Ram Swaroop Sharma ಬಿಜೆಪಿ ಸಂಸದ ರಾಮ್‌ಸ್ವರೂಪ್ ಶರ್ಮಾ ನಿಗೂಢ ಸಾವು.. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

|

Updated on: Mar 19, 2021 | 8:49 AM

ಬಿಜೆಪಿ ಸಂಸದ ರಾಮ್‌ಸ್ವರೂಪ್ ಶರ್ಮಾ ನಿಗೂಢ ಸಾವಾಗಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದ ರಾಮ್‌ಸ್ವರೂಪ್ ಶರ್ಮಾ ದೆಹಲಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Ram Swaroop Sharma ಬಿಜೆಪಿ ಸಂಸದ ರಾಮ್‌ಸ್ವರೂಪ್ ಶರ್ಮಾ ನಿಗೂಢ ಸಾವು.. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದ ರಾಮ್‌ಸ್ವರೂಪ್ ಶರ್ಮಾ
Follow us on

ದೆಹಲಿ: ಬಿಜೆಪಿ ಸಂಸದ ರಾಮ್‌ಸ್ವರೂಪ್ ಶರ್ಮಾ ನಿಗೂಢ ಸಾವಾಗಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದ ರಾಮ್‌ಸ್ವರೂಪ್ ಶರ್ಮಾ ದೆಹಲಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮಂಡಿಯ ಸಂಸದ ರಾಮ್ ಸ್ವರೂಪ್ ಶರ್ಮಾ ಅವರು ತಮ್ಮ ದೆಹಲಿಯ ನಿವಾಸದಲ್ಲಿ ಇಂದು ಶವವಾಗಿ ಪತ್ತೆಯಾಗಿದ್ದಾರೆ. ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಿದ್ದಾರೆ. ರಾಮ್ ಸ್ವರೂಪ್ ಶರ್ಮಾ ಭಾರತದ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಜೋಗಿಂದರ್ ನಗರದ ರಾಜಕಾರಣಿ. ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದವರಾಗಿದ್ದು, ಮಂಡಿ ಜಿಲ್ಲೆಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿದ್ದರು ಮತ್ತು ಹೆಚ್‌ಪಿ ರಾಜ್ಯ ಬಿಜೆಪಿಯಾಗಿದ್ದರು. ಆತ್ಮಹತ್ಯೆಗೆ ಯಾವುದೇ ನಿಖರ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: ಪಟಾಕಿಯ ಬೆಂಕಿ ತಗುಲಿ ಬಿಜೆಪಿ ಸಂಸದೆ ರೀಟಾ ಬಹುಗುಣ ಮೊಮ್ಮಗಳ ಸಾವು..

Published On - 9:55 am, Wed, 17 March 21