ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ಮತ್ತವರ ಪತ್ನಿಯ ಹತ್ಯೆ; ಉಗ್ರರ ಗುಂಡಿಗೆ ಇಬ್ಬರೂ ಬಲಿ
ಶುಕ್ರವಾರ ಜಮ್ಮು-ಕಾಶ್ಮೀರದ 11 ಸರ್ಕಾರಿ ಉದ್ಯೋಗಿಗಳು ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಡಿ ಅಮಾನತುಗೊಂಡಿದ್ದರು. ಇನ್ನೊಂದೆಡೆ ಜಮ್ಮು-ಕಾಶ್ಮಿರದಲ್ಲಿ ಇತ್ತೀಚೆಗೆ ಡ್ರೋನ್ಗಳ ಹಾರಾಟ ಹೆಚ್ಚಾಗಿದೆ.
ದೆಹಲಿ: ಜಮ್ಮು-ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಬಿಜೆಪಿ ಕಿಸಾನ್ ಮೋರ್ಚಾ ನಾಯಕ (BJP Kisan Morcha President) ಮತ್ತು ಅವರ ಪತ್ನಿಯನ್ನು ಇಂದು ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಬಿಜೆಪಿಯ ಕುಲಗಾಂವ್ನ ಕಿಸಾನ್ ಮೋರ್ಚಾ ಅಧ್ಯಕ್ಷ ಗುಲಾಮ್ ರಸೂಲ್ ದಾರ್ ಮತ್ತು ಅವರ ಪತ್ನಿಗೆ ಉಗ್ರರು ಗುಂಡು (Terror Attack) ಹೊಡೆದಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗುಲಾಮ್ ರಸೂಲ್ ದಾರ್ ಮತ್ತವರ ಪತ್ನಿ ಇಬ್ಬರೂ ಬದುಕುಳಿಯಲಿಲ್ಲ ಎಂದು ಬಿಜೆಪಿ ನಾಯಕ ಅಲ್ತಾಫ್ ಠಾಕೂರ್ ತಿಳಿಸಿದ್ದಾರೆ.
ಅನಂತ್ನಾಗ್ನ ಲಾಲ್ಚೌಕ್ನಲ್ಲಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗುಲಾಮ್ ರಸೂಲ್ ದಾರ್ ದಂಪತಿ ಹತ್ಯೆಯನ್ನು ಬಿಜೆಪಿ ಖಂಡಿಸಿದ್ದು, ಇದೊಂದು ತುಂಬ ಭೀಕರವಾದ ಹತ್ಯೆ ಎಂದು ಹೇಳಿದೆ. ಹಾಗೇ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಈ ಹತ್ಯೆಯನ್ನು ಖಂಡಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳ (NIA) ಇತ್ತೀಚೆಗೆ ಅನಂತ್ನಾಗ್ನ ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ಉಗ್ರಸಂಘಟನೆಗಳಿಗೆ ಧನಸಹಾಯ ನೀಡುತ್ತಿದ್ದಾರೆ ಎಂಬ ಆರೋಪದಡಿ ಈ ಶೋಧ ಕಾರ್ಯ ನಡೆದಿತ್ತು. ಅಷ್ಟೇ ಅಲ್ಲ, ಜು.10 ರಂದು ಇದೇ ಪ್ರಕರಣದಡಿ ಆರು ಮಂದಿಯನ್ನು ಬಂಧಿಸಿದೆ.
ಶುಕ್ರವಾರ ಜಮ್ಮು-ಕಾಶ್ಮೀರದ 11 ಸರ್ಕಾರಿ ಉದ್ಯೋಗಿಗಳು ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಡಿ ಅಮಾನತುಗೊಂಡಿದ್ದರು. ಇನ್ನೊಂದೆಡೆ ಜಮ್ಮು-ಕಾಶ್ಮಿರದಲ್ಲಿ ಇತ್ತೀಚೆಗೆ ಡ್ರೋನ್ಗಳ ಹಾರಾಟ ಹೆಚ್ಚಾಗಿದೆ. ಜೂನ್ನಲ್ಲಿ ಜಮ್ಮುವಿನ ವಾಯುನೆಲೆ ಮೇಲೆ ಎರಡು ಸ್ಫೋಟಗೊಂಡ ಬೆನ್ನಲ್ಲೇ ಪದೇಪದೆ ಡ್ರೋನ್ ಹಾರಾಡುತ್ತಿದೆ.
ಇದನ್ನೂ ಓದಿ: Health Tips: ಈ ನಾಲ್ಕು ಬಗೆಯ ಅಕ್ಕಿಗಳಲ್ಲಿದೆ ಆರೋಗ್ಯ ಪ್ರಯೋಜನಗಳು
ಟೋಕಿಯೊದಿಂದ ಭಾರತಕ್ಕೆ ವಾಪಸ್ಸಾದ ಒಲಂಪಿಕ್ಸ್ ಹೀರೋಗಳು; ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ