ಹೈದರಾಬಾದ್: ‘ಬುಲ್ಡೋಜರ್’ ಹೇಳಿಕೆ ನಂತರ ವಿವಾದಿತ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ (T Raja Singh) ಅವರಿಗೆ ಭಾರತೀಯ ಚುನಾವಣಾ ಆಯೋಗ (Election Commission of India) ಬುಧವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ರಾಜಾ ಸಿಂಗ್ ಅವರು ಯೋಗಿ ಆದಿತ್ಯನಾಥ (Yogi Adityanath) ಸರ್ಕಾರದ ವಿರುದ್ಧ ಮತ ಚಲಾಯಿಸುವ ಉತ್ತರ ಪ್ರದೇಶದ ನಾಗರಿಕರಿಗೆ ಬೆದರಿಕೆಯನ್ನು ಹಾಕಿದ್ದಾರೆ. ಸಾವಿರಾರು ಬುಲ್ಡೋಜರ್‌ಗಳು ಮತ್ತು ಜೆಸಿಬಿಗಳನ್ನು ಖರೀದಿಸಲಾಗಿದೆ. ಅದು ಉತ್ತರ ಪ್ರದೇಶದತ್ತ ತೆರಳಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಯಾರು ಮತ ನೀಡಿಲ್ಲವೋ ಆ ಜಾಗಗಳನ್ನು ಗುರುತಿಸಲಾಗುವುದು. ಜೆಸಿಬಿಗಳು ಮತ್ತು ಬುಲ್ಡೋಜರ್‌ಗಳನ್ನು ಯಾವುದಕ್ಕಾಗಿ ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯಲ್ಲವೇ ”ಎಂದು ರಾಜಾ ಸಿಂಗ್ ಹೇಳಿರುವುದು ವಿಡಿಯೊದಲ್ಲಿದೆ. ವಿಡಿಯೊವನ್ನು ಗಮನಿಸಿದ ಚುನಾವಣಾ ಆಯೋಗ, ಟಿ ರಾಜಾ ಸಿಂಗ್ ಅವರು ಮಾದರಿ ನೀತಿ ಸಂಹಿತೆಯ (ಎಂಸಿಸಿ) ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗವು ಪ್ರಾಥಮಿಕ ಅಭಿಪ್ರಾಯವಾಗಿದೆ. ನಿಮ್ಮ ವಿರುದ್ಧ ಕ್ರಿಮಿನಲ್ ಕಾನೂನಿನಡಿಯಲ್ಲಿ ಸೂಕ್ತವಾದ ದಂಡದ ಕ್ರಮವನ್ನು ಏಕೆ ಪ್ರಾರಂಭಿಸಬಾರದು ಮತ್ತು ಎಂಸಿಸಿ ಉಲ್ಲಂಘನೆಗಾಗಿ ಸೂಕ್ತ ಕ್ರಮವನ್ನು ನಿಮ್ಮ ವಿರುದ್ಧ ಏಕೆ ತೆಗೆದುಕೊಳ್ಳಬಾರದು ಎಂಬುದಕ್ಕೆ ಈ ಸೂಚನೆಯನ್ನು ಸ್ವೀಕರಿಸಿದ 24 ಗಂಟೆಗಳ ಒಳಗೆ ಕಾರಣವನ್ನು ತೋರಿಸಲು ನಿಮ್ಮನ್ನು ಈ ಮೂಲಕ ಕರೆ ನೀಡಲಾಗಿದೆ ಎಂದು ನೋಟಿಸ್ ನಲ್ಲಿ ಹೇಳಿದೆ.
“Vote for Yogi in UP polls or face JCB & bulldozers. Your home will be crushed.”
This is an open threat of T Raja Singh, Hyd BJP MLA, to the UP people. This is happening under your protection. @ECISVEEP pic.twitter.com/dH1VclTRTY
— Mission Ambedkar (@MissionAmbedkar) February 15, 2022
ನಿಗದಿತ ಸಮಯದೊಳಗೆ ರಾಜಾ ಸಿಂಗ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಲ್ಲಿ, ರಾಜಾ ಸಿಂಗ್ ಅವರು ಈ ವಿಷಯದಲ್ಲಿ ಏನೂ ಹೇಳಲು ಇಚ್ಛಿಸುವುದಿಲ್ಲ ಎಂದು ಭಾವಿಸಲಾಗುವುದ. ಹಾಗಾಗಿ ಚುನಾವಣಾ ಆಯೋಗ ಯಾವುದೇ ಹೆಚ್ಚಿನ ಉಲ್ಲೇಖವನ್ನು ನೀಡದೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.
ನನ್ನ ವಕೀಲರು ಉತ್ತರಿಸುತ್ತಾರೆ
ನಾನು ಅಖಿಲೇಶ್ ಯಾದವ್ ಅವರು ಸಿಎಂ ಆಗಿದ್ದಾಗ ಯಾವ ರೀತಿಯ ದೌರ್ಜನ್ಯ ಎಸಗಿದ್ದರು ಎಂಬುದನ್ನು ವಿವರಿಸಲು ಮಾತ್ರ ಪ್ರಯತ್ನಿಸುತ್ತಿದ್ದೇನೆ ಎಂದು ರಾಜಾ ಸಿಂಗ್ ಹೇಳಿದ್ದಾರೆ. “ಗೋಮಾಂಸ ಭಕ್ಷಕರು” ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಹೇಳಿದ ಅವರು, ಆದಿತ್ಯನಾಥ ಅವರ ಗೆಲುವಿಗಾಗಿ ಯಾಗ ಮಾಡಲು ಉಜ್ಜಯಿನಿಗೆ ಹೋಗುತ್ತಿದ್ದೇನೆ ಮತ್ತು ಅವರ ವಕೀಲರು ಇಸಿಯ ನೋಟಿಸ್‌ಗೆ ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದರು.
ಕೆಟಿ ರಾಮರಾವ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ವಿಧಾನಸಭೆಯಲ್ಲಿ ಭರವಸೆಗಳನ್ನು ನೀಡುವ ಆದರೆ ನಂತರ ಅವುಗಳನ್ನು ಮರೆತುಬಿಡುವ ‘ಟ್ವಿಟರ್‌ಮ್ಯಾನ್’ ಎಂದು ಕರೆದರು. ರಾಜಾ ಸಿಂಗ್ನ್ನು ರಾವ್ ಜೋಕರ್ ಎಂದು ಕರೆದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಜೋಕರ್ ಯಾರೆಂದು ಎಲ್ಲರಿಗೂ ತಿಳಿದಿದೆ ಮತ್ತು ಮಗ ಮತ್ತು ತಂದೆ ಇಬ್ಬರು ಜನರ ಕಲ್ಯಾಣಕ್ಕಾಗಿ ಏನನ್ನೂ ಮಾಡುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ‘ಗಂಡ ನನ್ನನ್ನು ಉಪಯೋಗಿಸಿಕೊಂಡ’; ಕಣ್ಣೀರು ಹಾಕಿ ಎಲ್ಲರ ಎದುರು ದುಃಖ ತೋಡಿಕೊಂಡ ರಾಖಿ ಸಾವಂತ್