ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಚಿವ, ಜಾಟ್ ನಾಯಕ ಭೂಪೇಂದ್ರ ಸಿಂಗ್ ಚೌಧರಿ ನೇಮಕ

| Updated By: ರಶ್ಮಿ ಕಲ್ಲಕಟ್ಟ

Updated on: Aug 25, 2022 | 3:54 PM

ಚೌಧರಿ ಅವರು ಪಶ್ಚಿಮ ಯುಪಿಯ ಜಾಟ್ ಸಮುದಾಯದವರಾಗಿದ್ದು, 2024ರ ಲೋಕಸಭೆ ಚುನಾವಣೆಗೆ ಜಾಟ್ ಮತಗಳನ್ನು ಕ್ರೋಢೀಕರಿಸಲು ಅವರನ್ನು ನೇಮಿಸಲಾಗಿದೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಚಿವ, ಜಾಟ್ ನಾಯಕ ಭೂಪೇಂದ್ರ ಸಿಂಗ್ ಚೌಧರಿ ನೇಮಕ
ಭೂಪೇಂದ್ರ ಸಿಂಗ್ ಚೌಧರಿ ನ
Follow us on

ದೆಹಲಿ: ಬಿಜೆಪಿ ಇಂದು ವಿವಿಧ ರಾಜ್ಯಗಳಲ್ಲಿ ಹಲವು ಉನ್ನತ ಮಟ್ಟದ ನೇಮಕಾತಿಗಳನ್ನು ಪ್ರಕಟಿಸಿದೆ. ಈ ಪೈಕಿ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವ ಮತ್ತು ವಿಧಾನ ಪರಿಷತ್ತಿನ ಸದಸ್ಯರಾಗಿರುವ ಭೂಪೇಂದ್ರ ಸಿಂಗ್ ಚೌಧರಿ (Bhupendra Singh Chaudhary) ಅವರನ್ನು ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಚೌಧರಿ ಅವರು ಪಶ್ಚಿಮ ಯುಪಿಯ ಜಾಟ್ ಸಮುದಾಯದವರಾಗಿದ್ದು, 2024ರ ಲೋಕಸಭೆ ಚುನಾವಣೆಗೆ ಜಾಟ್ ಮತಗಳನ್ನು ಕ್ರೋಢೀಕರಿಸಲು ಅವರನ್ನು ನೇಮಿಸಲಾಗಿದೆ ಎಂದು ವರದಿಯಾಗಿದೆ. ದಕ್ಷಿಣ ಯುಪಿ ಒಬಿಸಿ ನಾಯಕ ಸ್ವತಂತ್ರ ದೇವ್ ಸಿಂಗ್ ಅವರ ಸ್ಥಾನಕ್ಕೆ ಈಗ ರಾಜ್ಯ ಕ್ಯಾಬಿನೆಟ್‌ನಲ್ಲಿ ಪಂಚಾಯತ್ ರಾಜ್ ಸಚಿವರಾದ ಭೂಪೇಂದ್ರ ಸಿಂಗ್ ಚೌಧರಿ ಅವರನ್ನು ನೇಮಕ ಮಾಡಲಾಗಿದೆ.

ತ್ರಿಪುರಾ ಬಿಜೆಪಿ ಅಧ್ಯಕ್ಷರಾಗಿ ರಾಜೀವ್ ಭಟ್ಟಾಚಾರ್ಯ ಅವರನ್ನು ನೇಮಕ ಮಾಡಲಾಗಿದ್ದು, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸೌದನ್ ಸಿಂಗ್ ಅವರನ್ನು ಹಿಮಾಚಲ ಪ್ರದೇಶದ ಚುನಾವಣಾ ಉಸ್ತುವಾರಿಯನ್ನಾಗಿ ಮಾಡಲಾಗಿದೆ.

ದೇವೇಂದ್ರ ಸಿಂಗ್ ರಾಣಾ ಅವರನ್ನು ಹಿಮಾಚಲ ಪ್ರದೇಶದ ಜಂಟಿ ಚುನಾವಣಾ ಉಸ್ತುವಾರಿಯಾಗಿ ನೇಮಿಸಲಾಗಿದೆ.

 

Published On - 3:44 pm, Thu, 25 August 22