ಸೆರಮ್ ಇನ್ಸ್ಟಿಟ್ಯೂಟ್ನಲ್ಲಿ ಭಾರಿ ಅಗ್ನಿ ಅವಘಡ: ಲಸಿಕೆ ಸಂಗ್ರಹ ಘಟಕ ಸುರಕ್ಷಿತ
10 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಸೆರಮ್ ಸಂಸ್ಥೆಯ ಎರಡನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದು ಸೆರಮ್ ಇನ್ಸ್ಟಿಟ್ಯೂಟ್ನ ಹೊಸ ಘಟಕ ಎನ್ನಲಾಗಿದೆ.
ಪುಣೆ: ಕೊವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡ ನಂತರ ಈ ಭಾಗದಲ್ಲಿ ಭಾರಿ ಹೊಗೆ ಸುತ್ತುವರಿದಿದೆ.
10 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಸೆರಮ್ ಸಂಸ್ಥೆಯ ಎರಡನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇದು ಸೆರಮ್ ಇನ್ಸ್ಟಿಟ್ಯೂಟ್ನ ಹೊಸ ಘಟಕ ಎನ್ನಲಾಗಿದೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡಕ್ಕೆ ಕಾರಣ ಏನು ಎನ್ನುವ ವಿಚಾರ ಇನ್ನೂ ತಿಳಿದು ಬಂದಿಲ್ಲ. ಸದ್ಯ, ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ.
ಲಸಿಕೆ ಉತ್ಪಾದನಾ ಘಟಕ ಸುರಕ್ಷಿತವಾಗಿದೆ. ಬೆಂಕಿ ಆಕಸ್ಮಿಕದಿಂದ ಲಸಿಕೆ ಉತ್ಪಾದನೆಗೆ ಯಾವುದೇ ತೊಂದರೆ ಇಲ್ಲ ಎಂದು ಮೂಲಗಳು ಹೇಳಿವೆ.
ಸರ್ಕಾರ -ಸೆರಮ್ ನಡುವೆ ಲಸಿಕೆ ಬೆಲೆ ಒಪ್ಪಂದದಲ್ಲಿ ಯಾವುದೇ ಬಿರುಕು ಇಲ್ಲ; ಚೌಕಾಸಿ ನಡೆದಿಲ್ಲ: ಪೂನಾವಾಲಾ
Published On - 3:33 pm, Thu, 21 January 21