AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಾಂಕಾ ಗಾಂಧಿ ಮಗ ರೆಹಾನ್ ವಾದ್ರಾ ವಿವಾದದಲ್ಲಿ ರಾಹುಲ್ ಗಾಂಧಿಯ ಮೌನವೇಕೆ?; ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೆಹಾನ್ ವಾದ್ರಾ ಅವರ ಫೋಟೋ ಪ್ರದರ್ಶನದ ವಿವಾದದ ಬೆನ್ನಲ್ಲೇ, ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ಬಿಜೆಪಿ ವಾಗ್ದಾಳಿ ನಡೆಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ವಿಷಯದಲ್ಲಿ ಸಂಪೂರ್ಣ ಮೌನ ವಹಿಸಿರುವುದನ್ನು ಬಿಜೆಪಿ ಪ್ರಶ್ನಿಸಿದ್ದು, "ಕಾಂಗ್ರೆಸ್‌ನಲ್ಲಿ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದು ಆರೋಪಿಸಿದೆ. ರೆಹಾನ್ ವಾದ್ರಾ ಅವರ ಫೋಟೋ ಪ್ರದರ್ಶನ ರದ್ದಾದ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದರೂ ರಾಹುಲ್ ಗಾಂಧಿ ಮಾತ್ರ ಮೌನವಾಗಿರುವುದು ಹಲವು ಪ್ರಶ್ನೆ ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ.

ಪ್ರಿಯಾಂಕಾ ಗಾಂಧಿ ಮಗ ರೆಹಾನ್ ವಾದ್ರಾ ವಿವಾದದಲ್ಲಿ ರಾಹುಲ್ ಗಾಂಧಿಯ ಮೌನವೇಕೆ?; ಬಿಜೆಪಿ ಪ್ರಶ್ನೆ
ಪ್ರಿಯಾಂಕಾ ಗಾಂಧಿ - ರಾಹುಲ್ ಗಾಂಧಿImage Credit source: PTI
ಸುಷ್ಮಾ ಚಕ್ರೆ
|

Updated on: Oct 23, 2026 | 6:34 PM

Share

ನವದೆಹಲಿ, ಅಕ್ಟೋಬರ್ 23: ನವದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೆಹಾನ್ ವಾದ್ರಾ ಅವರ ಛಾಯಾಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಗಾಂಧಿ ಕುಟುಂಬದ ಒಡಹುಟ್ಟಿದವರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಕಾನೇರ್ ಹೌಸ್ ಆಡಳಿತ ಮಂಡಳಿಯು ರೆಹಾನ್ ವಾದ್ರಾ ಅವರಿಗೆ ನೀಡಿದ್ದ ನೋಟಿಸ್ ಅನ್ನು ಉಲ್ಲೇಖಿಸಿ ಮಾಧ್ಯಮ ವಕ್ತಾರ ಪ್ರದೀಪ್ ಭಂಡಾರಿ ಈ ಆರೋಪ ಮಾಡಿದ್ದಾರೆ. “ವಿಯೆಟ್ನಾಂನಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಯೊಂದು ವಿಷಯಕ್ಕೂ ಟ್ವೀಟ್ ಮಾಡುತ್ತಾರೆ, ಆದರೆ ತಮ್ಮ ಅಳಿಯ ರೆಹಾನ್ ವಾದ್ರಾ ಪರವಾಗಿ ಇದುವರೆಗೆ ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ ಏಕೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದ್ದು, “ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ದೇಶದ ಪ್ರತಿಯೊಂದು ವಿಷಯಕ್ಕೂ ಟ್ವೀಟ್ ಮಾಡಿ ಪ್ರತಿಕ್ರಿಯಿಸುತ್ತಾರೆ. ಆದರೆ ತಮ್ಮ ಸ್ವಂತ ತಂಗಿಯ ಮಗ ರೆಹಾನ್ ವಾದ್ರಾ ಪರವಾಗಿ ಇದುವರೆಗೆ ಒಂದೇ ಒಂದು ಬೆಂಬಲದ ಟ್ವೀಟ್ ಅಥವಾ ಹೇಳಿಕೆ ನೀಡಿಲ್ಲವೇಕೆ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ನಾನೇನೂ ಟ್ರಾವೆಲ್ ಏಜೆಂಟ್ ಅಲ್ಲ’; ರಾಹುಲ್ ಗಾಂಧಿಯ ವಿಯೆಟ್ನಾಂ ಪ್ರವಾಸದ ಪ್ರಶ್ನೆಗೆ ಶಶಿ ತರೂರ್ ಖಡಕ್ ಉತ್ತರ

ಈ ವಿವಾದವನ್ನು ಸೃಷ್ಟಿಸುವ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಮಗ ರೆಹಾನ್‌ನನ್ನು ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ‘ಸಾಫ್ಟ್ ಲಾಂಚ್’ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಅವರಿಗೆ ಇದರಲ್ಲಿ ಆಸಕ್ತಿ ಇಲ್ಲದಿರುವುದು ಇಬ್ಬರ ನಡುವಿನ ಭಿನ್ನಾಭಿಪ್ರಾಯವನ್ನು ತೋರಿಸುತ್ತದೆ ಎಂದು ಬಿಜೆಪಿ ಹೇಳಿದೆ.

ಗಾಂಧಿ ಕುಟುಂಬದ ಒಡಹುಟ್ಟಿದವರ ನಡುವೆ ರಾಜಕೀಯ ಅಧಿಕಾರ ಹಾಗೂ ನಾಯಕತ್ವಕ್ಕೆ ಸಂಬಂಧಿಸಿದಂತೆ ಸಂಚು ಮತ್ತು ಗೊಂದಲಗಳು ಉಂಟಾಗಿವೆ. ಪ್ರಿಯಾಂಕಾ ಅವರಿಗೆ ರಾಹುಲ್ ಗಾಂಧಿಯ ರಾಜಕೀಯ ಕಾರ್ಯವೈಖರಿಯ ಮೇಲಿದ್ದ ಭರವಸೆ ಕಳೆದುಹೋಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇದನ್ನೂ ಓದಿ: ‘ತುಂಬಾ ಸುಸ್ತಾಗಿದೆಯಾ?’; ಎಸ್‌ಐಆರ್ ಪ್ರತಿಭಟನೆ ನಡುವೆ ವಿಯೆಟ್ನಾಮ್​ಗೆ ಹೊರಟ ರಾಹುಲ್ ಗಾಂಧಿಗೆ ಬಿಜೆಪಿ ಲೇವಡಿ

ರೆಹಾನ್ ವಾದ್ರಾ ವಿವಾದವೇನು?:

ನವದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ‘ನೋ ಐಡಿಯಾ ಈಸ್ ಫೈನಲ್’ ಶೀರ್ಷಿಕೆಯಡಿ ರೆಹಾನ್ ವಾದ್ರಾ ಅವರು ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ್ದರು. ಆರಂಭದಲ್ಲಿ ಪ್ರಕೃತಿ, ವನ್ಯಜೀವಿ ಹಾಗೂ ಕಲಾಕೃತಿಗಳಿಗೆ ಸಂಬಂಧಿಸಿದ ಫೋಟೋಗಳನ್ನು ಪ್ರದರ್ಶಿಸುವುದಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಪ್ರದರ್ಶನದ ಸಮಯದಲ್ಲಿ ರಾಷ್ಟ್ರಧ್ವಜ ಹಾಗೂ ದೆಹಲಿ ಪ್ರತಿಭಟನೆಗಳಿಗೆ ಸಂಬಂಧಿಸಿದ ರಾಜಕೀಯ ವಿಷಯಗಳ 70ಕ್ಕೂ ಹೆಚ್ಚು ಫೋಟೋಗಳನ್ನು ಸೇರಿಸಲಾಗಿತ್ತು. ಸಂಸ್ಥೆಯ ನೀತಿ-ನಿಯಮಗಳಿಗೆ ಬದ್ಧವಾಗಿರದ ಕಾರಣ ಆ ಫೋಟೋಗಳನ್ನು ತೆರವುಗೊಳಿಸುವಂತೆ ಬಿಕಾನೇರ್ ಹೌಸ್ ಆಡಳಿತ ಮಂಡಳಿ ಸೂಚಿಸಿತು. ಇದನ್ನು ರೆಹಾನ್ ವಾದ್ರಾ ಇನ್‌ಸ್ಟಾಗ್ರಾಮ್‌ನಲ್ಲಿ ವಿರೋಧಿಸಿ ಆಡಳಿತ ಮಂಡಳಿಯ ವಿರುದ್ಧ ಕಳವಳ ವ್ಯಕ್ತಪಡಿಸಿದ್ದರು. ಈ ಇಡೀ ಘಟನಾವಳಿಗಳನ್ನು ಬಳಸಿಕೊಂಡು ಬಿಜೆಪಿ ಇದೀಗ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More