AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಭಾರತೀಯ ಸೇನೆಯಿಂದ ಸಿಖ್ಖರನ್ನು ಹೊರದಬ್ಬಲಾಗುತ್ತದೆ ಎಂದು ಅಪಪ್ರಚಾರ ಮಾಡಿದ ಪಾಕಿಸ್ತಾನ

ಈ ಟ್ವೀಟ್ ಮೂಲಕ ಭಾರತದ ಬೆಳವಣಿಗೆಗಳ ದುರ್ಲಾಭ ಪಡೆಯಲು ಪಾಕಿಸ್ತಾನವು ಪ್ರಯತ್ನಿಸಿರುವುದು ಬೆಳಕಿಗೆ ಬಂದಿದೆ.

Fact Check: ಭಾರತೀಯ ಸೇನೆಯಿಂದ ಸಿಖ್ಖರನ್ನು ಹೊರದಬ್ಬಲಾಗುತ್ತದೆ ಎಂದು ಅಪಪ್ರಚಾರ ಮಾಡಿದ ಪಾಕಿಸ್ತಾನ
ಟ್ವೀಟ್ ಮಾಡಿರುವ ತಿರುಚಿದ ವಿಡಿಯೊ
TV9 Web
| Edited By: |

Updated on: Jan 07, 2022 | 10:18 PM

Share

ಭಾರತ ಸರ್ಕಾರವು ಭಾರತೀಯ ಸೇನೆಯಲ್ಲಿರುವ ಎಲ್ಲ ಸಿಖ್ಖರನ್ನೂ ವಜಾ ಮಾಡಲು ನಿರ್ಧರಿಸಿದೆ ಎಂಬ ಸುಳ್ಳು ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ದಳ ಐಎಸ್​ಐನ ಟ್ವಿಟರ್​ ಖಾತೆ ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಷನ್ಸ್​ ಹಂಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರಿದ್ದ ಕಾರಿನ ಸಂಚಾರದ ವೇಳೆ ಬೆಳಕಿಗೆ ಬಂದ ಭದ್ರತಾ ವೈಫಲ್ಯದಿಂದ ಕೇಂದ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರದ ನಡುವೆ ಸಂಘರ್ಷ ಪರಿಸ್ಥಿತಿ ಉದ್ಭವಿಸಿದೆ. ಈ ಟ್ವೀಟ್ ಮೂಲಕ ಭಾರತದ ಬೆಳವಣಿಗೆಗಳ ದುರ್ಲಾಭ ಪಡೆಯಲು ಪಾಕಿಸ್ತಾನವು ಪ್ರಯತ್ನಿಸುತ್ತಿದೆ.

ಈ ಟ್ವಿಟರ್ ಖಾತೆಯನ್ನು (@heyanjaliii) ಕಳೆದ ವರ್ಷ ಅಕ್ಟೋಬರ್​ನಲ್ಲಿ ರೂಪಿಸಲಾಗಿದೆ. ಅಂಜಲಿ ಕೌರ್ ಹೆಸರಿನಲ್ಲಿರುವ ಈ ಖಾತೆಯಲ್ಲಿ ಹಂಚಿಕೊಂಡಿದ್ದ ವಿಡಿಯೊದಲ್ಲಿ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಎಸ್.ಜೈಶಂಕರ್ ಸಿಖ್ಖರನ್ನು ಭಾರತೀಯ ಸೇನೆಯಿಂದ ತೆಗೆದುಹಾಕಲು ಸೂಚಿಸಿದ ಮಾತುಗಳಿವೆ ಎಂಬ ಒಕ್ಕಣೆ ಬರೆಯಲಾಗಿದೆ. ಭಾರತೀಯ ಸೇನೆಯಲ್ಲಿರುವ ಪಂಜಾಬ್ ಮೂಲದ ಎಲ್ಲ ಜನರಲ್​ಗಳು, ಎಲ್ಲ ಸೈನಿಕರನ್ನು, ಮೇಲಿನಿಂದ ಕೆಳಗಿನವರೆಗೆ ಎಲ್ಲ ಪಂಜಾಬಿಗಳನ್ನೂ ತೆಗೆದು ಹಾಕಬೇಕು’ ಎಂಬ ಪುರುಷ ಧ್ವನಿ ವಿಡಿಯೊದಲ್ಲಿದೆ.

ಫ್ಯಾಕ್ಟ್​ಚೆಕ್ ವೇಳೆ ಇದು ತಿರುಚಿದ ವಿಡಿಯೊ ಎಂಬ ಸಂಗತಿ ದೃಢಪಟ್ಟಿತು. ಬೇರೊಂದು ಮೂಲದಿಂದ ಪಡೆದುಕೊಂಡಿರುವ ಧ್ವನಿಯನ್ನು ಸಂಪುಟ ಸಭೆಯ ಸನ್ನಿವೇಶಕ್ಕೆ ಜೋಡಿಸಲಾಗಿದೆ. ಈ ವಿಡಿಯೊದಲ್ಲಿ ಬಳಸಿರುವ ಧ್ವನಿ ತುಣುಕಿನಲ್ಲಿರುವ ಯಾವುದೇ ಮಾತನ್ನು ಸಭೆಯಲ್ಲಿ ಆಡಿಲ್ಲ. ಈ ಧ್ವನಿಯ ತುಣುಕು ಕ್ಲಬ್​ಹೌಸ್ ಚರ್ಚೆಯೊಂದರದ್ದು ಎಂದು ನಂತರದ ಪರಿಶೀಲನೆ ವೇಳೆ ತಿಳಿದು ಬಂತು. ಟ್ವಿಟರ್​ನಲ್ಲಿಯೂ ಹಲವು ಬಳಕೆದಾರರು ಹಾಗೆಂದು ಕಾಮೆಂಟ್ ಮಾಡಿದ್ದಾರೆ.

ಕ್ಲಬ್​ಹೌಸ್ ಚರ್ಚೆಯ ವೇಳೆ ವಿಕಾಸ್ ದುಬೆ ಎನ್ನುವವರು ಭಾರತೀಯ ಸೇನೆಯಿಂದ ಪಂಜಾಬಿಗಳನ್ನು ತೊಲಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಆಡಿಯೊ ಕ್ಲಿಪ್ ಅನ್ನು ಅದಾಗಲೇ ಹಲವರು ಟ್ವೀಟ್ ಮಾಡಿ ಖಂಡಿಸಿದ್ದರು. ಆದರೆ ಪಾಕಿಸ್ತಾನದ ಐಎಸ್​ಐ ಈ ಆಡಿಯೊ ಕ್ಲಿಪ್​ಗೆ ಬೇರೊಂದು ವಿಡಿಯೊ ಕ್ಲಿಪ್ ಜೋಡಿಸಿ ಭಾರತ ಸರ್ಕಾರದ ವಿರುದ್ಧ ಸಲ್ಲದ ಆರೋಪ ಹೊರಿಸಿದೆ.

ಪಾಕಿಸ್ತಾನದ ಈ ಟ್ವೀಟ್​ಗೆ ಭಾರತದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ‘ಇದೊಂದು ಹಾಸ್ಯಾಸ್ಪದ ಟ್ವೀಟ್’ ಎಂದು ಪತ್ರಕರ್ತ ಶಿವ್ ಅರೊರ ಹೇಳಿದ್ದಾರೆ. ಈ ಟ್ವೀಟ್​ಗೆ ಬಳಕೆಯಾಗಿರುವ ವಿಡಿಯೊ ಕಳೆದ ಡಿಸೆಂಬರ್ 9ನೇ ತಾರೀಖಿನದ್ದು. ಅಂದು ಸಿಡಿಎಸ್ ಬಿಪಿನ್ ರಾವತ್ ಹಠಾತ್ ನಿಧನದ ನಂತರ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ್ದರು. ಪ್ರೆಸ್​ ಸರ್ಕಾರದ ಅಧೀನದಲ್ಲಿರುವ ಪ್ರೆಸ್ ಇನ್​ಫರ್ಮೇಶನ್​ ಬ್ಯೂರೊ (ಪಿಐಬಿ) ಸಹ ಈ ಟ್ವೀಟ್​ಗೆ ಬಳಕೆಯಾಗಿರುವ ವಿಡಿಯೊದ ಸತ್ಯಾತ್ಯತೆಯ ವಿವರಣೆ ನೀಡಿದೆ. ‘ಈ ಟ್ವೀಟ್​ಗೆ ತಿರುಚಿದ ವಿಡಿಯೊ ಬಳಸಲಾಗಿದೆ. ಇಂಥ ಯಾವುದೇ ಚರ್ಚೆ ಅಥವಾ ಸಭೆ ನಡೆದಿಲ್ಲ’ ಎಂದು ಪಿಐಬಿ ತಿಳಿಸಿದೆ.

ಇದನ್ನೂ ಓದಿ: ಹಪ್ಪಳ ಮತ್ತು ಜಿಎಸ್​ಟಿ: ವೈರಲ್ ಆಯ್ತು ಉದ್ಯಮಿ ಹರ್ಷ್ ಗೋಯೆಂಕ ಟ್ವೀಟ್, ಫ್ಯಾಕ್ಟ್​ಚೆಕ್ ಮಾಡಿದ ತೆರಿಗೆ ಇಲಾಖೆ ಇದನ್ನೂ ಓದಿ: ಇನ್ನೂ ಕೆಲ ಸಮಯ ಕೊರೊನಾ ಸೋಂಕಿನೊಂದಿಗೆ ಬದುಕುವುದು ಕಲಿಯಬೇಕಿದೆ: ದಕ್ಷಿಣ ಆಫ್ರಿಕಾದ ತಜ್ಞ ವೈದ್ಯೆ ಆಂಜೆಲಿಕ್ ಕೊಯೆಟ್ಜಿ

Follow Us
Web contact
Web contact

TV9 Kannada

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ