Viral Video: ಫುಟ್​ಪಾತ್​ನಲ್ಲಿ ಕುಳಿತು ಚಮ್ಮಾರನ ಶೂಗೆ ಪಾಲಿಶ್ ಮಾಡಿದ ಬಿಜೆಪಿ ಸಂಸದ

| Updated By: ಸುಷ್ಮಾ ಚಕ್ರೆ

Updated on: Feb 17, 2022 | 6:22 PM

ಹುಟ್ಟಿನಿಂದ ಯಾವುದೇ ವ್ಯಕ್ತಿ ದೊಡ್ಡವನಲ್ಲ, ಯಾರೂ ಸಣ್ಣವರೂ ಅಲ್ಲ. ಆತ ಮಾಡುವ ಕೆಲಸಗಳು ಆತನ ದೊಡ್ಡತನ ಮತ್ತು ಸಣ್ಣತನವನ್ನು ನಿರ್ಧರಿಸುತ್ತದೆ. ಹೀಗಾಗಿ ನಾನು ಚಮ್ಮಾರನ ಶೂ ಪಾಲಿಶ್ ಮಾಡಿದ್ದೇನೆ ಎಂದು ಬಿಜೆಪಿ ಸಂಸದ ಸುಮೆರ್ ಸಿಂಗ್ ಸೋಲಂಕಿ ಹೇಳಿದ್ದಾರೆ.

Viral Video: ಫುಟ್​ಪಾತ್​ನಲ್ಲಿ ಕುಳಿತು ಚಮ್ಮಾರನ ಶೂಗೆ ಪಾಲಿಶ್ ಮಾಡಿದ ಬಿಜೆಪಿ ಸಂಸದ
ಬಿಜೆಪಿ ಸುಮೆರ್ ಸಿಂಗ್ ಸೋಲಂಕಿ
Follow us on

ಬರ್ವಾನಿ: ರವಿದಾಸ್ ಜಯಂತಿಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಸಂಸದ ಸುಮೆರ್ ಸಿಂಗ್ ಸೋಲಂಕಿ (Sumer Singh Solanki) ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಚಮ್ಮಾರನ ಶೂಗಳಿಗೆ ಪಾಲಿಶ್ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ (Photos Viral) ಆಗಿವೆ.ಬಿಜೆಪಿ ಸಂಸದ ಸುಮೆರ್ ಸಿಂಗ್ ಸೋಲಂಕಿ ಅವರೇ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹುಟ್ಟಿನಿಂದ ಯಾವುದೇ ವ್ಯಕ್ತಿ ದೊಡ್ಡವನಲ್ಲ, ಯಾರೂ ಸಣ್ಣವರೂ ಅಲ್ಲ. ಆತ ಮಾಡುವ ಕೆಲಸಗಳು ಆತನ ದೊಡ್ಡತನ ಮತ್ತು ಸಣ್ಣತನವನ್ನು ನಿರ್ಧರಿಸುತ್ತದೆ. ಇಂದು ಸಂತ ಶಿರೋಮಣಿ ರವಿದಾಸ್ ಜಯಂತಿಯ (Ravidas Jayanti) ಶುಭ ಸಂದರ್ಭದಲ್ಲಿ ಬರ್ವಾನಿ ನಗರದ ಫುಟ್ ಪಾತ್ ಮೇಲೆ ಶೂ ಪಾಲಿಶ್ ಮಾಡಲು ಕುಳಿತಿದ್ದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಂಸದರು 25 ವರ್ಷಗಳ ಹಿಂದೆ ನಾನು ಇಲ್ಲಿ ಓದುವಾಗ ನನ್ನ ಚಪ್ಪಲಿ ಕಿತ್ತು ಹೋಗುತ್ತಲೇ ಇರುತ್ತಿತ್ತು. ಅವುಗಳನ್ನು ರಿಪೇರಿ ಮಾಡಲು ಇಲ್ಲಿಗೆ ಬರುತ್ತಿದ್ದೆ. ಇಂದು ನಾನು ಚಮ್ಮಾರನಿಗೆ ಭಗವದ್ಗೀತೆಯನ್ನು ನೀಡಿ, ಅವರ ಶೂಗಳನ್ನು ಪಾಲಿಶ್ ಮಾಡಿದೆ. ಅವರಿಗೆ ಸಂತ ರವಿದಾಸರ ಫೋಟೋವನ್ನೂ ನೀಡಿದ್ದೇನೆ ಎಂದು ಬಿಜೆಪಿ ಸಂಸದ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಬಿಜೆಪಿ ಸಂಸದ ಚಮ್ಮಾರನ ಶೂ ಪಾಲಿಶ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಮತ್ತು ವಿಡಿಯೋವನ್ನು ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಲೋಕೇಂದ್ರ ಪರಾಶರ ಅವರು ಕೂಡ ಶೇರ್ ಮಾಡಿದ್ದು, ಫುಟ್​ಪಾತ್​ನಲ್ಲಿ ಕುಳಿತು ಚಮ್ಮಾರನ ಶೂ ಪಾಲಿಶ್ ಮಾಡಿದ ಬಿಜೆಪಿ ಸಂಸದ ಸುಮೆರ್ ಸಿಂಗ್ ಅವರ ಈ ಕಾರ್ಯ ಮಾದರಿಯಾದುದು ಎಂದಿದ್ದಾರೆ.

ಇದನ್ನೂ ಓದಿ: ಹಿಜಾಬ್ ಅಗತ್ಯವಿಲ್ಲ, ಸಾರ್ವಜನಿಕವಾಗಿ ಹಿಜಾಬ್ ಧರಿಸುವುದನ್ನು ಸಹಿಸುವುದಿಲ್ಲ: ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್

Viral Video: ಹಳ್ಳಿಯ ದಾರಿಯಲ್ಲಿ ಬೈಕ್​ನಲ್ಲಿ ಹೋಗುವಾಗ ದಿಢೀರೆಂದು ಎದುರು ಬಂದ ಸಿಂಹಿಣಿ; ಶಾಕಿಂಗ್ ವಿಡಿಯೋ ಇಲ್ಲಿದೆ