ತನ್ನ ಕಚೇರಿಯಲ್ಲಿ ಒಸಾಮಾ ಬಿನ್ ಲಾಡೆನ್ ಫೋಟೋ ಹಾಕಿಕೊಂಡಿದ್ದ ಸರ್ಕಾರಿ ಅಧಿಕಾರಿ ಅಮಾನತು
ಸರ್ಕಾರಿ ಕಚೇರಿಯಲ್ಲಿ ಒಸಾಮಾ ಬಿನ್ ಲಾಡೆನ್ ಫೋಟೋ ಹಾಕಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ಬಂದ ನಂತರ ಗೌತಮ್ ಎಂಬ ಆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಫಾರೂಖಾಬಾದ್: ಉತ್ತರ ಪ್ರದೇಶದ ಸರ್ಕಾರಿ ವಿದ್ಯುತ್ ವಿತರಣಾ ಕಂಪನಿಯಲ್ಲಿ ಉಗ್ರ ಹಾಗೂ ಅಲ್-ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ನ ಫೋಟೋ ಹಾಕಿಕೊಂಡಿದ್ದು ಮಾತ್ರವಲ್ಲದೆ ಆತ “ವಿಶ್ವದ ಅತ್ಯುತ್ತಮ ಜೂನಿಯರ್ ಇಂಜಿನಿಯರ್” ಎಂದು ಬಣ್ಣಿಸಿರುವ ಕ್ಯಾಪ್ಷನ್ ಹಾಕಿಕೊಂಡಿದ್ದಕ್ಕಾಗಿ ಉತ್ತರ ಪ್ರದೇಶದ ಸರ್ಕಾರಿ ವಿದ್ಯುತ್ ವಿತರಣಾ ಕಂಪನಿಯ ಸರ್ಕಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಒಸಾಮಾ ಬಿನ್ ಲಾಡೆನ್ (Osama bin Laden) ನನ್ನ ಗುರು ಎಂದು ಆತ ತನ್ನ ಕಚೇರಿಯಲ್ಲಿ ಲಾಡೆನ್ ಫೋಟೋ ಹಾಕಿಕೊಂಡಿದ್ದ.
ದಕ್ಷಿಣಾಂಚಲ್ ವಿದ್ಯುತ್ ವಿತ್ರನ್ ನಿಗಮ್ ಲಿಮಿಟೆಡ್ (DVVNL)ನ ಉಪವಿಭಾಗಾಧಿಕಾರಿ (SDO) ರವೀಂದ್ರ ಪ್ರಕಾಶ್ ಗೌತಮ್ ತಮ್ಮ ಕಚೇರಿಯಲ್ಲಿ ಬಿನ್ ಲಾಡೆನ್ ಅವರ ಫೋಟೋವನ್ನು ಹಾಕಿಕೊಂಡಿದ್ದರು. ಅದರ ಕೆಳಗೆ “ಗೌರವಾನ್ವಿತ ಒಸಾಮಾ ಬಿನ್ ಲಾಡೆನ್, ವಿಶ್ವದ ಅತ್ಯುತ್ತಮ ಜೂನಿಯರ್ ಇಂಜಿನಿಯರ್” ಎಂದು ಬರೆಯಲಾಗಿತ್ತು. ಈ ಫೋಟೋ ಹಾಕಿಕೊಂಡಿದ್ದಕ್ಕಾಗಿ ಆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: Viral Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ; ಅಚ್ಚರಿಯಂತೆ ಬಚಾವಾದ ವಿಡಿಯೋ ವೈರಲ್
ಸರ್ಕಾರಿ ಕಚೇರಿಯಲ್ಲಿ ಒಸಾಮಾ ಬಿನ್ ಲಾಡೆನ್ ಫೋಟೋ ಹಾಕಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಜಿಲ್ಲೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ಬಂದ ನಂತರ ಗೌತಮ್ ಎಂಬ ಆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಆ ಫೋಟೋವನ್ನು ಎಸ್‌ಡಿಒ ಕಚೇರಿಯಿಂದ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ತನಿಖೆಯ ನಂತರ ಡಿವಿವಿಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಎಸ್‌ಡಿಒ ರವೀಂದ್ರ ಪ್ರಕಾಶ್ ಗೌತಮ್ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ಫರೂಕಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ