ಭದ್ರತೆ ಬಗ್ಗೆ ಗಿಣಿಯಂತೆ ಹೇಳಿದ್ದನ್ನೇ ಹೇಳುತ್ತಿದ್ದಾರೆ; ಪ್ರಧಾನಿ ಭದ್ರತಾ ಲೋಪ ಬಗ್ಗೆ ಕ್ಯಾಪ್ಟನ್ ಹೇಳಿಕೆಗೆ ಸಿಧು ವಾಗ್ದಾಳಿ

ಪ್ರಧಾನಿ ಮೋದಿಯವರೇ, ನಿಮ್ಮ ಪಕ್ಷ ಮತ್ತು ಸಂಘಪರಿವಾರ ತಮ್ಮ ಜೀವನದಲ್ಲಿ ತ್ರಿವರ್ಣ ಧ್ವಜವನ್ನು ಹಲವಾರು ಬಾರಿ ಹಾರಿಸಿಲ್ಲ, ಅದೇ ಲೆಕ್ಕವಿಲ್ಲದಷ್ಟು ಬಾರಿ ಪಂಜಾಬ್ ಯೋಧರ ದೇಹಕ್ಕೆ ತಿರಂಗ (ತ್ರಿವರ್ಣ) ಸುತ್ತಿ ಬಂದಿದೆ. ಆದ್ದರಿಂದ ಪಂಜಾಬ್‌ನಲ್ಲಿ ಪ್ರಧಾನಿ ಮೋದಿಯವರ ಜೀವಕ್ಕೆ ಅಪಾಯವಿದೆ ಎಂದು ಹೇಳುವುದು ಪಂಜಾಬಿಯತ್‌ಗೆ ಮಾಡಿದ ಅವಮಾನವಾಗಿದೆ ಎಂದ ನವಜೋತ್ ಸಿಂಗ್ ಸಿಧು.

ಭದ್ರತೆ ಬಗ್ಗೆ ಗಿಣಿಯಂತೆ ಹೇಳಿದ್ದನ್ನೇ ಹೇಳುತ್ತಿದ್ದಾರೆ; ಪ್ರಧಾನಿ ಭದ್ರತಾ ಲೋಪ ಬಗ್ಗೆ ಕ್ಯಾಪ್ಟನ್ ಹೇಳಿಕೆಗೆ ಸಿಧು ವಾಗ್ದಾಳಿ
ನವಜೋತ್ ಸಿಂಗ್ ಸಿಧು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 07, 2022 | 8:03 PM

ಚಂಢೀಗಡ: ಅಮರಿಂದರ್ ಸಿಂಗ್ (Amarinder Singh) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಶುಕ್ರವಾರ ಕೇಂದ್ರದ ಮಾಜಿ ಮುಖ್ಯಮಂತ್ರಿಯನ್ನು “ಗಿಣಿ” ಎಂದು ಕರೆದಿದ್ದಾರೆ. ಪಂಜಾಬ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದ್ದು, ರಾಜಕೀಯವನ್ನು ನಿಲ್ಲಿಸಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ ಸಿಧು, ಇಲ್ಲದಿದ್ದರೆ ಅವರಿಗೆ ತಕ್ಕ ಉತ್ತರ ಸಿಗುತ್ತದೆ ಎಂದಿದ್ದಾರೆ. ಪ್ರಧಾನಿಯವರ ಭದ್ರತಾ ಲೋಪದ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿರುವ ಪಂಜಾಬ್‌ನ ಚನ್ನಿ ಸರ್ಕಾರವನ್ನು ಸಮರ್ಥಿಸಿಕೊಂಡ ಸಿಧು, “ಕಳೆದ ಎರಡು ದಿನಗಳಿಂದ ಭದ್ರತೆಯ ಬಗ್ಗೆಯೇ ಮಾತನಾಡುತ್ತಿದ್ದಾರೆ. ಕೆಲವು ಗಿಣಿಗಳು ಬುದ್ದಿಹೀನವಾಗಿ ಭದ್ರತೆ, ಭದ್ರತೆ ಎಂದೇ ಹೇಳುತ್ತಿವೆ. ಈ ಗಿಣಿಗಳಲ್ಲಿ ಅಗ್ರಗಣ್ಯರು ನಮ್ಮ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಎಂದು ಸಿಧು ಹೇಳಿದ್ದಾರೆ.   “ಅವರು (ಬಿಜೆಪಿ) ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಇಲ್ಲಿ ನಿಮಗೆ ತಕ್ಕ ಉತ್ತರ ಸಿಗುತ್ತದೆ. (ಪಂಜಾಬ್‌ನಲ್ಲಿ) ರಾಷ್ಟ್ರಪತಿ ಆಳ್ವಿಕೆಯ ಬಗ್ಗೆ ಮಾತನಾಡುವವರೆಲ್ಲರೂ ನಿಮ್ಮ (ಬಿಜೆಪಿ) ಗಿಣಿಗಳು” ಎಂದು ಸಿಧು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಬಿಜೆಪಿಗೆ ಮತವೂ ಇಲ್ಲ, ಬೆಂಬಲವೂ ಇಲ್ಲ ಎಂದು ಸಿಧು ಹೇಳಿದ್ದಾರೆ.

ರ್ಯಾಲಿಯ 7,000 ಕುರ್ಚಿಗಳಲ್ಲಿ 500 ಜನರು ಕುಳಿತಿರುವಾಗ ಅವರನ್ನು ಉದ್ದೇಶಿಸಿ ಪ್ರಧಾನಿ ಹೇಗೆ ಮಾತನಾಡುತ್ತಾರೆ? ರಾಜ್ಯದ ಎಲ್ಲಾ ನೈಜ ಸಮಸ್ಯೆಗಳು, ಅದು ರೈತರಾಗಿರಲಿ ಅಥವಾ ನಿರುದ್ಯೋಗವಾಗಿರಲಿ ಅದೆಲ್ಲವನ್ನೂ ಕಡೆಗಣಿಸಲಾಗಿದೆ. ಪ್ರಧಾನಿ ಕಚೇರಿಯು ಒಂದು ಸಂಸ್ಥೆಯಾಗಿದೆ ಮತ್ತು ಅದನ್ನು ರಕ್ಷಿಸಲು ಲಕ್ಷಾಂತರ ಪಂಜಾಬಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬ ಪಂಜಾಬಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಷ್ಟ್ರವನ್ನು ರಕ್ಷಿಸಲು ತಮ್ಮ ಕೊನೆಯ ಉಸಿರು ಇರುವವರೆಗೂ ಹೋರಾಡುತ್ತಾರೆ ಎಂದು ಸಿಧು ಹೇಳಿದರು.

ಪ್ರಧಾನಿ ಮೋದಿಯವರೇ, ನಿಮ್ಮ ಪಕ್ಷ ಮತ್ತು ಸಂಘಪರಿವಾರ ತಮ್ಮ ಜೀವನದಲ್ಲಿ ತ್ರಿವರ್ಣ ಧ್ವಜವನ್ನು ಹಲವಾರು ಬಾರಿ ಹಾರಿಸಿಲ್ಲ, ಅದೇ ಲೆಕ್ಕವಿಲ್ಲದಷ್ಟು ಬಾರಿ ಪಂಜಾಬ್ ಯೋಧರ ದೇಹಕ್ಕೆ ತಿರಂಗ (ತ್ರಿವರ್ಣ) ಸುತ್ತಿ ಬಂದಿದೆ. ಆದ್ದರಿಂದ ಪಂಜಾಬ್‌ನಲ್ಲಿ ಪ್ರಧಾನಿ ಮೋದಿಯವರ ಜೀವಕ್ಕೆ ಅಪಾಯವಿದೆ ಎಂದು ಹೇಳುವುದು ಪಂಜಾಬಿಯತ್‌ಗೆ ಮಾಡಿದ ಅವಮಾನವಾಗಿದೆ ಎಂದು ಅವರು ಹೇಳಿದರು.

ಪ್ರಧಾನಿಯವರ ಭದ್ರತಾಲೋಪ ಬಗ್ಗೆ ಗುರುವಾರ ಮಾತನಾಡಿದ ಸಿಧು, ನಾನು ಪ್ರಧಾನ ಮಂತ್ರಿ ಸಾಹಬ್ ಅವರಲ್ಲಿ  ನಾನು ಒಂದು ಮಾತು  ಕೇಳಲು ಬಯಸುತ್ತೇನೆ, ನಮ್ಮ ರೈತ ಸಹೋದರರು ದೆಹಲಿ ಗಡಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಬೀಡು ಬಿಟ್ಟಿದ್ದರು, ಅವರು ಒಂದೂವರೆ ವರ್ಷ ಅಲ್ಲಿಯೇ ಇದ್ದರು. ನಿಮ್ಮ ಮಾಧ್ಯಮಗಳು ಏನನ್ನೂ ಹೇಳಲಿಲ್ಲ.ನಿನ್ನೆ ನೀವು 15 ನಿಮಿಷಗಳ ಕಾಲ ಕಾಯಬೇಕಾಗಿ ಬಂದಿದ್ದಕ್ಕೆ ಯಾಕೆ ಈ ಡಬಲ್ ಸ್ಟಾಂಡರ್ಡ್” ಎಂದು ಹೇಳಿರುವುದಾಗಿ ಪಿಟಿಐ  ವರದಿ ಮಾಡಿದೆ.

ಫಿರೋಜ್‌ಪುರದಲ್ಲಿ ಬಿಜೆಪಿ ರ್ಯಾಲಿ ಬಗ್ಗೆ ತಿಳಿದ ನಂತರ ರೈತರು ನಿನ್ನೆ ಪ್ರತಿಭಟನಾ ಸಭೆಯನ್ನು ಯೋಜಿಸಿದ್ದರು. ಆದರೆ ಪ್ರತಿಭಟನೆ ನಡೆಸಲು ಅವಕಾಶ ನೀಡದೇ ಇದ್ದುದಕ್ಕೆ ಹೆದ್ದಾರಿಯಲ್ಲೇ ಧರಣಿ ಕುಳಿತರು. ಪ್ರಧಾನಿಯವರ ಭದ್ರತೆಯಲ್ಲಿ “ತಥಾಕಥಿತ ಲೋಪ” ಕುರಿತು ಬಿಜೆಪಿಯು ಕ್ಷುಲ್ಲಕ ರಾಜಕೀಯ ನಾಟಕವನ್ನು ರೂಪಿಸುತ್ತಿದೆ ಎಂದು ಸಿಧು ಅವರ ಪಕ್ಷ ಆರೋಪಿಸಿದೆ. ಫಿರೋಜ್‌ಪುರ್‌ನಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದರಿಂದ ಪ್ರಧಾನಿಯವರು ತಮ್ಮ ರ್ಯಾಲಿಯನ್ನು ರದ್ದುಗೊಳಿಸಬೇಕಾಯಿತು ಎಂದು ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಫಿರೋಜ್‌ಪುರ ರ್ಯಾಲಿಯಲ್ಲಿ ಕಡಿಮೆ ಜನರಿದ್ದ ಕಾರಣ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ ಎಂದು ಸಿಧು ಆರೋಪಿಸಿದ್ದಾರೆ.

ಗುರುವಾರ ಅಮರಿಂದರ್ ಸಿಂಗ್ ಅವರು ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಒತ್ತಾಯಿಸಿದರು. “ನಮ್ಮ ಪ್ರಧಾನಿಗೆ ಭದ್ರತೆಯನ್ನು ಒದಗಿಸುವ ತನ್ನ ಸಾಂವಿಧಾನಿಕ ಕರ್ತವ್ಯದಲ್ಲಿ ವಿಫಲವಾದ ಕಾರಣ ಈ ಸರ್ಕಾರವು ಅಧಿಕಾರದಲ್ಲಿ ಮುಂದುವರಿಯುವ ಎಲ್ಲಾ ನೈತಿಕ ಮತ್ತು ಸಾಂವಿಧಾನಿಕ ಅಧಿಕಾರವನ್ನು ಕಳೆದುಕೊಂಡಿದೆ” ಎಂದು ಅಮರಿಂದರ್ ಹೇಳಿದ್ದರು.

ಇದನ್ನೂ ಓದಿ: PM Modi: ದೇಶದಲ್ಲಿ 150 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣ; ಇದು ಭಾರತೀಯರ ಸಾಮರ್ಥ್ಯದ ಸಂಕೇತ ಎಂದ ಪ್ರಧಾನಿ ಮೋದಿ

Published On - 8:00 pm, Fri, 7 January 22

ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ