ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಫೌಂಡೇಷನ್: ಜಿ ಪರಮೇಶ್ವರ್ ಹೇಳಿಕೆ

G Parameshwar: ಯಾರು ಬಡವರು ಇರ್ತಾರೊ ಅವರನ್ನ ಮೇಲೆ ತರಲು ಕಾಂಗ್ರೆಸ್ ಪಕ್ಷ ಕೆಲಸ ಮಾಡಿದೆ. ಕಾಂಗ್ರೆಸ್​ನಲ್ಲಿ ಯಾರನ್ನ ಕೂಡ ಕಡೆಗಣಿಸಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಹೈಕಮಾಂಡ್ ಸಿಎಂ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಫೌಂಡೇಷನ್: ಜಿ ಪರಮೇಶ್ವರ್ ಹೇಳಿಕೆ
ಡಾ. ಜಿ. ಪರಮೇಶ್ವರ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on: Oct 16, 2021 | 3:37 PM

ತುಮಕೂರು: ದಲಿತರು ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಫೌಂಡೇಷನ್. ಸಿ.ಎಂ. ಇಬ್ರಾಹಿಂ ಈ ಕ್ಷಣದವರೆಗೂ ನಮ್ಮ ಕಾಂಗ್ರೆಸ್​ನಲ್ಲೇ ಇದ್ದಾರೆ. ಮುಂದೆ ಏನು ಅಂತಾ ಗೊತ್ತಿಲ್ಲ ಎಂದು ತುಮಕೂರಿನಲ್ಲಿ ಮಾಜಿ ಡಿಸಿಎಂ ಹಾಗೂ ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಅಧಿವೇಶನ ಸಂದರ್ಭದಲ್ಲಿ ಅವರ ಹತ್ತಿರ ನಾನು ಮಾತನಾಡಿದೆ, ಪಕ್ಷ ಬಿಡುವ ಬಗ್ಗೆ ಹೇಳಿಲ್ಲ ಎಂದು ಹೇಳಿದ್ದಾರೆ.

ದಲಿತ ಹಾಗೂ ಮುಸ್ಲಿಂ ಮುಖ್ಯಮಂತ್ರಿ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯಾವತ್ತೂ ಕೂಡ ದಲಿತರು ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಫೌಂಡೇಷನ್. ಎಲ್ಲಾ ಸಮುದಾಯದ ಬಡವರಿಗೆ ಕಾಂಗ್ರೆಸ್ ಪಕ್ಷ ಗುರುತಿಸಿಕೊಂಡಿದೆ. ಅವರು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಯಾರು ಬಡವರು ಇರ್ತಾರೊ ಅವರನ್ನ ಮೇಲೆ ತರಲು ಕಾಂಗ್ರೆಸ್ ಪಕ್ಷ ಕೆಲಸ ಮಾಡಿದೆ. ಕಾಂಗ್ರೆಸ್​ನಲ್ಲಿ ಯಾರನ್ನ ಕೂಡ ಕಡೆಗಣಿಸಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಹೈಕಮಾಂಡ್ ಸಿಎಂ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಬಗ್ಗೆ ಮಾತನಾಡಿದ್ದ ಸಲೀಂ ಹಾಗೂ ವಿ.ಎಸ್. ಉಗ್ರಪಗೆ ಶಿಸ್ತು ಕ್ರಮದಲ್ಲಿ ತಾರತಮ್ಯ ವಿಚಾರವಾಗಿ ಕೂಡ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ, ಶಿಸ್ತು ಕ್ರಮದ ಸಮಿತಿಯಿದೆ. ಮಾಜಿ ಸಚಿವ, ರಾಜ್ಯ ಸಭೆ ಸದಸ್ಯ ರೆಹಮಾನ್ ಖಾನ್ ಅದರ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಇದಾರೆ. ಆ ಸಮಿತಿ ತಿರ್ಮಾನವೇ ಅಂತಿಮ ಆಗಿದೆ. ಅವರ ತೀರ್ಮಾನದಂತೆ ಸಲೀಂಗೆ ನೋಟಿಸ್ ನೀಡಿ ಆರು ವರ್ಷ ಉಚ್ಚಾಟನೆ ಮಾಡಲಾಗಿದೆ. ಉಗ್ರಪ್ಪ ಸಂಸದರಾಗಿದ್ದವರು. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಲು ಎಐಸಿಸಿಯಿಂದ ಅನುಮತಿ ಬೇಕು. ಹೀಗಾಗಿ ಅವರಿಗೆ ನೋಟಿಸ್ ನೀಡಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿಗೆ RSS​ ಗಂಧಗಾಳಿ ಗೊತ್ತಿಲ್ಲ; ಯಾವುದೋ ಒಂದು ಪುಸ್ತಕ ಓದಿ ಅದೇ ಸತ್ಯ ಅಂತಾರೆ: ಆರ್ ಅಶೋಕ್

ಇದನ್ನೂ ಓದಿ: ಮಹಾತ್ಮ ಗಾಂಧಿ ಕಂಡ ರಾಮರಾಜ್ಯ ಮಾಡಬೇಕು; ಗ್ರಾಮಸ್ವರಾಜ್ಯ ನಮ್ಮ ಸರ್ಕಾರದ ಸಂಕಲ್ಪ: ಬಸವರಾಜ ಬೊಮ್ಮಾಯಿ