Narendra Modi: ತೆಲಂಗಾಣ ಸಂಸ್ಕೃತಿ ವಿಶ್ವಪ್ರಸಿದ್ಧವಾದುದು; ತೆಲಂಗಾಣ ಸಂಸ್ಥಾಪನಾ ದಿನದಂದು ಪ್ರಧಾನಿ ಮೋದಿ ಶ್ಲಾಘನೆ

Telangana Formation Day 2022: ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನದಂದು ನನ್ನ ಸಹೋದರಿಯರು ಮತ್ತು ಸಹೋದರರಿಗೆ ಶುಭಾಶಯಗಳು. ತೆಲಂಗಾಣದ ಸಂಸ್ಕೃತಿ ವಿಶ್ವಪ್ರಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Narendra Modi: ತೆಲಂಗಾಣ ಸಂಸ್ಕೃತಿ ವಿಶ್ವಪ್ರಸಿದ್ಧವಾದುದು; ತೆಲಂಗಾಣ ಸಂಸ್ಥಾಪನಾ ದಿನದಂದು ಪ್ರಧಾನಿ ಮೋದಿ ಶ್ಲಾಘನೆ
ನರೇಂದ್ರ ಮೋದಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jun 02, 2022 | 4:29 PM

ನವದೆಹಲಿ: ತೆಲಂಗಾಣ ಸಂಸ್ಥಾಪನಾ ದಿನಾಚರಣೆಯ (Telangana Formation Day) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಜೂನ್ 2) ತೆಲಂಗಾಣ ಜನತೆಗೆ ಶುಭಾಶಯ ಕೋರಿದ್ದಾರೆ. ತೆಲಂಗಾಣದ ಜನರು ಕಠಿಣ ಪರಿಶ್ರಮ ಮತ್ತು ರಾಷ್ಟ್ರೀಯ ಪ್ರಗತಿಗೆ ಅಪ್ರತಿಮ ಸಮರ್ಪಣೆಗೆ ಹೆಸರಾಗಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. “ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನದಂದು ನನ್ನ ಸಹೋದರಿಯರು ಮತ್ತು ಸಹೋದರರಿಗೆ ಶುಭಾಶಯಗಳು. ತೆಲಂಗಾಣದ ಜನರು ಕಠಿಣ ಪರಿಶ್ರಮ ಮತ್ತು ರಾಷ್ಟ್ರೀಯ ಪ್ರಗತಿಗೆ, ಅಪ್ರತಿಮ ಸಮರ್ಪಣೆಗೆ ಸಮಾನಾರ್ಥಕರಾಗಿದ್ದಾರೆ. ತೆಲಂಗಾಣದ ಸಂಸ್ಕೃತಿ ವಿಶ್ವಪ್ರಸಿದ್ಧವಾಗಿದೆ. ತೆಲಂಗಾಣ ಜನರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಬುಧವಾರ ಹೈದರಾಬಾದ್‌ನಲ್ಲಿ ರಾಜ್ಯ ರಚನೆ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜನರ ತ್ಯಾಗದಿಂದ ತೆಲಂಗಾಣ ರಚನೆ ಸಾಧ್ಯವಾಯಿತು ಮತ್ತು ಅದೇ ಉತ್ಸಾಹದಿಂದ ತೆಲಂಗಾಣವನ್ನು ನಿರ್ಮಿಸಲಾಗಿದೆ ಎಂದು ಚಂದ್ರಶೇಖರ್ ರಾವ್ ಹೇಳಿದ್ದಾರೆ. ತೆಲಂಗಾಣ ರಚನೆ ದಿನದ ಸಂದರ್ಭದಲ್ಲಿ ಸರ್ಕಾರವು 172 ಪುಟಗಳ ‘ಪ್ರಗತಿ ವರದಿ’ಯನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಎತ್ತಿ ತೋರಿಸುತ್ತದೆ.

ಶಾದಿ ಮುಬಾರಕ್, ಕೆಸಿಆರ್ ಕಿಟ್‌ಗಳು, ಕಲ್ಯಾಣ ಲಕ್ಷ್ಮಿ, ರೈತ ಬಿಮಾ, ರೈತ ಬಂಧು, ಆಸರಾ ಪಿಂಚಣಿಗಳ ಮೂಲಕ ರಾಜ್ಯದ ಹೆಚ್ಚಿನ ಜನಸಂಖ್ಯೆಗೆ ಅನುಕೂಲವಾಗಿರುವ ಯೋಜನೆಗಳನ್ನು ಸರ್ಕಾರ ತನ್ನ ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಯ ಪ್ರಕಾರ, 2018ರಿಂದ ಸುಮಾರು 63 ಲಕ್ಷ ರೈತರು ವರ್ಷಕ್ಕೆ ಎರಡು ಬಾರಿ ರೈತ ಬಂಧು ಸ್ವೀಕರಿಸುತ್ತಿದ್ದಾರೆ. 2018ರಿಂದ ಎಕರೆಗೆ 5,000 ರೂ. ನೀಡಲಾಗುತ್ತಿದೆ.

ಇದನ್ನೂ ಓದಿ: Telangana Formation Day 2022: ಇಂದು ತೆಲಂಗಾಣ ಸಂಸ್ಥಾಪನಾ ದಿನ; ಭಾರತದ ಕಿರಿಯ ರಾಜ್ಯದ ಬಗ್ಗೆ ನಿಮಗೆಷ್ಟು ಗೊತ್ತು?

ತೆಲಂಗಾಣವು ಕೃಷಿ, ನೀರಾವರಿ, ವಿದ್ಯುತ್, ಶಿಕ್ಷಣ, ಆರೋಗ್ಯ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಗುಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಸಿಎಂ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಕೇಂದ್ರ ಸರ್ಕಾರ ಮತ್ತು ಇತರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಘೋಷಿಸಿದ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ರಾಜ್ಯದ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ತೆಲಂಗಾಣವು ಸುಮಾರು 2,500 ವರ್ಷಗಳಷ್ಟು ಸುದೀರ್ಘವಾದ ಮತ್ತು ಪ್ರಸಿದ್ಧ ಇತಿಹಾಸವನ್ನು ಹೊಂದಿದೆ. 2014ರ ಜೂನ್ 2ರಂದು ತೆಲಂಗಾಣವನ್ನು ಭೌಗೋಳಿಕ ಮತ್ತು ರಾಜಕೀಯ ಘಟಕವಾಗಿ ಯೂನಿಯನ್ ಆಫ್ ಇಂಡಿಯಾದ 29 ನೇ ಮತ್ತು ಕಿರಿಯ ರಾಜ್ಯವಾಗಿ ಸ್ಥಾಪಿಸಲಾಯಿತು. ತೆಲಂಗಾಣ 1,12,077 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಹಾಗೇ, 3,50,03,674 ಜನಸಂಖ್ಯೆಯನ್ನು ಹೊಂದಿದೆ. 1948ರ ಸೆಪ್ಟೆಂಬರ್ 17ರಿಂದ 1956ರ ನವೆಂಬರ್ 1ರವರೆಗೆ ಆಂಧ್ರಪ್ರದೇಶವನ್ನು ರಾಜ್ಯವನ್ನಾಗಿ ಸ್ಥಾಪಿಸಲು ಆಂಧ್ರ ರಾಜ್ಯದೊಂದಿಗೆ ತೆಲಂಗಾಣವನ್ನು ಸೇರಿಸುವವರೆಗೂ ತೆಲಂಗಾಣವು ಹೈದರಾಬಾದ್ ರಾಜ್ಯದ ಭಾಗವಾಗಿತ್ತು.

ತೆಲಂಗಾಣವು ಭಾರತದ ಅತಿ ಕಿರಿಯ ರಾಜ್ಯವಾಗಿದೆ. ಈ ರಾಜ್ಯ ಭಾರತದ ಉತ್ತರ ಮತ್ತು ದಕ್ಷಿಣದ ನಡುವಿನ ಕೊಂಡಿಯಾಗಿದ್ದು, ಡೆಕ್ಕನ್ ಪ್ರಸ್ಥಭೂಮಿಯ ಮಲೆನಾಡಿನಲ್ಲಿ ಈ ರಾಜ್ಯವಿದೆ. ಆಗಿನ ಅಖಂಡ ಆಂಧ್ರಪ್ರದೇಶದ ವಿಭಜನೆಗೆ ಕಾರಣವಾದ ತೆಲಂಗಾಣ ಚಳವಳಿಯ ಯಶಸ್ಸು ತೆಲಂಗಾಣ ರಚನೆಯಿಂದ ಗುರುತಿಸಲ್ಪಟ್ಟಿದೆ. 2014ರ ಜೂನ್ 2ರಂದು 57 ವರ್ಷಗಳ ಚಳುವಳಿಯ ಪ್ರತಿಫಲವಾಗಿ ತೆಲಂಗಾಣ ರಾಜ್ಯ ತಲೆ ಎತ್ತಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ