‘ಕೋಟಿಗೊಬ್ಬ 3’ ಕಿರಿಕ್​ಗೆ ಟ್ವಿಸ್ಟ್; ಸೂರಪ್ಪ ಬಾಬು ಮೇಲೆ ವಿತರಕ ಖಾಝಾಪೀರ್ ಆರೋಪ; ಆಡಿಯೋ ಕ್ಲಿಪ್​ ಲಭ್ಯ

ಚಿತ್ರದುರ್ಗ ಸಿನಿಮಾ ವಿತರಕ ಖಾಝಾಪೀರ್​ ಅವರಿಗೆ ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪ ಬಾಬು ಅವರು ಫೋನ್​ ಕರೆ ಮೂಲಕ ಬೆದರಿಕೆ ಹಾಕಿದ್ದು, ಅದರ ಆಡಿಯೋ ಕ್ಲಿಪ್​ ಲಭ್ಯವಾಗಿದೆ.

‘ಕೋಟಿಗೊಬ್ಬ 3’ ಕಿರಿಕ್​ಗೆ ಟ್ವಿಸ್ಟ್; ಸೂರಪ್ಪ ಬಾಬು ಮೇಲೆ ವಿತರಕ ಖಾಝಾಪೀರ್ ಆರೋಪ; ಆಡಿಯೋ ಕ್ಲಿಪ್​ ಲಭ್ಯ
ಸೂರಪ್ಪ ಬಾಬು


‘ಕೋಟಿಗೊಬ್ಬ 3’ ಚಿತ್ರದ ರಿಲೀಸ್​ಗೆ ಗುರುವಾರ (ಅ.14) ವಿಘ್ನ ಎದುರಾಗಿದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ನಿರಾಸೆಯಿಂದ ವಾಪಸ್​ ತೆರಳಿದ್ದರು. ಇದರಿಂದ ಚಿತ್ರಕ್ಕೆ ಭಾರಿ ನಷ್ಟ ಉಂಟಾಯಿತು. ಇದಕ್ಕೆಲ್ಲ ಕೆಲವು ವಿತರಕರ ಮೋಸವೇ ಕಾರಣ ಎಂದು ನಿರ್ಮಾಪಕ ಸೂರಪ್ಪ ಬಾಬು ಆರೋಪಿಸಿದ್ದರು. ಅಲ್ಲದೇ, ತೊಂದರೆ ನೀಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಸಮರ ಸಾರುವುದಾಗಿ ಹೇಳಿದ್ದರು. ಆದರೆ ಈಗ ಚಿತ್ರದುರ್ಗದ ವಿತರಕ ಖಾಝಾಪೀರ್​ ಅವರು ಸೂಪರ್​ ಬಾಬು ವಿರುದ್ಧ ಕೊಲೆ ಬೆದರಿಕೆ ಆರೋಪ ಹೊರಿಸಿದ್ದಾರೆ.​

ಚಿತ್ರದುರ್ಗದ ಸಿನಿಮಾ ವಿತರಕ ಖಾಝಾಪೀರ್ ಅವರಿಗೆ ಸೂರಪ್ಪ ಬಾಬು ಅವರು ಫೋನ್​ ಕರೆ ಮೂಲಕ ಬೆದರಿಕೆ ಹಾಕಿದ್ದು, ಅದರ ಆಡಿಯೋ ಕ್ಲಿಪ್​ ಲಭ್ಯವಾಗಿದೆ. ‘ಕೋಟಿಗೊಬ್ಬ 3’ ವಿತರಣೆ ಹಕ್ಕು ನೀಡಲು ನಿರ್ಮಾಪಕ ಸೂರಪ್ಪ ಬಾಬು ಅವರು ಖಾಝಾಪೀರ್ ಅವರಿಂದ 60 ಲಕ್ಷ ಹಣ ಪಡೆದಿದ್ದರು. ಒಟ್ಟು 1 ಕೋಟಿ 90 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿಕೊಂಡಿದ್ದರು. ನಂತರ ಚಿತ್ರವೂ ನೀಡದೇ ಹಣವೂ ನೀಡದೇ ಧಮ್ಕಿ ಹಾಕುತ್ತಿದ್ದಾರೆ ಎಂದು ಖಾಝಾಪೀರ್​ ಆರೋಪ ಮಾಡುತ್ತಿದ್ದಾರೆ.

ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗೆ ಖಾಝಾಪೀರ್ ಅವರು ವಿತರಣೆ ಹಕ್ಕು ಪಡೆದಿದ್ದರು. ಅದಕ್ಕಾಗಿ ಮಾರ್ಚ್ 31ರಂದು ರಾಮ್​ಬಾಬು ಫಿಲಂಸ್​ಗೆ ಹಣ ಸಂದಾಯ ಮಾಡಲಾಗಿತ್ತು. 45 ಲಕ್ಷ ರೂ.ಗಳನ್ನು RTGS ಮೂಲಕ ಮತ್ತು 5 ಲಕ್ಷ ರೂ. ನೇರವಾಗಿ ನೀಡಿದ್ದಾಗಿ ವಿತರಕ ಖಾಝಾಪೀರ್ ಹೇಳಿಕೆ ನೀಡಿದ್ದಾರೆ.

ಅ.14ರಂದು ಸಿನಿಮಾ ಬಿಡಗಡೆ ಆಗದಿದ್ದಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳ ಆಕ್ರೋಶ ವ್ಯಕ್ತಪಡಿಸಿದ್ದರು. ಮರುದಿನ ಜಾಕ್ ಮಂಜು‌ಗೆ ಎಂಬಿ ಬಾಬು ಅವರು ಸಿನಿಮಾ ವಿತರಣೆಗೆ ಅವಕಾಶ ನೀಡಿದ್ದರು. ಬಳಿಕ ಖಾಝಾಪೀರ್ ಹಣ ವಾಪಸ್ ಕೇಳಿದರು. ಹಣ ವಾಪಸ್​ ಕೇಳಿದ್ದಕ್ಕೆ ಸೂರಪ್ಪ ಬಾಬು ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹಣ ಕೇಳಬಾರದು. ಕೇಳಿದರೆ ಚಿತ್ರದುರ್ಗದಿಂದ ಓಡಿಸುತ್ತೇನೆ ಅಂತ ಸೂರಪ್ಪ ಬಾಬು ಧಮ್ಕಿ ಹಾಕಿದ್ದಾರೆ ಎಂದು ಖಾಝಾಪೀರ್​ ಆರೋಪ ಮಾಡಿದ್ದಾರೆ. ಚಿತ್ರದುರ್ಗ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅವರು ಮುಂದಾಗಿದ್ದಾರೆ.

ಇದನ್ನೂ ಓದಿ:

‘ಕೋಟಿಗೊಬ್ಬ 3’ ರಿಲೀಸ್​ ಮಾಡಬೇಡಿ ಅಂತ ಚಿತ್ರಮಂದಿರಕ್ಕೆ ಫೋನ್​ ಮಾಡಿದ್ರು: ಸುದೀಪ್​ ಸ್ಫೋಟಕ ಆರೋಪ

Kotigobba 3: ಕಿಚ್ಚನ ಒಂದೇ ಒಂದು ಟ್ವೀಟ್​ನಿಂದ​ ಹೆಚ್ಚಿತು ‘ಕೋಟಿಗೊಬ್ಬ 3’ ಕ್ರೇಜ್​; ಅಂಥ ವಿಶೇಷ ಇದರಲ್ಲೇನಿದೆ?

Click on your DTH Provider to Add TV9 Kannada