Murder News: ರಾಜಸ್ಥಾನದಲ್ಲಿ ಮನೆಗೆ ತೆರಳುತ್ತಿದ್ದ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ

| Updated By: ಸುಷ್ಮಾ ಚಕ್ರೆ

Updated on: Sep 05, 2022 | 12:41 PM

ಭರತ್‌ಪುರದ ಬಿಜೆಪಿ ಸಂಸದರಾದ ರಂಜಿತಾ ಕೋಲಿ ಅವರ ಆಪ್ತ ಸಹಾಯಕ ಕೃಪಾಲ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆದಿದ್ದು, 7 ಬಾರಿ ಗುಂಡು ಹಾರಿಸಲಾಗಿದೆ.

Murder News: ರಾಜಸ್ಥಾನದಲ್ಲಿ ಮನೆಗೆ ತೆರಳುತ್ತಿದ್ದ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ
ಸಾಂದರ್ಭಿಕ ಚಿತ್ರ
Follow us on

ಜೈಪುರ: ರಾಜಸ್ಥಾನದ ಭರತ್‌ಪುರದಲ್ಲಿ ಬಿಜೆಪಿ ಮುಖಂಡರೊಬ್ಬರನ್ನು (BJP Leader) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇನ್ನೂ ಗುರುತು ಪತ್ತೆಯಾಗದ ದುಷ್ಕರ್ಮಿಗಳು 2 ಬೈಕ್‌ ಹಾಗೂ ಕಾರುಗಳಲ್ಲಿ ಬಂದು ಭಾನುವಾರ ರಾತ್ರಿ ಸರ್ಕ್ಯೂಟ್ ಹೌಸ್‌ನಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ಕೃಪಾಲ್ ಸಿಂಗ್ (Kripal Singh) ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭರತ್‌ಪುರದ ಬಿಜೆಪಿ ಸಂಸದರಾದ ರಂಜಿತಾ ಕೋಲಿ ಅವರ ಆಪ್ತ ಸಹಾಯಕ ಕೃಪಾಲ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆದಿದ್ದು, 7 ಬಾರಿ ಗುಂಡು ಹಾರಿಸಲಾಗಿದೆ. “ಆರೋಪಿಗಳನ್ನು ಗುರುತಿಸಲಾಗುತ್ತಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ, ಮೃತಪಟ್ಟ ಕೃಪಾಲ್ ಸಿಂಗ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ” ಎಂದು ಮಥುರಾ ಗೇಟ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ರಾಮನಾಥ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ ಠಾಕ್ರೆ ನೇತೃತ್ವದ ಎಂಎನ್ಎಸ್ ಪಕ್ಷದ ನಾಯಕನಿಂದ ಮಹಿಳೆ ಮೇಲೆ ಹಲ್ಲೆ, ವಿಡಿಯೊ ವೈರಲ್

ಪೊಲೀಸರ ಪ್ರಕಾರ, ಕೃಪಾಲ್ ಸಿಂಗ್ ಅವರನ್ನು ಸರ್ಕಾರಿ ಆರ್‌ಬಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು.

“ಡಿಆರ್‌ಯುಸಿಸಿ (ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ) ಸದಸ್ಯ ಮತ್ತು ಕಿಸಾನ್ ಮೋರ್ಚಾದ ಮಾಜಿ ವಕ್ತಾರ ಕೃಪಾಲ್ ಸಿಂಗ್ ಅವರ ನಿಧನದಿಂದ ಇಂದಿನ ನನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ” ಎಂದು ಸಂಸದರಾದ ರಂಜಿತಾ ಕೋಲಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಹಳೆಯ ವೈಷಮ್ಯದಿಂದ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ