ಉತ್ತರ ಪ್ರದೇಶದ ಪ್ರತಾಪ್ ಗಢ್ನ ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾರಿಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರು ಥಳಿಸಿದ್ದಾರೆ. ಸಂಗಮ್ ಲಾಲ್ ಅವರು ತಮ್ಮ ಕ್ಷೇತ್ರ ಪ್ರತಾಪ್ಗಢ್ನ ಸಂಗಿಪುರ್ ಬ್ಲಾಕ್ನಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಾರ್ವಜನಿಕರ ಗುಂಪೊಂದು ಅವರ ಮೇಲೆ ದಾಳಿ ನಡೆಸಿ, ಹೊಡೆದಿದೆ. ಜನರಿಂದ ತಪ್ಪಿಸಿಕೊಂಡು ವಾಹನ ಹತ್ತಿದರೂ ಬಿಡದೆ, ವಾಹನಕ್ಕೇ ಕಲ್ಲು ಹೊಡೆದಿದ್ದಾರೆ.
ಈ ದಾಳಿ ನಡೆಯಲು ಮುಖ್ಯ ಕಾರಣ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಮತ್ತು ಅವರ ಪುತ್ರಿ, ಜನಪ್ರತಿನಿಧಿ ಆರಾಧನಾ ಮಿಶ್ರಾ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಆರೋಗ್ಯ ಶಿಬಿರದಲ್ಲಿ ನಡೆದ ಗಲಾಟೆಯಲ್ಲಿ ಹಲವು ಬಿಜೆಪಿ ಕಾರ್ಯಕರ್ತರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರತಾಪ್ಗಢ್ ಬಿಜೆಪಿ ಸಂಸದನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ವಾರಾಣಸಿ ಹೆದ್ದಾರಿಯಲ್ಲಿ ಧರಣಿ ನಡೆಸಿ, ಕ್ರಮಕ್ಕೆ ಆಗ್ರಹಿಸಿದ್ದರು.
#WATCH | Pratapgarh: A clash broke out b/w supporters of Congress leader Pramod Tiwari & BJP MP Sangam Lal Gupta at ‘Garib Kalyan Mela’ in Sangipur where both leaders were present. MP & his supporters were allegedly chased & beaten by Tiwari’s supporters
(Note: Abusive language) pic.twitter.com/Ra9e1HrxqH
— ANI UP (@ANINewsUP) September 25, 2021
ಇದಾದ ನಂತರ ಪ್ರತಾಪ್ಗಡ್ನ ಲಾಲ್ಗಂಜ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಮತ್ತು ಅವರ ಪುತ್ರಿ ಆರಾಧನಾ ಮಿಶ್ರ ಮತ್ತು ಅವರ 27 ಬೆಂಬಲಿಗರ ವಿರುದ್ಧ ಹತ್ಯೆ ಯತ್ನ ಪ್ರಕರಣದಡಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಬಿಜೆಪಿಗರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದ ಕೆಲವರು ಅಲ್ಲಿನ ವ್ಯವಸ್ಥೆಯಿಂದ ಕಿರಿಕಿರಿಗೊಂಡರು. ಅವ್ಯವಸ್ಥೆ ಬಗ್ಗೆ ಬಿಜೆಪಿ ಸಂಸದನನ್ನು ಪ್ರಶ್ನಿಸಿದರು. ಆದರೆ ಸರಿಯಾಗಿ ಉತ್ತರ ಬಾರದೆ ಇದ್ದಾಗ ಸಿಟ್ಟಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ದೇಸಾಯಿವಾಡೆ: ಶಂಕರ್ ನಾಗ್ ಅವರ ಜೋಕುಮಾರ ಸ್ವಾಮಿ ಚಿತ್ರ ಶೂಟಿಂಗ್ ನಡೆದದ್ದು ಇಲ್ಲೇ
ಸೈಬೀರಿಯಾ ಕಾಡಿನಲ್ಲಿ ರಷ್ಯಾ ಅಧ್ಯಕ್ಷ; ಮೀನು ಹಿಡಿದು, ಗುಡ್ಡ ಹತ್ತಿದ ವ್ಲಾದಿಮಿರ್ ಪುತಿನ್
(BJP MP Sangam Lal Gupta attacked by public in Pratapgarh Of Uttar Pradesh)
Published On - 5:28 pm, Sun, 26 September 21