸರ್ಕಾರವನ್ನು ಬಡಿದೆಬ್ಬಿಸಲು ಬಂದಿದ್ದೇವೆ: ಮನೀಶ್ ಸಿಸೋಡಿಯಾ

ಜಂತರ್ ಮಂತರ್ ನಲ್ಲಿ ಆಮ್ ಆದ್ಮಿಯ ಪ್ರತಿಭಟನಾ ರ್ಯಾಲಿಯನ್ನುದ್ದೇಶಿ ಮಾತನಾಡಿದ ಮನೀಶ್ ಸಿಸೋಡಿಯಾ (Manish Sisodia) ಮೂಕ ಮತ್ತು ಕಿವುಡು ಆಗಿರುವ ಬಿಜೆಪಿ ಸರ್ಕಾರವನ್ನು ಬಡಿದೆಬ್ಬಿಸಲು ಇಂದು ನಾವು ಇಲ್ಲಿಗೆ ಬಂದಿದ್ದೇವೆ. ಕಾಶ್ಮೀರದಲ್ಲಿ ಮತಗಳನ್ನು ಪಡೆದಬಿಡೆಪಿ ಇದೀಗ ಕಾಶ್ಮೀರಿ ಪಂಡಿತರ ಹತ್ಯೆಯಾಗುತ್ತಿರುವಾಗ ನಿದ್ದೆ ಮಾಡುತ್ತಿದೆ. ಹತ್ಯೆ ಭೀತಿಯಿಂದ ಅವರು ತಮ್ಮ ತಾಯ್ನಾಡನ್ನು ಬಿಟ್ಟುಹೋಗುತ್ತಿದ್ದಾರೆ ಎಂದು ಸಿಸೋಡಿಯಾ ಹೇಳಿದ್ದಾರೆ.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವೈಫಲ್ಯದಿಂದಾಗಿ ನಮ್ಮ ಸಹೋದರ ಸಹೋದರಿಯರಾದ ಕಾಶ್ಮೀರಿ ಪಂಡಿತರು ಹತ್ಯೆಯಾಗುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಹೆಸರಲ್ಲಿ ಮತ ಪಡೆದ ಬಿಜೆಪಿ ಸರ್ಕಾರ ಇಲ್ಲೀಗ ಜನರ ಹತ್ಯೆ ನಡೆದಿರುವಾಗ ಹಿಂದೆ ಸರಿದಿದೆ ಎಂದು ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ