Telangana Formation Day 2022: ಇಂದು ತೆಲಂಗಾಣ ಸಂಸ್ಥಾಪನಾ ದಿನ; ಭಾರತದ ಕಿರಿಯ ರಾಜ್ಯದ ಬಗ್ಗೆ ನಿಮಗೆಷ್ಟು ಗೊತ್ತು?

ಆಂಧ್ರಪ್ರದೇಶ ರಾಜ್ಯ ಮರುಸಂಘಟನೆ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ನಂತರ ತೆಲಂಗಾಣ ರಾಜ್ಯ ರಚನೆಯಾಯಿತು. ಪ್ರತ್ಯೇಕ ರಾಜ್ಯಕ್ಕಾಗಿ ದಶಕಗಳಿಂದ ಇದ್ದ ಬೇಡಿಕೆಯನ್ನು ಕೊನೆಗೂ ನೆರವೇರಿಸಲಾಯಿತು.

Telangana Formation Day 2022: ಇಂದು ತೆಲಂಗಾಣ ಸಂಸ್ಥಾಪನಾ ದಿನ; ಭಾರತದ ಕಿರಿಯ ರಾಜ್ಯದ ಬಗ್ಗೆ ನಿಮಗೆಷ್ಟು ಗೊತ್ತು?
ತೆಲಂಗಾಣImage Credit source: CareerIndia.com
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jun 02, 2022 | 10:25 AM

ಹೈದರಾಬಾದ್: ಪ್ರತಿ ವರ್ಷ ಜೂನ್ 2ರಂದು ತೆಲಂಗಾಣ ರಾಜ್ಯವು ತನ್ನ ಸಂಸ್ಥಾಪನಾ ದಿನವನ್ನು (Telangana Formation Day) ಅದ್ದೂರಿಯಾಗಿ ಆಚರಿಸುತ್ತದೆ. ಈ ದಿನ ಹಲವಾರು ಕಾರ್ಯಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳು ಇತ್ಯಾದಿಗಳನ್ನು ನಡೆಸಲಾಗುತ್ತದೆ. ತೆಲಂಗಾಣವು ಸುಮಾರು 2,500 ವರ್ಷಗಳಷ್ಟು ಸುದೀರ್ಘವಾದ ಮತ್ತು ಪ್ರಸಿದ್ಧ ಇತಿಹಾಸವನ್ನು ಹೊಂದಿದೆ. 2014ರ ಜೂನ್ 2ರಂದು ತೆಲಂಗಾಣವನ್ನು ಭೌಗೋಳಿಕ ಮತ್ತು ರಾಜಕೀಯ ಘಟಕವಾಗಿ ಯೂನಿಯನ್ ಆಫ್ ಇಂಡಿಯಾದ 29 ನೇ ಮತ್ತು ಕಿರಿಯ ರಾಜ್ಯವಾಗಿ ಸ್ಥಾಪಿಸಲಾಯಿತು.

ತೆಲಂಗಾಣ ರಾಜ್ಯವು 1,12,077 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಹಾಗೇ, 3,50,03,674 ಜನಸಂಖ್ಯೆಯನ್ನು ಹೊಂದಿದೆ. 1948ರ ಸೆಪ್ಟೆಂಬರ್ 17ರಿಂದ 1956ರ ನವೆಂಬರ್ 1ರವರೆಗೆ ಆಂಧ್ರಪ್ರದೇಶವನ್ನು ರಾಜ್ಯವನ್ನಾಗಿ ಸ್ಥಾಪಿಸಲು ಆಂಧ್ರ ರಾಜ್ಯದೊಂದಿಗೆ ತೆಲಂಗಾಣವನ್ನು ಸೇರಿಸುವವರೆಗೂ ತೆಲಂಗಾಣವು ಹೈದರಾಬಾದ್ ರಾಜ್ಯದ ಭಾಗವಾಗಿತ್ತು.

ತೆಲಂಗಾಣ ಸಂಸ್ಥಾಪನಾ ದಿನ: ತೆಲಂಗಾಣವು ಭಾರತದ ಅತಿ ಕಿರಿಯ ರಾಜ್ಯವಾಗಿದೆ. ಈ ರಾಜ್ಯ ಭಾರತದ ಉತ್ತರ ಮತ್ತು ದಕ್ಷಿಣದ ನಡುವಿನ ಕೊಂಡಿಯಾಗಿದ್ದು, ಡೆಕ್ಕನ್ ಪ್ರಸ್ಥಭೂಮಿಯ ಮಲೆನಾಡಿನಲ್ಲಿ ಈ ರಾಜ್ಯವಿದೆ. ಆಗಿನ ಅಖಂಡ ಆಂಧ್ರಪ್ರದೇಶದ ವಿಭಜನೆಗೆ ಕಾರಣವಾದ ತೆಲಂಗಾಣ ಚಳವಳಿಯ ಯಶಸ್ಸು ತೆಲಂಗಾಣ ರಚನೆಯಿಂದ ಗುರುತಿಸಲ್ಪಟ್ಟಿದೆ. 2014ರ ಜೂನ್ 2ರಂದು 57 ವರ್ಷಗಳ ಚಳುವಳಿಯ ಪ್ರತಿಫಲವಾಗಿ ತೆಲಂಗಾಣ ರಾಜ್ಯ ತಲೆ ಎತ್ತಿತು.

ಇದನ್ನೂ ಓದಿ: ತೃತೀಯ ರಂಗ ರಚನೆಯ ಕನಸಿನಲ್ಲಿ ಬೆಂಗಳೂರಿಗೆ ತೆಲಂಗಾಣ ಸಿಎಂ ಕೆಸಿಆರ್: ಹೈದರಾಬಾದ್​ಗೆ ಮೋದಿ ಬಂದರೂ ಆಗುತ್ತಿಲ್ಲ ಭೇಟಿ

ತೆಲಂಗಾಣದ ಜನಸಂಖ್ಯೆಯ ಸುಮಾರು ಶೇ.70ರಷ್ಟು ಜನರು 15 ಮತ್ತು 59ರ ನಡುವಿನ ವಯಸ್ಸಿನವರಾಗಿದ್ದಾರೆ. ತೆಲಂಗಾಣದ 35 ಮಿಲಿಯನ್ ಜನಸಂಖ್ಯೆಯು ಮೊರಾಕೊದಂತೆಯೇ ಇದೆ. ದೇಶದ ಜನಸಂಖ್ಯೆಯ ಸುಮಾರು ಶೇ. 2.7ರಷ್ಟು ಜನರು ತೆಲಂಗಾಣ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ. ಹೈದರಾಬಾದ್, ನಿಜಾಮಾಬಾದ್, ವಾರಂಗಲ್, ನಲ್ಗೊಂಡ, ಕರೀಂನಗರ ಮತ್ತು ಖಮ್ಮಂ ತೆಲಂಗಾಣದ ಪ್ರಮುಖ ನಗರಗಳಾಗಿವೆ.

ಆಂಧ್ರಪ್ರದೇಶ ರಾಜ್ಯ ಮರುಸಂಘಟನೆ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ನಂತರ ತೆಲಂಗಾಣ ರಾಜ್ಯ ರಚನೆಯಾಯಿತು. ಪ್ರತ್ಯೇಕ ರಾಜ್ಯಕ್ಕಾಗಿ ದಶಕಗಳಿಂದ ಇದ್ದ ಬೇಡಿಕೆಯನ್ನು ಕೊನೆಗೂ ನೆರವೇರಿಸಲಾಯಿತು. ತೆಲಂಗಾಣದ ರಾಜಧಾನಿ ಹೈದರಾಬಾದ್ ಮಾಹಿತಿ ತಂತ್ರಜ್ಞಾನ (IT) ಮತ್ತು ಔಷಧೀಯ ಉದ್ಯಮಗಳಿಗೆ ಪ್ರಮುಖ ಕೇಂದ್ರವಾಗಿದೆ. ಅಗ್ರ 20 ಜಾಗತಿಕ ನಗರಗಳಲ್ಲಿ ಹೈದರಾಬಾದ್ 2ನೇ ಸ್ಥಾನದಲ್ಲಿದೆ. ಹೈದರಾಬಾದ್‌ನಲ್ಲಿ ಪ್ರಮುಖ ಐಟಿ ಸಂಸ್ಥೆಗಳಾದ ಫೇಸ್‌ಬುಕ್, ಗೂಗಲ್, ಐಬಿಎಂ ಮತ್ತು ಮೈಕ್ರೋಸಾಫ್ಟ್ ಗಣನೀಯ ಅಸ್ತಿತ್ವವನ್ನು ಹೊಂದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Thu, 2 June 22

ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ