ಡ್ರಗ್ಸ್: ಮಹಾರಾಷ್ಟ್ರವೇ ಟಾರ್ಗೆಟ್, ರೇಪ್ಗಳು ನಡೆಯುವ ಉತ್ತರ ಪ್ರದೇಶವನ್ನು ಯಾರೂ ಟೀಕಿಸುವುದಿಲ್ಲ ಏಕೆ ? ಸಿಎಂ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ವರ್ಷ ತಮ್ಮ ದಸರಾ ಭಾಷಣದಲ್ಲಿ ಅಂತಿಮವಾಗಿ ಆರ್ಯನ್ ಖಾನ್ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ. ಉದ್ಧವ್ ಠಾಕ್ರೆ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋದ (NCB) ಹೆಸರನ್ನು ತೆಗೆದುಕೊಳ್ಳದೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಂಬೈ: ಮಹಾರಾಷ್ಟ್ರ ಸರ್ಕಾರವು ನಿರಂತರವಾಗಿ ಎನ್‌ಸಿಬಿ ಡ್ರಗ್ಸ್ ದಂಧೆಯ ವಿರುದ್ಧ ಸಮರ ಸಾರಿದೆ. ತೀರಾ ಇತ್ತೀಚೆಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಮಗನನ್ನು ಡ್ರಗ್ಸ್ ಕೇಸ್ ನಲ್ಲಿ ಎನ್‌ಸಿಬಿ ಬಂಧಿಸಿದೆ. ಇದರ ಬಗ್ಗೆ ಈಗ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೌನ ಮುರಿದಿದ್ದಾರೆ. ಎನ್‌ಸಿಬಿ ವಿರುದ್ಧ ಉದ್ದವ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ. ಎನ್‌ಸಿಬಿ ವಿರುದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೋಪಕ್ಕೆ ಏನು ಕಾರಣ? ಇದರ ವಿವರ ಇಲ್ಲಿದೆ ನೋಡಿ.
ಎನ್‌ಸಿಬಿ ವಿರುದ್ಧ ಮಹಾರಾಷ್ಟ್ರ ಸಿಎಂ ಕೋಪ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ವರ್ಷ ತಮ್ಮ ದಸರಾ ಭಾಷಣದಲ್ಲಿ ಅಂತಿಮವಾಗಿ ಆರ್ಯನ್ ಖಾನ್ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ. ಉದ್ಧವ್ ಠಾಕ್ರೆ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋದ (NCB) ಹೆಸರನ್ನು ತೆಗೆದುಕೊಳ್ಳದೆ ತರಾಟೆಗೆ ತೆಗೆದುಕೊಂಡಿದ್ದಾರೆ. ಎನ್‌ಸಿಬಿ ಸಣ್ಣ ಪ್ರಮಾಣದ ಡ್ರಗ್ಸ್ ಅನ್ನು ಮಾತ್ರ ವಶಪಡಿಸಿಕೊಂಡಿದೆ. ಆದರೆ, ಮಹಾರಾಷ್ಟ್ರ ಪೊಲೀಸರು ಮಾದಕ ವಸ್ತುಗಳ ಸಾಗಣೆಯ ಸಮಯದಲ್ಲಿ 150 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
“ಅವರಿಗೆ ಆಸಕ್ತಿಯಿರುವುದು ಸೆಲೆಬ್ರಿಟಿಗಳನ್ನು ಹಿಡಿಯುವುದು, ಅವರ ಚಿತ್ರಗಳನ್ನು ಕ್ಲಿಕ್ ಮಾಡುವುದು ಮತ್ತು ಸ್ವಲ್ಪ ಶಬ್ದ ಮಾಡುವುದು” ಎಂದು ಸಿಎಂ ಉದ್ದವ್ ಠಾಕ್ರೆ ಹೇಳಿದ್ದಾರೆ.
“ಮಹಾರಾಷ್ಟ್ರವು ಡ್ರಗ್ಸ್ ರಾಜಧಾನಿಯಾಗಿ ಮಾರ್ಪಟ್ಟಿದೆ ಎಂದು ಚಿತ್ರಿಸಿದ್ದಾರೆ. ಅದು ಹಾಗಲ್ಲ. ಗುಜರಾತ್ ರಾಜ್ಯದ ಮುಂದ್ರಾದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಸಾಗಾಟ ಮಾಡಲಾಗಿತ್ತು. ನಿಮ್ಮ ಏಜೆನ್ಸಿಗಳು ಚಿಟಿಕೆ ಗಾಂಜಾವನ್ನು ವಶಪಡಿಸಿಕೊಳ್ಳುತ್ತಿರುವಾಗ, ಮಹಾರಾಷ್ಟ್ರ ಪೊಲೀಸರು 150 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಉದ್ದವ್ ಠಾಕ್ರೆ ಹೇಳಿದರು.
ಇದು ಮಹಾರಾಷ್ಟ್ರದ ಇಮೇಜ್ ಅನ್ನು ಕೆಡಿಸುವ ಮತ್ತು ಮಹಾರಾಷ್ಟ್ರವನ್ನು ಡ್ರಗ್ಸ್ ಹಬ್ ಆಗಿ ಬಿಂಬಿಸುವ ಸಂಚು ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿದ್ದಾರೆ. ಇಂತಹ ಡ್ರಗ್ಸ್ ಪ್ರಕರಣಗಳಿಗೆ ಸಿಗುವ ಪ್ರಚಾರದಿಂದ ಮಹಾರಾಷ್ಟ್ರವನ್ನು ಬೇರೆ ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ ಎಂದು ಅವರು ಹೇಳಿದರು. “ಮಹಾರಾಷ್ಟ್ರವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ, ಅತ್ಯಾಚಾರಗಳು ನಡೆಯುವ ಉತ್ತರ ಪ್ರದೇಶದಂತಹ ಸ್ಥಳಗಳನ್ನು ಏಕೆ ಟೀಕಿಸುವುದಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಹಲವಾರು ಸೆಲೆಬ್ರಿಟಿಗಳನ್ನು ಎನ್‌ಸಿಬಿ ವಿಚಾರಣೆಗೊಳಪಡಿಸಿದೆ. ಎನ್‌ಸಿಬಿ ಈ ಹಿಂದೆ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿಯನ್ನು ಬಂಧಿಸಿದ್ದು ಮಾತ್ರವಲ್ಲದೆ ಬಾಲಿವುಡ್‌ನ ಕೆಲವು ದೊಡ್ಡ ಸ್ಟಾರ್ ಗಳಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಅವರನ್ನು ವಿಚಾರಣೆ ನಡೆಸಿದೆ.
(shivsena leader maharashtra cm uddhav thackeray says NCB is tarneshing maharashtra image on drugs )
Published On - 3:13 pm, Sat, 16 October 21