Watch ಮಧ್ಯಪ್ರದೇಶದ ಪ್ರವಾಹ ಪೀಡಿತ ಪ್ರದೇಶದಲ್ಲಿ ಗರ್ಭಿಣಿಯನ್ನು ಜೆಸಿಬಿಯಲ್ಲಿ ಕೂರಿಸಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದ ಜನರು
ಭಾರೀ ಮಳೆಯಿಂದಾಗಿ ರೆಡ್ ಅಲರ್ಟ್ ಘೋಷಿಸಲಾಗಿರುವ ಮಧ್ಯಪ್ರದೇಶದ 39 ಜಿಲ್ಲೆಗಳ ಪೈಕಿ ನೀಮುಚ್ ಜಿಲ್ಲೆಯ ರಾವತ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಭೋಪಾಲ್: ಮಧ್ಯಪ್ರದೇಶದ (Madhya Pradesh) ನೀಮಾಚ್ ಜಿಲ್ಲೆಯಲ್ಲಿ ಭಾರೀ ಪ್ರವಾಹದಿಂದಾಗಿ ಆಂಬ್ಯುಲೆನ್ಸ್ ಮನೆಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಗರ್ಭಿಣಿಯೊಬ್ಬರನ್ನು ಜೆಸಿಬಿ ಯಂತ್ರದಲ್ಲಿ ಕೂರಿಸಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸ್ಥಳೀಯ ಆಡಳಿತ ಹಾಗೂ ಪೊಲೀಸರು ಜೆಸಿಬಿ ಯಂತ್ರದ ವ್ಯವಸ್ಥೆ ಮಾಡಿದ್ದರು. ಭಾರೀ ಮಳೆಯಿಂದಾಗಿ ರೆಡ್ ಅಲರ್ಟ್ ಘೋಷಿಸಲಾಗಿರುವ ಮಧ್ಯಪ್ರದೇಶದ 39 ಜಿಲ್ಲೆಗಳ ಪೈಕಿ ನೀಮುಚ್ ಜಿಲ್ಲೆಯ ರಾವತ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ರೇವಾ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ. ಮಳೆಯಿಂದ ರಸ್ತೆ ಹಾಳಾಗಿದ್ದರಿಂದ ಆರೋಗ್ಯ ಕೇಂದ್ರ ತಲುಪಲು ತಡವಾದ ಕಾರಣ ಮಹಿಳೆ ಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.
नीमच के बेसदा की रहने वाली गीता बाई प्रसव पीड़ा में पुलिया पर पानी होने की वजह से एंबुलेंस नदी के दूसरे पार नही जा सकी ऐसे में उन्हें जेसीबी में बिठाकर सुरक्षित नदी पार कराई गई, किनारे पहुंचने पर उन्हें एंबुलेंस से मनासा सरकारी अस्पताल भेजा गया @ndtv @ndtvindia pic.twitter.com/IJw91C2Yya
— Anurag Dwary (@Anurag_Dwary) August 25, 2022
ಕಳೆದ ಎರಡು ದಿನಗಳಲ್ಲಿ 4,300 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 2,100 ಜನರನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ರಕ್ಷಿಸಲಾಗಿದೆ.
ಭೋಪಾಲ್ ಸೇರಿದಂತೆ ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ರಾಜಧಾನಿ ಮತ್ತು ಇತರ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ರಾಜಸ್ಥಾನದ ಗಡಿಯಲ್ಲಿರುವ ನೀಮುಚ್, ಮಂದಸೌರ್ ಮತ್ತು ರತ್ಲಾಮ್‌ನಲ್ಲಿ ಕಡಿಮೆ ತೀವ್ರತೆಯೊಂದಿಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ಹವಾಮಾನಶಾಸ್ತ್ರಜ್ಞರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.