ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ರಾಹುಲ್​ ಗಾಂಧಿ?-ಇಂದಿನ ಸಭೆಯಲ್ಲಿ ಅವರಾಡಿದ ಒಂದು ಮಾತಿನಿಂದ ಶುರುವಾಗಿದೆ ಕುತೂಹಲ

ಕೇರಳದ ಸಂಸದರಾಗಿರುವ ರಾಹುಲ್​ ಗಾಂಧಿ ಈ ಹಿಂದೆ 2017ರಲ್ಲಿ ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಏರಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಹೀನಾಯವಾಗಿ ಸೋತಿತ್ತು. ಅದರ ನೈತಿಕ ಹೊಣೆ ಹೊತ್ತ ರಾಹುಲ್​ ಗಾಂಧಿ ರಾಜೀನಾಮೆ ನೀಡಿದ್ದರು.

ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ರಾಹುಲ್​ ಗಾಂಧಿ?-ಇಂದಿನ ಸಭೆಯಲ್ಲಿ ಅವರಾಡಿದ ಒಂದು ಮಾತಿನಿಂದ ಶುರುವಾಗಿದೆ ಕುತೂಹಲ
ರಾಹುಲ್​ ಗಾಂಧಿ
Follow us
TV9 Web
| Updated By: Lakshmi Hegde

Updated on: Oct 16, 2021 | 4:35 PM

ದೆಹಲಿ: ಕಾಂಗ್ರೆಸ್​ ಕಾರ್ಯಕಾರಿ ಸಮಿತಿ(Congress working committee)ಯ ಸಭೆ ನಡೆದ ಬೆನ್ನಲ್ಲೇ ಕಾಂಗ್ರೆಸ್​ ವಲಯದಿಂದ ಇನ್ನೊಂದು ಸುದ್ದಿ ಹೊರಬಿದ್ದಿದೆ. ಕಾಂಗ್ರೆಸ್​ ಅಧ್ಯಕ್ಷ (Congress President) ಸ್ಥಾನಕ್ಕೆ ಮತ್ತೊಮ್ಮೆ ಏರುವ ಬಗ್ಗೆ ರಾಹುಲ್​ ಗಾಂಧಿ ಪರಾಮರ್ಶಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಸೋನಿಯಾ ಗಾಂಧಿ (Sonia Gandhi) ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ನಾನು ಹಂಗಾಮಿ ಅಧ್ಯಕ್ಷೆಯಲ್ಲ..ಪೂರ್ಣಾವಧಿ ಅಧ್ಯಕ್ಷೆಯಾಗಿಯೇ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಸಭೆಯಲ್ಲಿ ಸೋನಿಯಾ ಗಾಂಧಿ ಜಿ 23 ನಾಯಕರಿಗೆ ಹೇಳಿದ್ದಾರೆ. ಆದರೆ ಪಂಜಾಬ್​, ರಾಜಸ್ಥಾನ, ಛತ್ತೀಸಗಡ್​, ಮಾಜಿ ರಕ್ಷಣಾ ಸಚಿವ ಎ.ಕೆ.ಅಂಟೋನಿ ಸೇರಿ ಹಲವರು, ರಾಹುಲ್​ ಗಾಂಧಿಯವರಿಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹೊರುವಂತೆ ಒತ್ತಾಯಿಸಿದ್ದಾರೆ. ಅವರ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್​ ಗಾಂಧಿ, ಖಂಡಿತವಾಗಿಯೂ ನಿಮ್ಮ ಮನವಿಯನ್ನು ಪರಿಗಣಿಸುತ್ತೇನೆ. ಈ ಸಂಬಂಧ ಪರಾಮರ್ಶಿಸುತ್ತೇನೆ ಎಂದು ಹೇಳಿದ್ದಾಗಿ ವರದಿಯಾಗಿದೆ. 

ಇಂದಿನ ಸಭೆಯಲ್ಲಿ ಕಾಂಗ್ರೆಸ್​ ಸಾಂಸ್ಥಿಕ ಹುದ್ದೆಗಳ ಚುನಾವಣೆ ಸೇರಿ, ನೂತನ ಅಧ್ಯಕ್ಷನ ಆಯ್ಕೆ ಬಗ್ಗೆಯೂ ವ್ಯಾಪಕ ಚರ್ಚೆ ನಡೆದಿದೆ. ಮುಂದಿನ ವರ್ಷದ ಸೆಪ್ಟೆಂಬರ್​ ಒಳಗೆ ಈ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಾಂಸ್ಥಿಕ ಚುನಾವಣೆಗಳ ವೇಳಾಪಟ್ಟಿಯನ್ನೂ ಈಗಲೇ ಅಂತಿಮಗೊಳಿಸಲಾಗಿದೆ ಎಂದೂ ಹೇಳಲಾಗಿದೆ. ಈ ಮಧ್ಯೆ ಇಂದು ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ, ನೀವೀಗ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ಅದಕ್ಕೆ ನಾನು ನಿಮ್ಮ ಮಾತನ್ನು ಪರಿಗಣಿಸುತ್ತೇನೆ (Will Consider) ಎಂದು ರಾಹುಲ್​ ಗಾಂಧಿ ಉತ್ತರಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಕೇರಳದ ಸಂಸದರಾಗಿರುವ ರಾಹುಲ್​ ಗಾಂಧಿ ಈ ಹಿಂದೆ 2017ರಲ್ಲಿ ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಏರಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಹೀನಾಯವಾಗಿ ಸೋತಿತ್ತು. ಅದರ ನೈತಿಕ ಹೊಣೆ ಹೊತ್ತ ರಾಹುಲ್​ ಗಾಂಧಿ ರಾಜೀನಾಮೆ ನೀಡಿದ್ದರು. ಅವರು ಹುದ್ದೆಯಿಂದ ಕೆಳಗೆ ಇಳಿದ ಬಳಿಕ ಮತ್ತೆ ಸೋನಿಯಾ ಗಾಂಧಿಯವರು ಮಧ್ಯಂತರ ಅವಧಿಗೆ ಅಧ್ಯಕ್ಷೆಯಾಗಿದ್ದರು. ಆದರೆ ಇದುವರೆಗೂ ಅಂದರೆ ಎರಡು ವರ್ಷವಾದರೂ ಕಾಂಗ್ರೆಸ್​ಗೆ ನೂತನ ಅಧ್ಯಕ್ಷ ಸಿಗಲಿಲ್ಲ. ಈ ಬಗ್ಗೆ ಅವರದ್ದೇ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪದೇಪದೆ ಸೋನಿಯಾ ಗಾಂಧಿಗೆ ಪತ್ರ ಬರೆದು ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಕೆಲವರು ಮಾಧ್ಯಮಗಳ ಎದುರೂ ಹೇಳಿಕೊಂಡಿದ್ದಾರೆ.  ಇನ್ನು ರಾಹುಲ್​ ಗಾಂಧಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದ ಬಳಿಕ ಪಕ್ಷಕ್ಕೆ ನೂತನ ನಾಯಕರು ಬೇಕು..ಆದರೆ ಗಾಂಧಿ ಕುಟುಂಬದಿಂದ ಹೊರತಾದ ನಾಯಕ ಆಗಿರಬೇಕು ಎಂಬ ಕೂಗೂ ಕೇಳಿಬಂದಿತ್ತು. ಈಗ ಮತ್ತೊಮ್ಮೆ ರಾಹುಲ್​ ಗಾಂಧಿಯೇ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್​ನ ಫಂಡ್ ಮ್ಯಾನೇಜರ್​ಗಳು ಬಸ್ಸಿನ ಡ್ರೈವರ್ ಅಥವಾ ವಿಮಾನದ ಪೈಲಟ್​ಗಳಿದ್ದಂತೆ: ಡಾ ಬಾಲಾಜಿ ರಾವ್

ನಮ್ಮ ನಾಯಕರು ಯಾರನ್ನೂ ಮುಗಿಸುವ ಪ್ರಶ್ನೆ ಇಲ್ಲ, ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ: ಕುಮಾರಸ್ವಾಮಿಗೆ ಶಿವಕುಮಾರ್ ತಿರುಗೇಟು