Sign In

By signing in or creating an account, you agree with Associated Broadcasting Company's Terms & Conditions and Privacy Policy.

UP Assembly Polls: ಯೋಗಿ ಆದಿತ್ಯನಾಥ್ ನನ್ನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾರೆ; ಓಂ ಪ್ರಕಾಶ್ ರಾಜಭಾರ್ ಗಂಭೀರ ಆರೋಪ

Om Prakash Rajbhar: 'ಯೋಗಿ ಜೀ ನನ್ನನ್ನು ಕೊಲ್ಲಲು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಬಿಜೆಪಿ ಮತ್ತು ಯೋಗಿ ಆದಿತ್ಯನಾಥ್ ಅವರ ಗೂಂಡಾಗಳನ್ನು ಕಪ್ಪು ಕೋಟ್‌ನಲ್ಲಿ ಅಲ್ಲಿಗೆ ಕಳುಹಿಸಲಾಗಿತ್ತು' ಎಂದು ಓಂ ಪ್ರಕಾಶ್ ರಾಜಭರ್ ಆರೋಪಿಸಿದ್ದಾರೆ.

UP Assembly Polls: ಯೋಗಿ ಆದಿತ್ಯನಾಥ್ ನನ್ನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾರೆ; ಓಂ ಪ್ರಕಾಶ್ ರಾಜಭಾರ್ ಗಂಭೀರ ಆರೋಪ
ಓಂ ಪ್ರಕಾಶ್ ರಾಜಭಾರ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 15, 2022 | 4:40 PM

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ನಡುವೆ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ (Om Prakash Rajbhar) ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. ವಾರಾಣಸಿಯ ಶಿವಪುರ ಕ್ಷೇತ್ರದಿಂದ ಎಸ್​ಬಿಎಸ್​ಪಿ ಅಭ್ಯರ್ಥಿ ಅರವಿಂದ್ ರಾಜ್‌ಭರ್ ಸೋಮವಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ರಾಜ್‌ಭರ್ ಆರೋಪಿಸಿದ್ದಾರೆ. ಹಾಗೇ, ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ನನ್ನನ್ನು ‘ಕೊಲ್ಲಲು’ ಪ್ಲಾನ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘ಯೋಗಿ ಜೀ ನನ್ನನ್ನು ಕೊಲ್ಲಲು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಬಿಜೆಪಿ ಮತ್ತು ಯೋಗಿ ಆದಿತ್ಯನಾಥ್ ಅವರ ಗೂಂಡಾಗಳನ್ನು ಕಪ್ಪು ಕೋಟ್‌ನಲ್ಲಿ ಅಲ್ಲಿಗೆ ಕಳುಹಿಸಲಾಗಿತ್ತು’ ಎಂದು ಓಂ ಪ್ರಕಾಶ್ ರಾಜಭರ್ ಆರೋಪಿಸಿದ್ದಾರೆ.

ತನಗೆ ಮತ್ತು ಅರವಿಂದ್ ರಾಜ್‌ಭರ್‌ಗೆ ಭದ್ರತೆ ಒದಗಿಸುವಂತೆ ಓಂ ಪ್ರಕಾಶ್ ರಾಜ್‌ಭರ್ ಭಾರತ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಮಾಜಿ ಮಿತ್ರ ಪಕ್ಷವಾಗಿರುವ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷವು ಪ್ರಸ್ತುತ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಮೈತ್ರಿಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂಬುದು ಗಮನಾರ್ಹ.

ಸಮಾಜವಾದಿ ಪಕ್ಷದ ಮಿತ್ರ ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅವರು ಮಂಗಳವಾರ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಸ್ಫೋಟಕ ಆರೋಪವನ್ನು ಮಾಡಿದ್ದಾರೆ.

ಓಂ ಪ್ರಕಾಶ್ ರಾಜ್‌ಭರ್ ಅವರ ಎಸ್‌ಬಿಎಸ್‌ಪಿ 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ರಾಜ್‌ಭರ್ ನಿರ್ಧರಿಸಿದ ನಂತರ ಎರಡು ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.

ಇದನ್ನೂ ಓದಿ: ನಾನು ಪುನರಾಯ್ಕೆಯಾದರೆ ಮುಸ್ಲಿಮರು ತಿಲಕ ಧರಿಸುವಂತೆ ಮಾಡುತ್ತೇನೆ: ಉತ್ತರ ಪ್ರದೇಶದ ಬಿಜೆಪಿ ನಾಯಕ

Uttar Pradesh Polls 2022: ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಕರ್ಹಾಲ್‌ನಿಂದ ಸ್ಪರ್ಧಿಸುವುದು ಖಚಿತ

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ