Video: 12ನೇ ತರಗತಿ ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿ, ತೊಡೆಗೆ ಒದ್ದ ಶಿಕ್ಷಕ ಅರೆಸ್ಟ್
ಬಂಧಿತ ಶಿಕ್ಷಕನನ್ನು ಎಂ.ಸುಬ್ರಹ್ಮಣಿಯನ್ (56) ಎಂದು ಗುರುತಿಸಲಾಗಿದೆ. ಚಿದಂಬರಂನಲ್ಲಿರುವ ನಂದನಾರ್ ಸರ್ಕಾರಿ ಆದಿ ದ್ರಾವಿಡರ್ ಮಾಧ್ಯಮಿಕ ಶಾಲೆಯ ಭೌತಶಾಸ್ತ್ರ ಪ್ರಾಧ್ಯಾಪಕರು.
ಚೆನ್ನೈ: 12ನೇ ತರಗತಿ ವಿದ್ಯಾರ್ಥಿಗೆ ಥಳಿಸಿದ ಇಲ್ಲಿನ ಕಡಲೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಶಿಕ್ಷಕನನ್ನು ಬಂಧಿಸಲಾಗಿದೆ. ಈ ಶಿಕ್ಷಕ ವಿದ್ಯಾರ್ಥಿಗೆ ಥಳಿಸಿದ ವಿಡಿಯೋ ಸೋಷಿಯಲ್ ಮೀಡಿಯಾ (Social Media)ಗಳಲ್ಲಿ ಸಿಕ್ಕಾಪಟೆ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನೇಕರು ತಮಿಳುನಾಡು ಶಿಕ್ಷಣ ಸಚಿವ ಅಂಬಿಲ್ ಮಹೇಶ್ ಪೊಯ್ಯಾಮೋಜಿ ಅವರನ್ನು ಒತ್ತಾಯಿಸಿದ್ದರು. ಇದೀಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬಂಧಿತ ಶಿಕ್ಷಕನನ್ನು ಎಂ.ಸುಬ್ರಹ್ಮಣಿಯನ್ (56) ಎಂದು ಗುರುತಿಸಲಾಗಿದೆ. ಚಿದಂಬರಂನಲ್ಲಿರುವ ನಂದನಾರ್ ಸರ್ಕಾರಿ ಆದಿ ದ್ರಾವಿಡರ್ ಮಾಧ್ಯಮಿಕ ಶಾಲೆಯ ಭೌತಶಾಸ್ತ್ರ ಪ್ರಾಧ್ಯಾಪಕರು. ಇವರು 12ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಬೆತ್ತದಿಂದ ಮನಸಿಗೆ ಬಂದಂತೆ ಥಳಿಸಿದ್ದಾರೆ. ಆ ವಿದ್ಯಾರ್ಥಿಗೆ ತೊಡೆಯ ಮೇಲೆ ಒದ್ದಿದ್ದಾರೆ. ಅದೇ ಸಮಯಕ್ಕೆ ಕ್ಲಾಸ್ನಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಇದು ಆ ಶಿಕ್ಷಕನಿಗೂ ಗೊತ್ತಿರಲಿಲ್ಲ.
ಸದ್ಯ ಶಿಕ್ಷಕನ ವಿರುದ್ಧ ಪೊಲೀಸರು ಎಸ್ಸಿ/ಎಸ್ಟಿ ಕಾಯ್ದೆ 1989ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಆ ವಿದ್ಯಾರ್ಥಿ ತಾನು ಭೌತಶಾಸ್ತ್ರ ರೆಕಾರ್ಡ್ ನೋಟ್ಬುಕ್ ಸಂಗ್ರಹಿಸಲು ಅನುಮತಿ ಪಡೆದಿದ್ದ. ಆದರೆ ತರಗತಿಗೆ ಬಂಕ್ ಮಾಡಿದ್ದ. ಇದರಿಂದ ಕೋಪಗೊಂಡು ಹೊಡೆದಿದ್ದಾಗಿ ಆ ಶಿಕ್ಷಕ ವಿಚಾರಣೆ ವೇಳೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈತ ತಾನು ತರಗತಿಗೆ ಬಂಕ್ ಮಾಡುವುದಲ್ಲದೆ, ಕಾಲೇಜಿನ ಮೂರನೇ ಫ್ಲೋರ್ಗೆ ಹೋಗಿ, ಅಲ್ಲಿನ ಏಳುಮಂದಿಯನ್ನು ಕರೆದುಕೊಂಡು ಹೋಗಿದ್ದಾನೆ. ಅದಾದ ನಂತರ ಮುಖ್ಯಶಿಕ್ಷಕರು ತರಗತಿ ಪರಿಶೀಲನೆಗೆ ಬಂದು, ಈ ವಿದ್ಯಾರ್ಥಿಗಳ ಬಗ್ಗೆ ಕೇಳಿದ್ದಾರೆ. ಆದರೆ ಉಳಿದ ವಿದ್ಯಾರ್ಥಿಗಳು ಏನೂ ಉತ್ತರ ಕೊಡಲಿಲ್ಲ ಎಂದೂ ತಿಳಿಸಿದ್ದಾರೆ. ನಾನೂ ಏಳೂ ವಿದ್ಯಾರ್ಥಿಗಳನ್ನೂ ಹೊಡೆದಿದ್ದೇನೆ. ಆದರೆ ಈ ವಿದ್ಯಾರ್ಥಿ ಸುಳ್ಳು ಹೇಳಿದ್ದಾನೆ. ಉಳಿದವರು ಕೂಡ ತರಗತಿ ಬಂಕ್ ಮಾಡಲು ಕಾರಣನಾಗಿದ್ದಾನೆ. ಹಾಗಾಗಿ ಸ್ವಲ್ಪ ಜಾಸ್ತಿ ಪ್ರಮಾಣದಲ್ಲಿ ಹೊಡೆದಿದ್ದೇನೆ ಎಂದೂ ಹೇಳಿದ್ದಾರೆ.
“சிதம்பரம்,நந்தனார் அரசுப்பள்ளியில் பயிலும் மாணவர் வகுப்புக்கு சரியாக வரவில்லை” என அவரை முட்டி போடவைத்து மூர்க்கமாக தாக்கும் ஆசிரியர் கால்களால் பலமாக உதைப்பதை கண்டு அதிர்ச்சியடைந்தேன். இச்செயலை கண்டிப்பதோடு, உடனடி நடவடிக்கை எடுக்க @arivalayam அரசை வலியுறுத்துகிறேன்.@Anbil_Mahesh pic.twitter.com/7pjK4dASyX
— Vinoj P Selvam (@VinojBJP) October 14, 2021
ಇದನ್ನೂ ಓದಿ: ‘ಜೈ ಭೀಮ್’ ಟೀಸರ್ನಲ್ಲಿ ದಲಿತರ ಪರ ಧ್ವನಿ ಎತ್ತಿದ ಸೂರ್ಯ; ಸಿನಿಪ್ರಿಯರಿಂದ ಸಖತ್ ರೆಸ್ಪಾನ್ಸ್
Viral Videos: ಆಹಾ, ಇಷ್ಟೊಂದು ಮುದ್ದುಮುದ್ದಾಗಿ ಕದಿಯಬಹುದಾ?; ಚಾಣಾಕ್ಷ ಶ್ವಾನಗಳ ವಿಡಿಯೋ ನೋಡಿ