ಮುಂದಿನ ದಿನಗಳಲ್ಲಿ ಮನೀಶ್ ಸಿಸೋಡಿಯಾರನ್ನು ಬಂಧಿಸಲಿದೆ ಕೇಂದ್ರ; ನಮ್ಮೆಲ್ಲರನ್ನೂ ಒಟ್ಟಿಗೆ ಜೈಲಿಗೆ ಹಾಕಿ: ಮೋದಿಗೆ ಕೇಜ್ರಿವಾಲ್ ಮನವಿ

“ಸತ್ಯೇಂದರ್ ಜೈನ್ ಮತ್ತು ಮನೀಶ್ ಸಿಸೋಡಿಯಾ ಅವರಂತಹ ಜನರನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸುವ ಮೂಲಕ, ಅವರು ದೆಹಲಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉತ್ತಮ ಕೆಲಸವನ್ನು ನಿಲ್ಲಿಸಲು ಬಯಸುತ್ತಾರೆ. ಆದರೆ ಇದು ಸಂಭವಿಸಲು ನಾನು ಅನುಮತಿಸುವುದಿಲ್ಲ

ಮುಂದಿನ ದಿನಗಳಲ್ಲಿ ಮನೀಶ್ ಸಿಸೋಡಿಯಾರನ್ನು ಬಂಧಿಸಲಿದೆ ಕೇಂದ್ರ; ನಮ್ಮೆಲ್ಲರನ್ನೂ ಒಟ್ಟಿಗೆ ಜೈಲಿಗೆ ಹಾಕಿ: ಮೋದಿಗೆ ಕೇಜ್ರಿವಾಲ್ ಮನವಿ
ಅರವಿಂದ ಕೇಜ್ರಿವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 02, 2022 | 3:40 PM

ಮುಂದಿನ ದಿನಗಳಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಸುಳ್ಳು ಪ್ರಕರಣದ ನೆಪದಲ್ಲಿ ಬಂಧಿಸಲಾಗುವುದು ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಗುರುವಾರ ಹೇಳಿದ್ದಾರೆ. ಮೋದಿಯವರೇ, ಆಮ್ ಆದ್ಮಿ ಪಕ್ಷದ ಎಲ್ಲ ಸಚಿವರನ್ನು ಮತ್ತು ಶಾಸಕರು ಒಟ್ಟಿಗೆ ಬಂಧಿಸಿ ವಿಚಾರಣೆ ನಡೆಸಿ. ಕೊನೆಯಲ್ಲಿ ಎಲ್ಲರೂ ಯಾವುದೇ ಆರೋಪಗಳಿಲ್ಲದೆ ಹೊರಬರುತ್ತಾರೆ ಎಂದು ದೆಹಲಿ ಸಿಎಂ ಹೇಳಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಮತ್ತು ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಅವರು ಪ್ರಸ್ತುತ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೊಳಗಾಗಿದ್ದು, ಜೂನ್ 9 ರವರೆಗೆ ಇಡಿ ಕಸ್ಟಡಿಯಲ್ಲಿದ್ದಾರೆ. “ಕೇಂದ್ರ ಸರ್ಕಾರವು ಸತ್ಯೇಂದ್ರ ಜೈನ್ ಅವರನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸುತ್ತದೆ ಎಂದು ಕೆಲವು ತಿಂಗಳ ಹಿಂದೆ ನಾನು ನಿಮಗೆ ಹೇಳಿದ್ದು ನಿಮಗೆ ನೆನಪಿರಬಹುದು. ನಾನು ಇದನ್ನು ಅತ್ಯಂತ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಕೊಂಡಿದೇನೆ. ಇನ್ನು ಕೆಲವೇ ದಿನಗಳಲ್ಲಿ ಸಿಸೋಡಿಯಾ ಅವರನ್ನೂ ಕೇಂದ್ರ ಸರ್ಕಾರ ಬಂಧಿಸಲಿದೆ ಎಂದು ಇದೇ ಮೂಲಗಳು ನಿನ್ನೆ ನನಗೆ ತಿಳಿಸಿದ್ದವು. ಸಿಸೋಡಿಯಾ ವಿರುದ್ಧ ಸುಳ್ಳು ಪ್ರಕರಣಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ಸಂಸ್ಥೆಗಳಿಗೆ ಹೇಳಿದೆ ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

“ನಮ್ಮನ್ನು ಒಬ್ಬೊಬ್ಬರಾಗಿ ಬಂಧಿಸುವ ಬದಲು, ಆಮ್ ಆದ್ಮಿ ಪಕ್ಷದ ಎಲ್ಲಾ ಸಚಿವರು ಮತ್ತು ಶಾಸಕರನ್ನು ಒಟ್ಟಿಗೆ ಜೈಲಿಗೆ ಹಾಕಬೇಕು ಎಂದು ನಾನು ಕೈಮುಗಿದು ಮೋದಿಯವರಲ್ಲಿ ಕೇಳಿ ಕೊಳ್ಳುತ್ತೇನೆ. ನಿಮ್ಮ ಎಲ್ಲಾ ಏಜೆನ್ಸಿಗಳಿಗೆ ತಮ್ಮ ತನಿಖೆಯನ್ನು ಒಂದೇ ಬಾರಿಗೆ ಮಾಡಲು ಹೇಳಿ. ನೀವು ಒಬ್ಬೊಬ್ಬರಾಗಿ ಸಚಿವರನ್ನು ಬಂಧಿಸುತ್ತೀರಿ, ಇದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಕೆಲಸಗಳಿಗೆ ಅನಾನುಕೂಲವಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ
Image
Shadow Killing: ಭೀತಿ ಹುಟ್ಟಿಸುತ್ತಿರುವ ಹತ್ಯೆ, ಕಾಶ್ಮೀರ ತೊರೆಯುತ್ತಿರುವ ಹಿಂದೂಗಳು, ನಾಳೆ ಅಮಿತ್ ಶಾ ಭೇಟಿ
Image
ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾದ ಗುಜರಾತ್ ನಾಯಕ ಹಾರ್ದಿಕ್ ಪಟೇಲ್
Image
ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಾಟ ಹೇಳಿಕೆ ವಿಚಾರ: ಈಶ್ವರಪ್ಪ ವಿರುದ್ಧ ದೆಹಲಿಯಲ್ಲಿ ಆಪ್​ ಪಕ್ಷದ ರಾಜ್ಯಸಭೆ ಸದಸ್ಯನಿಂದ ದೂರು
Image
Satyendra Jain Case: ಸಚಿವ ಸತ್ಯೇಂದ್ರ ಜೈನ್ ಅವರಿಗೆ ಹವಾಲಾ ಮೂಲಕ ಹಣ ಹೋಗಿದೆ : ಸಚಿವೆ ಸ್ಮೃತಿ ಇರಾನಿ ಆರೋಪ

ಸಿಸೋಡಿಯಾ ಅವರನ್ನು “ದೇಶದ ಶಿಕ್ಷಣ ಕ್ರಾಂತಿಯ ಪಿತಾಮಹ” ಎಂದ ಕೇಜ್ರಿವಾಲ್, ಅವರು ದೆಹಲಿಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ದೇಶದಾದ್ಯಂತದ ವಿದ್ಯಾರ್ಥಿಗಳಿಗೆ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು. . “ಅವರು ಬಹುಶಃ ಸ್ವತಂತ್ರ ಭಾರತದ ಅತ್ಯುತ್ತಮ ಶಿಕ್ಷಣ ಮಂತ್ರಿ. ಈ ಹಿಂದೆ ಬಡ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಮೂರನೇ ದರ್ಜೆಯ ಶಿಕ್ಷಣ ಪಡೆಯುತ್ತಿದ್ದರು. ದೆಹಲಿ ಸರ್ಕಾರಿ ಶಾಲೆಗಳಲ್ಲಿ 18 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅವರ ಭವಿಷ್ಯ ಅಂಧಕಾರದಲ್ಲಿತ್ತು. ಸಿಸೋಡಿಯಾ ಅವರಿಗೆ ಉಜ್ವಲ ಭವಿಷ್ಯವನ್ನು ನೀಡಿದರು. ಇಂದು ನಾನು ಆ 18 ಲಕ್ಷ ವಿದ್ಯಾರ್ಥಿಗಳಲ್ಲಿ ಕೇಳುತ್ತಿದ್ದೇನೆ, ನಿಮ್ಮ ಮನೀಶ್ ಸಿಸೋಡಿಯಾ ಭ್ರಷ್ಟರೇ? ವಿದ್ಯಾರ್ಥಿಗಳ ಪೋಷಕರಲ್ಲಿ ಕೇಳುತ್ತಿದ್ದೇನೆ ಈ ಜನರು ನಿಮ್ಮ ಮನೀಶ್ ಸಿಸೋಡಿಯಾ ಅವರನ್ನು ಭ್ರಷ್ಟ ಎಂದು ಕರೆಯುತ್ತಿದ್ದಾರೆ, ನೀವು ಏನು ಯೋಚಿಸುತ್ತೀರಿ? ಎಂದು ಕೇಜ್ರಿವಾಲ್ ಕೇಳಿದ್ದಾರೆ.

ಸಿಸೋಡಿಯಾ ಅವರು ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದ ಕೇಜ್ರಿವಾಲ್ “ಇಂತಹ ವ್ಯಕ್ತಿಯನ್ನು ಬಂಧಿಸಬೇಕೇ ಅಥವಾ ಇಡೀ ದೇಶದಲ್ಲಿ ಶಾಲಾ ಶಿಕ್ಷಣವನ್ನು ಸರಿಪಡಿಸುವ ಜವಾಬ್ದಾರಿಯನ್ನು ಅವರಿಗೆ ನೀಡಬೇಕೇ?”. “ಸತ್ಯೇಂದರ್ ಜೈನ್ ಮತ್ತು ಮನೀಶ್ ಸಿಸೋಡಿಯಾ ಅವರಂತಹ ಜನರನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸುವ ಮೂಲಕ, ಅವರು ದೆಹಲಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉತ್ತಮ ಕೆಲಸವನ್ನು ನಿಲ್ಲಿಸಲು ಬಯಸುತ್ತಾರೆ. ಆದರೆ ಇದು ಸಂಭವಿಸಲು ನಾನು ಅನುಮತಿಸುವುದಿಲ್ಲ. ಒಳ್ಳೆಯ ಕೆಲಸ ಮುಂದುವರಿಯುತ್ತದೆ” “ಮನೀಶ್ ಮತ್ತು ಸತ್ಯೇಂದರ್ ಭ್ರಷ್ಟರಾಗಿದ್ದರೆ, ಪ್ರಾಮಾಣಿಕರು ಯಾರು?” ಎಂದು ದೆಹಲಿ ಮುಖ್ಯಮಂತ್ರಿ ಕೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 3:13 pm, Thu, 2 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ