ಸಿಎಂ ಉದ್ಧವ್ ಠಾಕ್ರೆ ಹೆಂಡತಿಯನ್ನು ಮರಾಠಿ ರಾಬ್ರಿ ದೇವಿ ಎಂದ ಬಿಜೆಪಿ ನಾಯಕನಿಗೆ ಸಮನ್ಸ್ ಜಾರಿ

| Updated By: ಸುಷ್ಮಾ ಚಕ್ರೆ

Updated on: Jan 07, 2022 | 8:18 PM

ರಶ್ಮಿ ಠಾಕ್ರೆ ಅವರ ಫೋಟೋವನ್ನು ಟ್ವೀಟ್ ಮಾಡಿ "ಮರಾಠಿ ರಾಬ್ರಿ ದೇವಿ" ಎಂದು ಕರೆದಿದ್ದಕ್ಕಾಗಿ ಗಜಾರಿಯಾ ವಿರುದ್ಧ ದೂರು ದಾಖಲಾಗಿದೆ. ಗಜಾರಿಯಾ ಅವರನ್ನು ಬಂಧಿಸಲು ಪುಣೆಯ ಸೈಬರ್ ಸೆಲ್ ತಂಡ ಮುಂಬೈಗೆ ತೆರಳಿದೆ.

ಸಿಎಂ ಉದ್ಧವ್ ಠಾಕ್ರೆ ಹೆಂಡತಿಯನ್ನು ಮರಾಠಿ ರಾಬ್ರಿ ದೇವಿ ಎಂದ ಬಿಜೆಪಿ ನಾಯಕನಿಗೆ ಸಮನ್ಸ್ ಜಾರಿ
ಉದ್ಧವ್ ಠಾಕ್ರೆ- ರಶ್ಮಿ ಠಾಕ್ರೆ
Follow us on

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆಯನ್ನು ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿಗೆ ಹೋಲಿಸಿ ಟ್ವೀಟ್ ಮಾಡಿದ್ದಕ್ಕಾಗಿ ಮಹಾರಾಷ್ಟ್ರದ ಬಿಜೆಪಿ ಸಾಮಾಜಿಕ ಮಾಧ್ಯಮ ಸೆಲ್ ಉಸ್ತುವಾರಿ ಜಿತೇನ್ ಗಜಾರಿಯಾ ವಿರುದ್ಧ ಪುಣೆ ಪೊಲೀಸರ ಸೈಬರ್ ಸೆಲ್ ಕೇಸ್ ದಾಖಲಿಸಿದ್ದಾರೆ. ಮುಂಬೈ ಪೊಲೀಸರ ಸೈಬರ್ ಸೆಲ್ ಘಟಕವು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಗಜಾರಿಯಾ ಹೇಳಿಕೆಯನ್ನು ದಾಖಲಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ನಾಲ್ಕೂವರೆ ಗಂಟೆಗಳ ಕಾಲ ಅವರನ್ನು ಅಧಿಕಾರಿಗಳು ಗ್ರಿಲ್ ಮಾಡಿದ್ದಾರೆ.

ರಶ್ಮಿ ಠಾಕ್ರೆ ಅವರ ಫೋಟೋವನ್ನು ಟ್ವೀಟ್ ಮಾಡಿ “ಮರಾಠಿ ರಾಬ್ರಿ ದೇವಿ” ಎಂದು ಕರೆದಿದ್ದಕ್ಕಾಗಿ ಗಜಾರಿಯಾ ವಿರುದ್ಧ ದೂರು ದಾಖಲಾಗಿದೆ. ಗಜಾರಿಯಾ ಅವರನ್ನು ಬಂಧಿಸಲು ಪುಣೆಯ ಸೈಬರ್ ಸೆಲ್ ತಂಡ ಮುಂಬೈಗೆ ತೆರಳಿದೆ.

ಜೊತೆಗೆ ಜಾತಿ ಮತ್ತು ಧರ್ಮಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ ಆರೋಪವೂ ಗಜಾರಿಯಾ ಮೇಲಿದೆ. ಈ ಸಂಬಂಧ ಸೆಕ್ಷನ್ 153A, 500, 505(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಉದ್ಧವ್ ಠಾಕ್ರೆ ಅವರ ಹೆಂಡತಿ ರಶ್ಮಿ ಠಾಕ್ರೆ ಅವರನ್ನು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರಿಗೆ ಹೋಲಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಗುರುವಾರ ಬಿಜೆಪಿ ಕಾರ್ಯಕರ್ತ ಜಿತೇನ್ ಗಜಾರಿಯಾ ಅವರಿಗೆ ಸಮನ್ಸ್ ನೀಡಿದ್ದಾರೆ.

ಬೆನ್ನುಮೂಳೆಯ ಸಮಸ್ಯೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ಉದ್ಧವ್ ಠಾಕ್ರೆ ಅವರು ಅಸ್ವಸ್ಥರಾಗಿರುವ ಬೆನ್ನಲ್ಲೇ ಈ ಟೀಕೆ ಕೇಳಿಬಂದಿದೆ. ಉದ್ಧವ್ ಠಾಕ್ರೆ ಅವರು ತಮ್ಮ ಶಿವಸೇನೆ ಸಹೋದ್ಯೋಗಿಗಳು ಅಥವಾ ಮಿತ್ರಪಕ್ಷಗಳಾದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನಾಯಕರಲ್ಲಿ ನಂಬಿಕೆಯಿಲ್ಲದಿದ್ದರೆ ಅವರ ಪತ್ನಿ ಅಥವಾ ಪುತ್ರ ಆದಿತ್ಯ ಠಾಕ್ರೆ ಅವರನ್ನು ಮಹಾರಾಷ್ಟ್ರ ಸಿಎಂ ಆಗಿ ನೇಮಿಸಬೇಕು ಎಂದು ಪ್ರತಿಪಕ್ಷಗಳು ಹೇಳಿವೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ, ಅವರು ವ್ಯವಹಾರ ನಡೆಸಲು ಯಾರನ್ನಾದರೂ ನೇಮಿಸಬೇಕು. ಮುಖ್ಯಮಂತ್ರಿಗಳು ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೆ ಬೇರೆಯರವನ್ನು ನೇಮಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣ; ಮಧ್ಯ ಪ್ರವೇಶಿಸಲು ಪ್ರಧಾನಿ ಮೋದಿಗೆ ಸಿಎಂ ಉದ್ಧವ್ ಠಾಕ್ರೆ ಒತ್ತಾಯ

ಡ್ರಗ್ಸ್: ಮಹಾರಾಷ್ಟ್ರವೇ ಟಾರ್ಗೆಟ್, ರೇಪ್​ಗಳು ನಡೆಯುವ ಉತ್ತರ ಪ್ರದೇಶವನ್ನು ಯಾರೂ ಟೀಕಿಸುವುದಿಲ್ಲ ಏಕೆ ? ಸಿಎಂ ಉದ್ಧವ್ ಠಾಕ್ರೆ

Published On - 8:18 pm, Fri, 7 January 22