ನಮ್ಮ ನಾಯಕರು ಯಾರನ್ನೂ ಮುಗಿಸುವ ಪ್ರಶ್ನೆ ಇಲ್ಲ, ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ: ಕುಮಾರಸ್ವಾಮಿಗೆ ಶಿವಕುಮಾರ್ ತಿರುಗೇಟು
ಸಿದ್ದರಾಮಯ್ಯ ಬಗ್ಗೆ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಮಾಡಿರುವ ಸರಣಿ ಟ್ವೀಟ್ ವಿಚಾರವಾಗಿ ಸಿಂದಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ನಾಯಕರು ಯಾರನ್ನೂ ಮುಗಿಸುವ ಪ್ರಶ್ನೆ ಇಲ್ಲ. ಪಕ್ಷದ ನಾಯಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಕುಮಾರಸ್ವಾಮಿದು ರಾಜಕಾರಣ ಹೇಳಿಕೆ, ವಾಸ್ತವಾಂಶ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿಂದಗಿ: ಇಂದು ಬೆಳಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಗ್ಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ಮಾಡಿರುವ ಸರಣಿ ಟ್ವೀಟ್ ವಿಚಾರವಾಗಿ ಸಿಂದಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ನಾಯಕರು ಯಾರನ್ನೂ ಮುಗಿಸುವ ಪ್ರಶ್ನೆ ಇಲ್ಲ. ಪಕ್ಷದ ನಾಯಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. HDK ರಾಜಕೀಯವಾಗಿ ಏನಾದರು ಮಾತನಾಡಿರಬಹುದು. ಅದು ರಾಜಕಾರಣ ಹೇಳಿಕೆ, ವಾಸ್ತವಾಂಶ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ಉಪ ಚುನಾವಣೆ ಸಮರ ಪ್ರಚಾರ ಭರಾಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಚಾರ ನಡೆಸಿದರು. ಇಂದು ಅನಂತ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಅಬ್ಸರ್ವರ್ ಸಭೆ ನಡೆಸಿದ ಬಳಿಕ ಮಾತನಾಡಿದ ಡಿಕೆಶಿ ಬೆಲೆ ಏರಿಕೆ ಬಿಸಿ ಎಲ್ಲರಿಗೂ ತಟ್ಟಿದೆ. ಮತದಾರ ತನಗೆ ಆಗಿರೋ ನೋವು ಹೇಳಿಕೊಳ್ಳಲು ಇದೊಂದು ಸಮಯ ಬಂದಿದೆ. ಅದನ್ನ ಹಾನಗಲ್ ಹಾಗೂ ಸಿಂದಗಿ ಮತದಾರರು ಮಾಡುತ್ತಾರೆ ಎಂದು ಆಶಿಸಿದರು.
ರಾಯಚೂರು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ವಿವಾದಾತ್ಮಕ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಡಿ ಕೆ ಶಿವಕುಮಾರ್ ಇದು ಬಿಜೆಪಿಯ ಮೂಲಭೂತ ಸಂಸ್ಕೃತಿ. ಅಖಂಡ ಕರ್ನಾಟಕದ ಬಗ್ಗೆ ಚಿಂತನೆ ಇಲ್ಲ. ಸಾಯಂಕಾಲದ ಒಳಗೆ ಶಿವರಾಜ್ ಪಾಟೀಲ್ ನನ್ನು ಶಾಸಕ ಸ್ಥಾನದಿಂದ, ಪಕ್ಷದಿಂದ ಹೊರಗೆ ಹಾಕಬೇಕು. ಶಾಸಕ ಪಾಟೀಲ್ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿದರು. ಅಖಂಡ ಕರ್ನಾಟಕಕ್ಕೆ ಧಕ್ಕೆಯಾಗಿದೆ. ಈ ಹೇಳಿಕೆ ಮೂಲಕ ಗಡಿಯಲ್ಲಿ ಐಕ್ಯತೆಗೆ ಹಾಳು ಮಾಡಿದ್ದಾರೆ. ಸಿಎಂ ಕ್ಷಮೆ ಕೇಳಬೇಕು ಎಂದು ಡಿಕೆಶಿ ಇದೇ ವೇಳೆ ಆಗ್ರಹಿಸಿದರು.
ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿ, ಕುಮಾರಸ್ವಾಮಿ ಏನು ಹೇಳಿದರು? ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಸರಣಿ ಟ್ವೀಟ್ಗಳನ್ನು ಮಾಡಿ, ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗ್ತಿದೆ ಎಂದು ಹೆಸರು ಉಲ್ಲೇಖಿಸದೆ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲಾ ಪೋಣಿಸಿ ‘ಅಹಿಂದ’ ಎಂದು ಜನರನ್ನು ‘ಅಡ್ಡದಾರಿ’ ಹಿಡಿಸಿದ. ‘ಸಿದ್ದಹಸ್ತ ಶೂರ’ರಿಂದ ತಮ್ಮ ಪಕ್ಷದ ಒಬ್ಬೊಬ್ಬ ನಾಯಕನನ್ನೇ ಟಾರ್ಗೆಟ್ ಮಾಡಿ ಮುಗಿಸ್ತಿದ್ದಾರೆ. ‘ಅಲ್ಪಸಂಖ್ಯಾತರ ಅಂತ್ಯ ರಾಜಕಾರಣ’ದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ ಎಂದು ಹೆಸರು ಉಲ್ಲೇಖಿಸದೆ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಸರಣಿ ಟ್ವೀಟ್ ಮಾಡಿದ್ದಾರೆ.
ಸಿದ್ದಹಸ್ತ ಸೂತ್ರಧಾರಿಯಿಂದ ಒಳ ರಾಜಕೀಯ ನಡೆದಿದೆ. ಅದಕ್ಕೆ ಅಲ್ಪಸಂಖ್ಯಾತ ನಾಯಕರು ಬಲಿಯಾಗಿದ್ದಾರೆ. ಒಳ ರಾಜಕೀಯಕ್ಕೆ ಬಲಿಯಾದವರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್‌ನ ‘ರಾಜಕೀಯ ನರಮೇಧ’ಕ್ಕೆ ಕಾರಣ ಯಾರು? ಇದರ ಬಗ್ಗೆ ಜನರಿಗೆ ಗೊತ್ತಾಗಲಿ ಎಂದು ಹೆಚ್‌ಡಿಕೆ ಟ್ವೀಟ್ ಮಾಡಿ ಹೇಳಿದ್ದಾರೆ.
Siddaramaiah ವಿರುದ್ಧ ಮತ್ತೆ ಮುಗಿಬಿದ್ದ HD Kumaraswamy! ಸಿದ್ದರಾಮಯ್ಯ ಹೆಸರು ಉಲ್ಲೇಖಿಸದೆ HDK ಹೊಸ ಬಾಂಬ್
ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸರಣಿ ಟ್ವೀಟ್
ಚಕ್ರ ತಿರುಗುತ್ತಿದೆ, ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ. ಅಲ್ಪಸಂಖ್ಯಾತ ಬಾಂಧವರಿಗೆ ನಿಮ್ಮ ನಿಜಬಣ್ಣ ಗೊತ್ತಾಗಿದೆ ಸಿದ್ದಹಸ್ತರೇ. ನಿಮಗೆ ಪಾಠ ಕಲಿಸುವ #ಜನತಾಪರ್ವ ಈಗಷ್ಟೇ ಆರಂಭವಾಗಿದೆ. ಕಾದು ನೋಡಿ… 12/12#ಕಾಂಗ್ರೆಸ್_ಅಲ್ಪಸಂಖ್ಯಾತ_ನಾಯಕರ_ಟರ್ಮಿನೇಟರ್ #ಸಿದ್ದಹಸ್ತ #ಸಿದ್ದಸೂತ್ರಧಾರ
— H D Kumaraswamy (@hd_kumaraswamy) October 16, 2021
(KPCC president dk shivakumar reacts to hd kumaraswamy tweet on siddaramaiah in sindagi)
Published On - 4:13 pm, Sat, 16 October 21