ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ ಸಂಸದ ಗೌತಮ್​ ಗಂಭೀರ್​

| Updated By: ಸಾಧು ಶ್ರೀನಾಥ್​

Updated on: Feb 10, 2021 | 5:42 PM

ರಾಮ ಮಂದಿರ ನಿರ್ಮಾಣಕ್ಕೆ ದೆಣಿಗೆ ಸಂಗ್ರಹ ಮಾಡುವ ಆಂದೋಲನ ಆರಂಭಿಸಿದೆ. ಇದರ ಭಾಗವಾಗಿ ಗೌತಮ್​ ಗಂಭೀರ್​ ಒಂದು ಕೋಟಿ ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ ಸಂಸದ ಗೌತಮ್​ ಗಂಭೀರ್​
ಎಬಿಡಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದೇ ಇರಬಹುದು. ಆದರೆ ಚುಟುಕು ಕ್ರಿಕೆಟ್​ನಲ್ಲಿ ಅತ್ಯಂತ ಬೇಡಿಕೆಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಆರ್​ಸಿಬಿ ತಂಡದಲ್ಲಿ ಡಿವಿಲಿಯರ್ಸ್ ಇರುವುದು ನಾಯಕ ವಿರಾಟ್ ಕೊಹ್ಲಿ ಪ್ಲಸ್ ಪಾಯಿಂಟ್ ಎಂದು ಗಂಭೀರ್ ತಿಳಿಸಿದ್ದಾರೆ.
Follow us on

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸೆಲೆಬ್ರಿಟಿಗಳು ದೇಣಿಗೆ ನೀಡುತ್ತಿದ್ದಾರೆ. ಇತ್ತೀಚೆಗೆ, ನಟ ಅಕ್ಷಯ್​ ಕುಮಾರ್ ರಾಮ ಮಂದಿರ ನಿರ್ಮಾಣಕ್ಕೆ ಕೈಲಾದಷ್ಟು ಹಣ ನೀಡುವಂತೆ ಅಭಿಮಾನಿಗಳ ಬಳಿ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್​ ಗಂಭೀರ್​ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡಲು ಒಂದು ಕೋಟಿ ರೂಪಾಯಿ ನೀಡಿ ಮಾದರಿಯಾಗಿದ್ದಾರೆ.

ರಾಮ ಮಂದಿರ ನಿರ್ಮಾಣ ಭಾರತೀಯರ ಕನಸು. ಬಹು ವರ್ಷಗಳ ಈ ವಿವಾದ ಕೊನೆಗೊಂಡಿದೆ. ಮಂದಿರ ನಿರ್ಮಾಣಕ್ಕೆ ನನ್ನ ಹಾಗೂ ನನ್ನ ಕುಟುಂಬದಿಂದ ಸಣ್ಣ ಕೊಡುಗೆ ಎಂದು ಗೌತಮ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡುವ ಆಂದೋಲನ ಆರಂಭಿಸಿದೆ. ಇದರ ಭಾಗವಾಗಿ ಗೌತಮ್​ ಗಂಭೀರ್​ ಒಂದು ಕೋಟಿ ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ದೇಶದ 5,25,000 ಗ್ರಾಮಗಳಲ್ಲಿ ಹಣ ಸಂಗ್ರಹ ಮಾಡುವ ಕಾರ್ಯ ಆರಂಭಗೊಂಡಿದೆ. ಜನವರಿ 15ರಿಂದ ಫೆಬ್ರವರಿ 27ರ ವರೆಗೆ ಹಣ ಸಂಗ್ರಹಣೆ ಕಾರ್ಯ ನಡೆಯಲಿದೆ.

ಯಾವ ದಾನ ಮಾಡಿದ್ರೆ ಏನು ಫಲ? ದಾನದ ಕುರಿತು ಧರ್ಮಶಾಸ್ತ್ರ ಏನು ಹೇಳುತ್ತೆ?

 

Published On - 5:12 pm, Thu, 21 January 21