‘ಜೈ ಭೀಮ್​’ ಟೀಸರ್​ನಲ್ಲಿ ದಲಿತರ ಪರ ಧ್ವನಿ ಎತ್ತಿದ ಸೂರ್ಯ; ಸಿನಿಪ್ರಿಯರಿಂದ ಸಖತ್​ ರೆಸ್ಪಾನ್ಸ್​

‘ಜೈ ಭೀಮ್​’ ಟೀಸರ್​ನಲ್ಲಿ ದಲಿತರ ಪರ ಧ್ವನಿ ಎತ್ತಿದ ಸೂರ್ಯ; ಸಿನಿಪ್ರಿಯರಿಂದ ಸಖತ್​ ರೆಸ್ಪಾನ್ಸ್​
‘ಜೈ ಭೀಮ್​’

Jai Bhim: ನ.2ರಂದು ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ‘ಜೈ ಭೀಮ್​’ ಬಿಡುಗಡೆ ಆಗಲಿದೆ. ಸೂರ್ಯ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಟೀಸರ್​ಗೆ ಕಮೆಂಟ್​ ಮಾಡಿರುವ ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

TV9kannada Web Team

| Edited By: Madan Kumar

Oct 16, 2021 | 3:41 PM


ಸ್ಟಾರ್​ ನಟ ಸೂರ್ಯ ಅವರು ಕಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಎಲ್ಲ ಬಗೆಯ ಪಾತ್ರಗಳನ್ನೂ ನಿಭಾಯಿಸುವ ಮೂಲಕ ಅವರು ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಇತ್ತೀಚೆಗೆ ಅವರು ಓಟಿಟಿ ಕಡೆಗೆ ಹೆಚ್ಚು ಆಸಕ್ತಿ ತೋರುತ್ತಿರುವುದು ಗಮನಾರ್ಹ ಸಂಗತಿ. ಸೂರ್ಯ ನಟಿಸಿರುವ ಹೊಸ ಚಿತ್ರ ‘ಜೈ ಭೀಮ್​’ ನವೆಂಬರ್​ 2ರಂದು ಬಿಡುಗಡೆ ಆಗಲಿದೆ. ಈಗ ಅದರ ಟೀಸರ್​ ಬಿಡುಗಡೆ ಆಗಿದ್ದು, ಚಿತ್ರದ ಕಥೆ ಏನು ಎಂಬುದರ ಸುಳಿವು ನೀಡಿದೆ. ಈ ಟೀಸರ್​ಗೆ ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ಸಿಗುತ್ತಿದೆ.

ಸಮಾಜದಿಂದ ಅನ್ಯಾಯಕ್ಕೆ ಒಳಗಾದ ಬುಡಕಟ್ಟು ಜನಾಂಗದ ಮಹಿಳೆಗೆ ನ್ಯಾಯ ಕೊಡಿಸುವ ವಕೀಲರ ಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ. ಈ ಟೀಸರ್​ನಲ್ಲಿ ಖಡಕ್​ ಡೈಲಾಗ್​ಗಳು ಗಮನ ಸೆಳೆಯುತ್ತಿವೆ. ಇದು ಕಟ್ಟುಕತೆಯ ಸಿನಿಮಾ ಅಲ್ಲ. ನೈಜ ಘಟನೆಗಳನ್ನು ಆಧರಿಸಿ ‘ಜೈ ಭೀಮ್​’ ಚಿತ್ರ ತಯಾರಾಗಿದೆ. ಆ ಕಾರಣದಿಂದ ಈ ಚಿತ್ರ ಮೇಲೆ ನಿರೀಕ್ಷೆ ಹೆಚ್ಚಿದೆ.

ಸೂರ್ಯ ಮುಖ್ಯಭೂಮಿಕೆ ನಿಭಾಯಿಸಿರುವ ಈ ಚಿತ್ರಕ್ಕೆ ಜ್ಞಾನವೇಲ್​ ನಿರ್ದೇಶನ ಮಾಡಿದ್ದಾರೆ. ಸೂರ್ಯ ಅವರ 2ಡಿ ಎಂಟರ್​ಟೇನ್​ಮೆಂಟ್​ ಬ್ಯಾನರ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಇದು ತಮಿಳಿನ ಚಿತ್ರವಾಗಿದ್ದು ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಗೆ ಡಬ್​ ಆಗಿದೆ. ಸದ್ಯಕ್ಕೆ ತಮಿಳು ಮತ್ತು ತೆಲುಗು ವರ್ಷನ್​ ಟೀಸರ್​ ಮಾತ್ರ ರಿಲೀಸ್​ ಮಾಡಲಾಗಿದೆ. ಮೊದಲು ತಮಿಳು ಮತ್ತು ತೆಲುಗು ವರ್ಷನ್​ನಲ್ಲಿ ಸಿನಿಮಾ ಬಿಡುಗಡೆ ಮಾಡಿ, ನಂತರ ಮಲಯಾಳಂ ಮತ್ತು ಕನ್ನಡದಲ್ಲಿ ರಿಲೀಸ್​ ಮಾಡುವ ಸಾಧ್ಯತೆ ಇದೆ.

(‘ಜೈ ಭೀಮ್​’ ಚಿತ್ರದ ಟೀಸರ್)

ನ.2ರಂದು ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ‘ಜೈ ಭೀಮ್​’ ಬಿಡುಗಡೆ ಆಗಲಿದೆ. ಸೂರ್ಯ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಟೀಸರ್​ಗೆ ಕಮೆಂಟ್​ ಮಾಡಿರುವ ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ರಾವ್​ ರಮೇಶ್​, ಪ್ರಕಾಶ್​ ರಾಜ್​ ಮುಂತಾದ ಸ್ಟಾರ್​ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

2020ರ ನವೆಂಬರ್​ನಲ್ಲಿ ಸೂರ್ಯ ನಟನೆಯ ‘ಸೂರರೈ ಪೋಟ್ರು’ ಚಿತ್ರ ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. ಈಗ ‘ಜೈ ಭೀಮ್​’ ಕೂಡ ಸೂರ್ಯಗೆ ಗೆಲುವು ತಂದು ಕೊಡುವ ನಿರೀಕ್ಷೆ ಇದೆ.

ಇದನ್ನೂ ಓದಿ:

ಓಟಿಟಿ ಮೇಲೆ ಹೆಚ್ಚಿತು ಸಿನಿ ಮಂದಿಯ ಪ್ರೀತಿ; ಬಹುನಿರೀಕ್ಷಿತ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​

ಮೊಬೈಲ್​ನಲ್ಲಿ ಮುಳುಗಿದವರ ಮನೆ ಹೇಗಿರುತ್ತೆ ಅಂತ ವಿವರಿಸುವ ‘ಹೋಮ್​’ ಚಿತ್ರಕ್ಕೀಗ ರಿಮೇಕ್​ ಭಾಗ್ಯ

Follow us on

Related Stories

Most Read Stories

Click on your DTH Provider to Add TV9 Kannada