ಹೂಡಿದ ಹಣಕ್ಕೆ ಭಾರೀ ರಿಟರ್ನ್ಸ್ ಭರವಸೆ ನೀಡಿ ಜನರನ್ನು ವಂಚಿಸುತ್ತಿದ್ದ ದೆಹಲಿಯ ‘ಮಿ ನಟವರಲಾಲ್’ ಹಾಗೂ ಅವನ ಪತ್ನಿ ಪೊಲೀಸ್ ಬಲೆಗೆ

ಪೊಲೀಸರ ವಿಚಾರಣೆ ವೇಳೆ ದೆಹಲಿ ಮತ್ತು ರಾಜಸ್ತಾನದಲ್ಲಿ ತಾನು ಮನಾಲಿ ಟೂರ್ಸ್ ಅಂಡ್ ಟ್ರಾವೆಲ್ಸ್ ಮತ್ತು ಸಬ್ಸಿಡಿ ಪ್ರೊಗ್ರಾಮ್ಸ್ ಮತ್ತು ರಾಷ್ಟ್ರೀಯ ಶಿಕ್ಷಾ ಮಿಷನ್ ಹೆಸರಲ್ಲಿ ಜನರನ್ನು ವಂಚಿಸಿದ್ದಾಗಿ ಮಿ ನಟವರಲಾಲ್ ಒಪ್ಪಿಕೊಂಡ.

ಹೂಡಿದ ಹಣಕ್ಕೆ ಭಾರೀ ರಿಟರ್ನ್ಸ್ ಭರವಸೆ ನೀಡಿ ಜನರನ್ನು ವಂಚಿಸುತ್ತಿದ್ದ ದೆಹಲಿಯ ‘ಮಿ ನಟವರಲಾಲ್’ ಹಾಗೂ ಅವನ ಪತ್ನಿ ಪೊಲೀಸ್ ಬಲೆಗೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 25, 2022 | 2:40 PM

ನವದೆಹಲಿ: ನಕಲಿ ಟೂರ್ ಮತ್ತು ಟ್ರ್ಯಾವೆಲ್ ಏಜೆನ್ಸಿಯೊಂದರ ಮೂಲಕ ಜನರಿಗೆ ಕೋಟಿಗಟ್ಟಲೆ ಹಣ ವಂಚಿಸಿದ ಅರೋಪದಲ್ಲಿ ದಂಪತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು 52-ವರ್ಷ-ವಯಸ್ಸಿನ ಸತ್ಯ ಪ್ರಕಾಶ ಭಾರದ್ವಾಜ್ ಮತ್ತು ಸುಮನ್ ಆರ್ಯ ಎಂದು ಗುರುತಿಸಲಾಗಿದೆ. ತಾನು ವಾಸಮಾಡುತ್ತಿದ್ದ ಪ್ರದೇಶದಲ್ಲಿ ಭಾರದ್ವಾಜ್ ‘ಮಿ ನಟವರಲಾಲ’ ಅಂತಲೇ ಜನಪ್ರಿಯನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹಲವಾರು ಜನರನ್ನು ವಂಚಿಸಿರುವ ಆರೋಪದಲ್ಲಿ ದೆಹಲಿಯ ಆರ್ಥಿಕ ಆಪರಾಧಗಳ ವಿಭಾಗ ದಂಪತಿಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಪೊಲೀಸ ವರದಿ ಮಾಡಿದೆ.

ಭಾರದ್ವಾಜ್ ಮತ್ತು ಸುಮನ್ 2018ರಲ್ಲಿ ತಮ್ಮ ಮಕ್ಕಳೊಂದಿಗೆ ದೆಹಲಿಯಿಂದ ಪರಾರಿಯಾಗಿದ್ದರು. ಅವರ ಬಗ್ಗೆ ಸುಳಿವು ನೀಡಿದವರಿಗೆ ರೂ. 25,000 ಗಳ ಬಹುಮಾನವನ್ನು ದೆಹಲಿ ಪೊಲೀಸ್ ಘೋಷಿಸಿತ್ತು.

ಅವರು ರಾಜಸ್ತಾನದ ಜೈಪುರ ಬಳಿ ವಾಸವಾಗಿರುವುದನ್ನು ಅಪರಾಧ ದಳದ ಅಧಿಕಾರಿಗಳು ಏಪ್ರಿಲ್ 2022 ಪತ್ತೆ ಮಾಡಿದ್ದರು.

ಸ್ಥಳೀಯರಿಂದ ಅವರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಸಂಗ್ರಹಿದ ಮೇಲೆ ಮತ್ತು ರಾಜಸ್ತಾನದಲ್ಲೂ ದಂಪತಿ ಜನರನ್ನು ವಂಚಿಸುತ್ತಿರುರವ ಬಗ್ಗೆ ವಿವರಗಳು ಲಭ್ಯವಾದ ಬಳಿಕ ಪೊಲೀಸರು ಅವರು ವಾಸವಾಗಿದ್ದ ಮನೆಯ ಮೇಲೆ ದಾಳಿ ನಡೆಸಿದರು. ಅದಾದ ನಂತರ ಚಾಂದ್ವಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಯಿತು.

ಆದರೆ ಏಪ್ರಿಲ್ 2022 ರಲ್ಲಿ ದಂಪತಿ ಜೈಪುರನಿಂದಲೂ ಪರಾರಿಯಾದರು. ಪೊಲೀಸ್ ತಂಡ ನಿಖರವಾದ ಸುಳಿವಿನ ಮೇರೆಗೆ ಉತ್ತರ ಪ್ರದೇಶ ಪಶ್ಚಿಮ ಭಾಗದಲ್ಲಿ ಶೋಧನೆಗೆ ತೊಡಗಿತು. ಅದೇ ರಾಜ್ಯದ ಗರ್ಹ್ ಮುಕ್ತೇಶ್ವರಲ್ಲಿ ಅವರ ವಾಸವಾಗಿರೋದು ಪತ್ತೆಯಾದಾಗ ಪೊಲೀಸರು ನಿರಾಳರಾದರು.

ಪೊಲೀಸ್ ತಂಡ ಕೂಡಲೇ ಗರ್ಹ್ ಮುಕ್ತೇಶ್ವರಗೆ ಧಾವಿಸಿತಾದರೂ ಮಿಸ್ಟರ್ ನಟವರಲಾಲ ಅಲ್ಲಿಂದಲೂ ಪರಾರಿಯಾಗುವಲ್ಲಿ ಯಶ ಕಂಡ.

ಸುಮಾರು 180 ಕಿಮೀಗಳವರೆಗೆ ಅವನನ್ನು ಬೆನ್ನಟ್ಟಿದ ಪೊಲೀಸರು ಅಂತಿಮವಾಗಿ ದೆಹಲಿ ಕ್ಯಾಂಟ್ ರೇಲ್ವೇ ಸ್ಟೇಶನ್ ನಲ್ಲಿ ಬಂಧಿಸಿದರು. ಅಗಲೂ ಟ್ರೈನ್ ಒಂದರ ಮೂಲಕ ಪರಾರಿಯಾಗುವ ಪ್ರಯತ್ನ ನಡೆಸುತ್ತಿದ್ದ.

ಏತನ್ಮಧ್ಯೆ, ಮಿ ನಟವರಲಾಲ್ ಪತ್ನಿ ಸುಮನ್ ಳನ್ನು ಗರ್ಹ್ ಮುಕ್ತೇಶ್ವರನ ಉಪಾಧ್ಯಾಯ ಕಾಲೊನಿಯಲ್ಲಿ ಇರುವುದನ್ನು ಪತ್ತೆ ಮಾಡಿ ಪೊಲೀಸರು ಮಂಗಳವಾರ ಆಕೆಯನ್ನು ಬಂಧಿಸಿದರು.

ಪೊಲೀಸರ ವಿಚಾರಣೆ ವೇಳೆ ದೆಹಲಿ ಮತ್ತು ರಾಜಸ್ತಾನದಲ್ಲಿ ತಾನು ಮನಾಲಿ ಟೂರ್ಸ್ ಅಂಡ್ ಟ್ರಾವೆಲ್ಸ್ ಮತ್ತು ಸಬ್ಸಿಡಿ ಪ್ರೊಗ್ರಾಮ್ಸ್ ಮತ್ತು ರಾಷ್ಟ್ರೀಯ ಶಿಕ್ಷಾ ಮಿಷನ್ ಹೆಸರಲ್ಲಿ ಜನರನ್ನು ವಂಚಿಸಿದ್ದಾಗಿ ಮಿ ನಟವರಲಾಲ್ ಒಪ್ಪಿಕೊಂಡ.

ಅವನ ಹೆಂಡತಿ ಸುಮನ್ ಸಹ ಪತಿಯ ಜೊತೆ ಸೇರಿ ಜನರನ್ನು ವಂಚಿಸಿದ್ದಾಗಿ ಹೇಳಿಕೊಂಡಳು.

2017 ರಲ್ಲಿ ಮಿ ನಟವರಲಾಲ್ ವಿಂಗ್ಸ್ ಟು ಡ್ರೀಮ್ಸ್ ಹೆಸರಲ್ಲಿ ಒಂದು ಶಿಶುವಿಹಾರ ಮತ್ತು ವೈಟಲ್ ವೆಲ್ಫೇರ್ ಟೂರ್ ಅಂಡ್ ಟ್ರಾವೆಲ್ಸ್ ಏಜೆನ್ಸಿ ಆರಂಭಿಸಿ ಅದರಲ್ಲಿ ಹಣ ಹೂಡಿವರನ್ನು ವಂಚಿಸಲಾರಂಭಿಸಿದ. ಹೇರಳವಾಗಿ ಹಣ ಸಂಗ್ರಹಿಸಿಕೊಂಡ ನಂತರ ದೆಹಲಿಯಿಂದ ರಾಜಸ್ತಾನಕ್ಕೆ ಪರಾರಿಯಾದ.

ರಾಜಸ್ತಾನದಲ್ಲಿ 2020ರಲ್ಲಿ ವಿಂಗ್ಸ್ ಟು ಲೈಫ್ ಏಜೆನ್ಸಿ ಆರಂಭಿಸಿದ ಮಿ ನಟವರಲಾಲ್, ಇ-ರಿಕ್ಷಾ, ಸೋಲಾರ್ ಪ್ಯಾನೆಲ್ಸ್ ಮೊದಲಾದವುಗಳ ಮೇಲೆ ಸಬ್ಸಿಡಿ ಕೊಡಿಸುವುದಾಗಿ ಜನರನ್ನು ನಂಬಿಸಿ ರೂ. 25 ಲಕ್ಷ ಬುಟ್ಟಿಗೆ ಹಾಕಿಕೊಂಡಿದ್ದ. ಅಲ್ಲೂ ಅವನ ವಿರುದ್ಧ ಕೇಸ್ ದಾಖಲಾಗಿತ್ತು.

ಅದಾದ ಮೇಲೆ ಅವನು ಉದ್ದೇಶಪೂರ್ವಕವಾಗಿ ಒಂದೇ ಕಡೆ ವಾಸವಾಗದೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತನ್ನ ಗುರುತನ್ನು ಮರೆಮಾಚಿ ಅಲೆದಾಡುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ.

ತಾವು ಹೂಡಿದ ಹಣಕ್ಕೆ ಭಾರಿ ರಿಟರ್ನ್ಸ್ ಮತ್ತು ಆಕರ್ಷಕ ಸ್ಕೀಮ್ ಗಳನ್ನು ಒದಗಿಸುವ ಭರವಸೆ ನೀಡಿ ಅಮಾಯಕರನ್ನು ಮಿ ನಟವರಲಾಲ್ ಮತ್ತು ಸುಮನ ಸೆಳೆಯುತ್ತಿದ್ದರು ಮತ್ತು ಹೊಸ ಗ್ರಾಹಕರನ್ನು ಪರಿಚಯಿಸಿದವರಿಗೆ ಬೆಲೆಬಾಳುವ ಉಡುಗೊರೆಗಳನ್ನು ನೀಡುತ್ತಿದ್ದರು.

ದೊಡ್ಡ ಮೊತ್ತದ ಹಣ ಸಂಗ್ರಹವಾದ ಕೂಡಲೇ ದಂಪತಿ ತಮ್ಮ ಆಫೀಸನ್ನು ಮುಚ್ಚಿ ಅಲ್ಲಿಂದ ಪರಾರಿಯಾಗುತ್ತಿದ್ದರು.

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು