ಕೋಲ್ಕತಾ: 83-ಕೃಷ್ಣನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಟಿಎಂಸಿ ಮುಖಂಡ ಮುಕುಲ್ ರಾಯ್ ಅವರನ್ನು ಅನರ್ಹಗೊಳಿಸಬೇಕೆಂದು ಬಿಜೆಪಿ ಮುಖಂಡ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ವಿಧಾನಸಭೆ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ. ಬಿಜೆಪಿ ಟಿಕೆಟ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದರೂ ತೃಣಮೂಲ ಕಾಂಗ್ರೆಸ್‌ಗೆ ಮರಳಿದ್ದರಿಂದ ಪಕ್ಷಾಂತರ ವಿರೋಧಿ ಕಾನೂನು ಪ್ರಕಾರ ರಾಯ್ ರಾಜೀನಾಮೆ ನೀಡಬೇಕೆಂದು ಅಧಿಕಾರಿ ಒತ್ತಾಯಿಸಿದ್ದಾರೆ.
ಮುಕುಲ್ ರಾಯ್ ಅವರನ್ನು ಕೃಷ್ಣನಗರ ಉತ್ತರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಕೋರಿ ಅರ್ಜಿಯನ್ನು ಕಳುಹಿಸಲು ಬಂಗಾಳ ಬಿಜೆಪಿ ನಾಯಕರು ಗುರುವಾರದಿಂದ ತಯಾರಿ ನಡೆಸಿದ್ದು, ಈ ಉದ್ದೇಶಕ್ಕಾಗಿ ತನ್ನ ವಕೀಲರನ್ನು ಸಂಪರ್ಕಿಸಿತ್ತು. ವಿಧಾನಸಭೆಯಲ್ಲಿ ಬಿಜೆಪಿಯ ಮುಖ್ಯ ವಿಪ್ ಮನೋಜ್ ತಿಗ್ಗಾ ಅವರು ಶುಕ್ರವಾರ ಅರ್ಜಿಯನ್ನು ಬಿಮನ್ ಬ್ಯಾನರ್ಜಿಗೆ ಸಲ್ಲಿಸಿದರು.
BJP leader and Leader of Opposition in West Bengal Legislative Assembly, Suvendu Adhikari has given a petition to the Assembly Speaker for disqualification of TMC leader Mukul Roy, MLA from 83-Krishnanagar Uttar Assembly constituency
(file pics) pic.twitter.com/lRhWwZwgDh
— ANI (@ANI) June 18, 2021
ಬಿಜೆಪಿಯ ಮಾಜಿ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತು ಅವರ ಪುತ್ರ ಸುಭ್ರಾಂಶು ಅವರು ಕಳೆದ ಶುಕ್ರವಾರ ಕೋಲ್ಕತ್ತಾದ ಟಿಎಂಸಿ ಭವನದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಮತ್ತೆ ಪಕ್ಷಕ್ಕೆ ಸೇರಿಕೊಂಡಿದ್ದರು. ಸುವೇಂದು ಅಧಿಕಾರಿ ಈ ಕ್ರಮವನ್ನು ಟೀಕಿಸಿದ್ದರು ಮತ್ತು ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
“ತೋಡ್ನಾ-ಜೋಡ್ನಾ (ಒಡೆಯುವುದು- ಸೇರಿಸುವುದು) ಟಿಎಂಸಿಯ ಕೊಳಕು ರಾಜಕಾರಣದ ಭಾಗವಾಗಿದೆ. ಅವರು ಕಳೆದ 10 ವರ್ಷಗಳಿಂದ ಇದನ್ನು ಮಾಡುತ್ತಿದ್ದಾರೆ ಮತ್ತು ಯಾರೂ ಅದನ್ನು ವಿರೋಧಿಸಲಿಲ್ಲ. ಆದರೆ ಈಗ ಇದನ್ನು ವಿರೋಧಿಸಲಾಗುತ್ತಿದೆ ಮತ್ತು ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯಪಾಲರನ್ನು ಭೇಟಿಯಾದಾಗ ಅಧಿಕಾರಿ ಹೇಳಿದ್ದರು.
“ಸುವೇಂದು ಅಧಿಕಾರಿ ಸೇರಿದಂತೆ ಪ್ರತಿಪಕ್ಷದ 50 ಶಾಸಕರು ನನಗೆ ಮನವಿಯನ್ನು ನೀಡಿದ್ದಾರೆ.ಪಕ್ಷಾಂತರ ವಿರೋಧಿ ಕಾನೂನು ಮತ್ತು ತಿಲ್ಜಲಾ ಮತ್ತು ಚಂದನ್ ನಗರ ಘಟನೆಗಳು ಸೇರಿದಂತೆ ನಾಲ್ಕು ಅಂಶಗಳತ್ತ ನನ್ನ ಗಮನವನ್ನು ಸೆಳೆದಿದ್ದಾರೆ . ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವುದರಿಂದ ನಾನು ಅದನ್ನು ಸ್ಪಷ್ಟಪಡಿಸುತ್ತೇನೆ ಪಕ್ಷಾಂತರ ವಿರೋಧಿ ಕಾನೂನು ಬಂಗಾಳದಲ್ಲಿ ಸಂಪೂರ್ಣ ಅನ್ವಯಿಸುತ್ತದೆ. ಇದು ದೇಶದ ಇತರ ಭಾಗಗಳಂತೆ ಇಲ್ಲಿಯೂ ಅನ್ವಯಿಸುತ್ತದೆ “ಎಂದು ಬಿಜೆಪಿ ಶಾಸಕರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಧನ್ಕರ್ ಹೇಳಿದ್ದಾರೆ.
ರಾಯ್ ವಿರುದ್ಧ ಬಿಜೆಪಿಯೂ ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ ಎಂದು ಟೌಮ್ಸ್ ನೌ ವರದಿ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಭಾರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಮರಳಿತು. 77 ಸ್ಥಾನಗಳೊಂದಿಗೆ ಬಿಜೆಪಿ ಎರಡನೇ ಸ್ಥಾನ ಗಳಿಸಿತ್ತು.
ಇದನ್ನೂ ಓದಿ: Mukul Roy ಮಮತಾ ಬ್ಯಾನರ್ಜಿ ಭೇಟಿ ನಂತರ ಟಿಎಂಸಿಗೆ ಮರುಸೇರ್ಪಡೆಯಾದ ಮುಕುಲ್ ರಾಯ್
ಇದನ್ನೂ ಓದಿ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತವರ ಸೋದರನ ವಿರುದ್ಧ ಕಳ್ಳತನದ ಆರೋಪ; ಠಾಣೆಯಲ್ಲಿ ದೂರು ದಾಖಲು