ಸಾರ್ವಜನಿಕ ಜಾಗೃತಿ ಅಭಿಯಾನ ನಡೆಸಲು ಕಾಂಗ್ರೆಸ್​ ನಿರ್ಧಾರ; ಇಂದಿನ ಕಾರ್ಯಕಾರಿ ಸಭೆಯಲ್ಲಿ ಮಹತ್ವದ ವಿಷಯಗಳ ಚರ್ಚೆ

ನವೆಂಬರ್​​ 14ರಿಂದ 21ರವರೆಗೆ ನಡೆಯಲಿರುವ ಜಾಗೃತಿ ಅಭಿಯಾನದಲ್ಲಿ, ಹಣದುಬ್ಬರ ಮತ್ತು ಬೆಲೆ ಏರಿಕೆ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಅದರ ಹೊರತಾಗಿ, ಪ್ರತಿ ಬೂತ್​​ ಮಟ್ಟದಲ್ಲಿ ಕಾಂಗ್ರೆಸ್​​ನಿಂದ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಕೆ.ಸಿ.ವೇಣುಗೋಪಾಲ್​ ತಿಳಿಸಿದ್ದಾರೆ.

ಸಾರ್ವಜನಿಕ ಜಾಗೃತಿ ಅಭಿಯಾನ ನಡೆಸಲು ಕಾಂಗ್ರೆಸ್​ ನಿರ್ಧಾರ; ಇಂದಿನ ಕಾರ್ಯಕಾರಿ ಸಭೆಯಲ್ಲಿ ಮಹತ್ವದ ವಿಷಯಗಳ ಚರ್ಚೆ
ಕಾಂಗ್ರೆಸ್ ಕಾರ್ಯಕಾರಿ ಸಮಿತಿ

ಇಂದು ಸೋನಿಯಾ ಗಾಂಧಿ (Sonia Gandhi) ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆದಿದ್ದು, ಅದು ಮುಗಿದ ಬಳಿಕ ಕಾಂಗ್ರೆಸ್​ ನಾಯಕರಾದ ಕೆ.ಸಿ.ವೇಣುಗೋಪಾಲ್​ ಮತ್ತು ರಣದೀಪ್​ ಸುರ್ಜೇವಾಲಾ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಸಿ.ವೇಣುಗೋಪಾಲ್​, ಇಂದಿನ ಸಿಡಬ್ಲ್ಯೂಸಿ ಸಭೆಯಲ್ಲಿ ಮೂರು ನಿರ್ಣಯಗಳನ್ನು ಅಂಗೀಕರಿಸಲಾಯಿತು ಎಂದು ಹೇಳಿದರು. ಹಾಗೇ, ನವೆಂಬರ್​ 14ರಿಂದ 21ರವರೆಗೆ ನಮ್ಮ ಪಕ್ಷದಿಂದ ದೇಶಾದ್ಯಂತ ಸಾರ್ವಜನಿಕರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದೂ ಮಾಹಿತಿ ನೀಡಿದರು. 

ನವೆಂಬರ್​​ 14ರಿಂದ 21ರವರೆಗೆ ನಡೆಯಲಿರುವ ಜಾಗೃತಿ ಅಭಿಯಾನದಲ್ಲಿ, ಹಣದುಬ್ಬರ ಮತ್ತು ಬೆಲೆ ಏರಿಕೆ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಅದರ ಹೊರತಾಗಿ, ಪ್ರತಿ ಬೂತ್​​ ಮಟ್ಟದಲ್ಲಿ ಕಾಂಗ್ರೆಸ್​​ನಿಂದ ಪಾದಯಾತ್ರೆ ನಡೆಸಲಾಗುತ್ತದೆ. ಪ್ರತಿ ರಾಜ್ಯದಲ್ಲೂ ಕಂಟ್ರೋಲ್​ ರೂಮ್​ ರಚನೆ ಮಾಡಲಾಗುವುದು ಎಂದು ತಿಳಿಸಿದರು. ಇನ್ನು ಇಂದಿನ ಸಿಡಬ್ಲ್ಯೂಸಿ ಸಭೆಯಲ್ಲಿ ಸಾಂಸ್ಥಿಕ ಚುನಾವಣೆಗಳ ಬಗ್ಗೆಯೂ ಚರ್ಚೆ ನಡೆದಿದೆ.  ನಾಡಿದ್ದು ನವೆಂಬರ್​ 1ರಿಂದ, 2022ರ ಮಾರ್ಚ್​ 31ರವರೆಗೆ ಕಾಂಗ್ರೆಸ್​​ನಿಂದ ಸದಸ್ಯತ್ವ ಅಭಿಯಾನ ನಡೆಯಲಿದೆ. ಪಕ್ಷದ ಸದಸ್ಯತ್ವ ಪಡೆಯಲು ಇಚ್ಛಿಸುವವರು ಕೇವಲ 5 ರೂಪಾಯಿ ಕೊಡಬೇಕು. ಇನ್ನು ಬರುವ ವರ್ಷ ಆಗಸ್ಟ್​ 21ರಿಂದ ಸೆಪ್ಟೆಂಬರ್​ 22ರವರೆಗೆ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಇಂದಿನ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ದೇಶದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿದೆ. ದೇಶದೊಳಗಿನ ಭದ್ರತೆಗೆ ಎದುರಾಗಿರುವ ಅಪಾಯ ಮತ್ತು ಹೊರಗಿನಿಂದ ಉಂಟಾಗುತ್ತಿರುವ ಅಪಾಯ ಎರಡರ ಬಗ್ಗೆಯೂ ನಮಗೆ ತುಂಬ ಕಳವಳ ಇದೆ. ಚೀನಾ ಈಗಲೂ ಸಹ ನಮ್ಮ ದೇಶವನ್ನು ಆಕ್ರಮಿಸಲು ಮುಂದಾಗುತ್ತಿದೆ. ಆದರೆ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ ಎಂದು ವೇಣುಗೋಪಾಲ್​ ಹೇಳಿದ್ದಾರೆ.  ಇನ್ನು ದೇಶದ ಆರ್ಥಿಕ ಪರಿಸ್ಥಿತಿ, ಮೂರು ಕೃಷಿ ಕಾಯ್ದೆಗಳ ರದ್ದತಿ, ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ನರೇಂದ್ರ ಮೋದಿಯವರು ಈ ದೇಶದ ಆಸ್ತಿ ಮೀರಿ ತಮ್ಮ ಸರ್ಕಾರ ನಡೆಸಲು ಬಯಸುತ್ತಿದ್ದಾರೆ. ಇದೆಲ್ಲ ವಿಚಾರಗಳ ಬಗ್ಗೆಯೂ ಜನರಿಗೆ ನಾವು ತಿಳಿವಳಿಕೆ ಮೂಡಿಸಬೇಕಿದೆ. ಹಾಗಾಗಿ ಸಾರ್ವಜನಿಕ ಜಾಗೃತಿ ಅಭಿಯಾನ ನಡೆಸಲಿದ್ದೇವೆ ಎಂದು ಹೇಳಿದರು. ಹಾಗೇ, ಬರುವ ವರ್ಷ ನಡೆಯಲಿರುವ ಎಐಸಿಸಿ ಅಧ್ಯಕ್ಷರ ಚುನಾವಣೆಯವರೆಗೂ ಸೋನಿಯಾ ಗಾಂಧಿಯವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ನಮಗೆಲ್ಲರಿಗೂ ಅವರ ಮೇಲೆ ನಂಬಿಕೆಯಿದೆ ಎಂದೂ ತಿಳಿಸಿದರು.

ಇದನ್ನೂ ಓದಿ: ಲಸಿಕೆ ನೀಡಲು ಮನೆಬಾಗಿಲಿಗೆ ಬಂದ ಆರೋಗ್ಯ ಸಿಬ್ಬಂದಿಗೆ ಶಾಕ್​ ಕೊಟ್ಟ ಮಹಿಳೆ; ಸಹಾಯಕ್ಕೆ ಅಕ್ಕಪಕ್ಕದವರನ್ನು ಕರೆದ ಕಾರ್ಯಕರ್ತರು

‘ಕೋಟಿಗೊಬ್ಬ 3’ ಕಿರಿಕ್​ಗೆ ಟ್ವಿಸ್ಟ್; ಸೂರಪ್ಪ ಬಾಬು ಮೇಲೆ ವಿತರಕ ಖಾಝಾಪೀರ್ ಆರೋಪ; ಆಡಿಯೋ ಕ್ಲಿಪ್​ ಲಭ್ಯ

Click on your DTH Provider to Add TV9 Kannada